ಬಂಟ್ವಾಳ: ಮಂಚಿ ಗ್ರಾಮದ ಕುಕ್ಕಾಜೆ ಪತ್ತುಮುಡಿ ಎಂಬಲ್ಲಿ ಜನವಸತಿ ಪ್ರದೇಶದಲ್ಲಿ ಹಲವು ದಿನಗಳಿಂದ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಮಂಗನನ್ನು ಬಂಟ್ವಾಳ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಲೆ ಬೀಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ .
ಕಳೆದ ಹಲವು ದಿನಗಳಂದ ಈ ಪರಿಸರದಲ್ಲಿ ಮಂಗನಿಂದ ಕಿರುಕುಳಕ್ಕೊಳಗಾದ ಸ್ಥಳೀಯ ರು ಬಂಟ್ವಾಳ ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಇತ್ತೀಚೆಗೆ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಮಂಗನ ಬಗ್ಗೆ ಮಕ್ಕಳ ಸಹಿತ ಸಾರ್ವಜನಿಕರು ಭಯಭೀತರಾಗಿದ್ದರು.
ಈ ಬಗ್ಗೆ ಕಾರ್ಯಪ್ರವೃತ್ತರಾದ ಬಂಟ್ವಾಳ ಅರಣ್ಯ ಇಲಾಖಾ ಅಧಿಕಾರಿಗಳು ಮಗನನ್ನು ಹಿಡಿಯಲು ಮುಂದಾದರು.

ವಲಯ ಅರಣ್ಯಾಧಿಕಾರಿ ಸುರೇಶ್ , ಉಪವಲಯ ಅರಣ್ಯಾಧಿಕಾರಿ ಯಶೋಧರ, ಅರಣ್ಯ ರಕ್ಷಕ ದಯಾನಂದ, ಜಿತೇಶ್, ಸಿಬ್ಬಂದಿ ಗಳಾದ ಪ್ರವೀಣ್ , ಯೋಗೀಶ್ ಹಾಗೂ ವಾಹನ ಚಾಲಕ ಜಯರಾಮ್ ಅವರು ಮಂಗನನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಇದಕ್ಕೆ ಸಹಕರಿಸಿದ ಮಂಚಿ ಗ್ರಾಮ ಪಂಚಾಯತ್ ಸದಸ್ಯರಾದ ಶಮಿಯುಲ್ಲಾ ಹಾಗೂ ಆಸಿಯಮ್ಮರವರಿಗೆ ಮತ್ತು ಬಂಟ್ವಾಳ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here