ಮಾಣಿ: ಮಾಣಿ ಯುವಕ ಮಂಡಲದ ಸದಸ್ಯರು ದೀಪಾವಳಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದರು, ತಾವು ದಿನ ನಿತ್ಯ ಕಬಡ್ಡಿ ಆಟ ಆಡುವ ಕಬಡ್ಡಿ ಅಂಕಣವನ್ನು ದೀಪದಿಂದ ಅಲಂಕರಿಸಿ ಕಬಡ್ಡಿ ಅಂಕಣಕ್ಕೆ ಪೂಜೆ ಮಾಡಿ ಪಟಾಕಿ ಸಿಡಿಸಿ ವಿಜೃಂಭಿಸಿದರು.
ಮಾಣಿ ಯುವಕ ಮಂಡಲ ಎಲ್ಲಾ ಕ್ಷೇತ್ರದಲ್ಲೂ ಮಿಂಚುತ್ತಿದ್ದು ಹತ್ತು ಹಲವು ಸಾಮಾಜಿಕ ಸೇವೆ ಸಾಂಸ್ಕೃತಿಕ , ಧಾರ್ಮಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮಿಂಚುತ್ತಿದೆ, ಈ ವಿನೂತನ ಶೈಲಿಯ ಕಾರ್ಯಕ್ರಮದಲ್ಲಿ ಮಾಣಿ ಯುವಕ ಮಂಡಲದ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಸದಸ್ಯರಾದ ಜಗದೀಶ್ ಪೂಜಾರಿ, ಮಜೀದ್ ಮಾಣಿ, ವಸಂತ್ ಶೆಟ್ಟಿ, ಸಂದೀಪ್, ಹರ್ಷಿತ್, ಧೀರಜ್, ಧನುಷ್, ಪ್ರಥ್ವಿಕ್, ಲಿಕಿತ್, ರಕ್ಷಣ್, ವಿಜಿತ್, ಅಕ್ಷತ್, ಅವಿನಾಶ್, ಅಕ್ಷಿತ್, ಮನೀಶ್, ವಿಶಾಲ್, ಶಿವಪ್ರಸಾದ್, ಆಶಿಷ್, ಅಕ್ಷಯ್ ಮುಂತಾದವರು ಉಪಸ್ಥಿತರಿದ್ದರು.