


ಬಂಟ್ವಾಳ: ಕೃಷಿಕರ ಸೇವೆಯ ಧ್ಯೇಯ ವನ್ನಿಟ್ಟುಕೊಂಡು 1962 ರಲ್ಲಿ ಸ್ಥಾಪನೆಯಾದ ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ 2018-19ಸಾಲಿನಲ್ಲಿ ವಿವಿಧ ಯೋಜನೆಯಡಿ 715.96 ಲಕ್ಷ ಸಾಲವನ್ನು ವಿತರಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದ್ದಾರೆ.
ಬುಧವಾರ ಬ್ಯಾಂಕಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಬ್ಯಾಂಕಿನಲ್ಲಿ 181.66 ಲಕ್ಷ ಪಾಲುಬಂಡವಾಳವಿದ್ದು,2019ರ ಮಾಚ್೯ ಅಂತ್ಯಕ್ಕೆ ಬ್ಯಾಂಕ್ 33.60 ಲಕ್ಷ ಕ್ಷೇಮ ನಿಧಿ , 120.40 ಲಕ್ಷ ಇತರ ನಿಧಿ ಹಾಗೂ 1637.17 ಲಕ್ಷ ಠೇವಣಿಯನ್ನು ಹೊಂದಿರುತ್ತದೆ ಎಂದರು. 2018-19 ರಲ್ಲಿ ನಬಾಡ್೯ ಯೋಜನೆಯಲ್ಲಿ 147 ಸದಸ್ಯರಿಗೆ 225.71 ಲಕ್ಷ ಕೃಷಿ ಸಾಲ,ಸ್ವಂತ ಬಂಡವಾಳದಲ್ಲಿ 71 ಸದಸದಯರಿಗೆ 77.52 ಲಕ್ಷ ಕೃಷಿಸಾಲ,230 ಸದಸ್ಯರಿಗೆ 412.73 ಲಕ್ಷ ಕೃಷಿಯೇತರ ಅಲ ಸೇರಿದಂತೆ ಒಟ್ಟು 490.25 ಲಕ್ಷ ಸಾಲ ವಿತರಿಸಲಾಗಿದೆ ಎಂದು ವಿವರಿಸಿದ ಅವರು,2019 ಎ.1 ರಿಂದ ಸೆಪ್ಟಂಬರ್ ಅಂತ್ಯಕ್ಕೆ 692.86 ಲಕ್ಷ ಠೇವಣಿ ಸಂಗ್ರಹಿಸಿ 126 ಸದಸ್ಯರಿಗೆ 172.95 ಲಕ್ಷ ಸಾಲ ವಿತರಿಸಲಾಗಿದೆ ಎಂದು ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದರು. ಕ.ರಾ.ಸ.ಕೃ ಮತ್ತು ಗ್ರಾ.ಅ.ಬ್ಯಾಂಕಿನಿಂದ ಪಡೆದ ಹೊರಬಾಕಿ 1379.40 ಲಕ್ಷ ಸಾಲವನ್ನು 2019 ರ ಮಾಚ್೯ ಅಂತ್ಯಕ್ಕೆ ಸಂಪೂರ್ಣವಾಗಿ ಮರುಪಾವತಿಸಲಾಗಿದ್ದು, 2018-19 ನೇ ಸಾಲಿನಲ್ಲಿ 584.75 ಲಕ್ಷ ಸಾಲದ ಪೈಕಿ 442.72 ಲಕ್ಷ ಸಾಲ ವಸೂಲಿ ಮಾಡಿ ಶೇ.75.71 ವಸೂಲಿ ಸಾಧನೆಗೈದ ಬಂಟ್ವಾಳ ಭೂ ಬ್ಯಾಂಕ್ ದ.ಕ.ಜಿಲ್ಲೆಯಲ್ಲಿಯೇ ವಸೂಲಾತಿಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ವಿವರಿಸಿದರು. ಶೇ.6.4 ಮತ್ತು 3 ಬಡ್ಡಿ ರಿಯಾಯಿತಿ ದರದಲ್ಲಿ ಪಡೆದ ಸಾಲವನ್ನು ಸದಸ್ಯರು ಸಕಾಲದಲ್ಲಿ ಮರುಪಾವತಿಸಿದ ಹಿನ್ನಲೆಯಲ್ಲಿ 2018-19 ನೇ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲೇ ಉತ್ತಮ ಸಾಧನೆಗೈದ ಬ್ಯಾಂಕ್ ಎಂಬ ಪ್ರಶಸ್ತಿಯನ್ನು ಪಡೆದಿದೆ.ಮುಂದಿನ ವರ್ಷ ಅಧಿಕ ಪ್ರಮಾಣದಲ್ಲಿ ಠೇವಣಿ ಸಂಗ್ರಹಿಸಿ ರೈತ ಸದಸ್ಯರಿಗೆ ವಿವಿಧ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರಲು ಯೋಚಿಸಲಾಗಿದೆ ಎಂದ ಸುದರ್ಶನ್ ಜೈನ್ ಕೃಷಿ ಆಧಾರಿತ ಮತ್ತು ಕೃಷೀಯೇತರ ಸಾಲ ಯೋಜನೆಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಸಾಲ ನೀಡುವ ಮೂಲಕ ಸದಸ್ಯರ ಕೃಷಿ ಅಭಿವೃದ್ದಿಗೆ ಶ್ರಮಿಸಲಾಗುವುದು,ಕೃಷಿಕರ ವಿವಿಧ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ,ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು. 2019-20 ರ ಸಾಲಿನಲ್ಲಿ 12 ಕೋ.ರೂ.ಸಾಲ ವಿತರಿಸುವ ಗುರಿಯನ್ನು ಹೊಂದಿದ್ದು,ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು,ಬ್ಯಾಂಕಿನ ಮೇಲ್ಚಾವಣಿಯಲ್ಲಿ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಬ್ಯಾಂಕನ್ನು ಸಂಪೂರ್ಣ ಹವಾನಿಯಂತ್ರಿತ ಬ್ಯಾಂಕ್ ಆಗಿ ಪರಿವರ್ತಿಸಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಸಂಜೀವ ಪೂಜಾರಿ,ನಿರ್ದೇಶಕರಾದ ಚಂದ್ರಪ್ರಕಾಶ್ ಶೆಟ್ಟಿ,ಹೊನ್ನಪ್ಪ ನಾಯ್ಕ,ಮುರಳೀಧರ ಶೆಟ್ಟಿ,ಪರಮೇಶ್ವರ ಎಂ.,ಚಂದ್ರಹಾಸ ಕರ್ಕೇರ,ಶಿವಪ್ಪ ಪೂಜಾರಿ,ಚಂದ್ರಶೇಖರ ಶೆಟ್ಟಿ,ರಾಜೇಶ್ ಕುಮಾರ್,ಪುಪ್ಪಾವತಿ,ಸುಜಾತ ರೈ,ವ್ಯವಸ್ಥಾಪಕ ಶೇಖರ ಎಂ. ಉಪಸ್ಥಿತರಿದ್ದರು


