ವಿಟ್ಲ: ಕ್ರೀಡಾ ಪ್ರತಿಭೆಗಳನ್ನು ತಳಮಟ್ಟದಲ್ಲಿಯೇ ಗುರುತಿಸಿ ಬೆಂಬಲಿಸಿದಾಗ ದೇಶದ ಭವಿಷ್ಯದ ಕ್ರೀಡಾಪಟುಗಳಾಗಿ ಮಿಂಚಬಹುದು. ವಿದ್ಯಾರ್ಥಿಗಳು ಸೋಲನ್ನು ಸಹ ಗೆಲುವಿನಂತೆ ಸ್ವೀಕರಿಸಿದಾಗ ಕ್ರೀಡಾಸಾಧಕರಾಗಿ ಮೂಡಿಬರಬಹುದೆಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು ಹೇಳಿದರು.

ಅವರು ವಿಟ್ಲ ವಿಠಲ ಪ್ರೌಢಶಾಲೆಯಲ್ಲಿ ದ. ಕ. ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಬಂಟ್ವಾಳ, ವಿಟ್ಲ ವಲಯ ಕ್ರೀಡಾ ಸಮಿತಿ, ವಿಠಲ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ ವಿಟ್ಲ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಎರಡು ದಿನಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಮಾತನಾಡಿ ಮಕ್ಕಳಲ್ಲಿರುವ ಕ್ರೀಡಾಸಕ್ತಿ ಜೀವನದ ದಿಕ್ಕನೇ ಬದಲಾಯಿಸಬಹುದು. ಪಠ್ಯದೊಂದಿಗೆ ಕ್ರೀಡೆಗಳಲ್ಲಿಯೂ ಭಾಗವಹಿಸಿಸಬೇಕು ಎಂದರು.
ಸಮಾರಂಭದಲ್ಲಿ ವಿಟ್ಲ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಂತ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ಕೃಷ್ಣಪ್ಪ, ವಿಠಲ ಪ.ಪೂ ಕಾಲೇಜು ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ, ಆಡಳಿತಾಧಿಕಾರಿ ಪ್ರಶಾಂತ್, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಿನ್ನಪ್ಪ, ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾ ಎಚ್.,ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರವಿಪ್ರಸಾದ್, ಕುಕ್ಕ, ಚಂದ್ರಶೇಖರ್, ಶಿಕ್ಷಕ ಪ್ರತಿನಿಧಿ ರವಿ ನಾಯ್ಕ ಭಾಗವಹಿಸಿದ್ದರು.
ಪಂದ್ಯಾಟ ಸಮಿತಿ ಅಧ್ಯಕ್ಷ ರಾಜೇಂದ್ರ ರೈ ಸ್ವಾಗತಿಸಿದರು. ವಿಠಲ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕಿರಣ್‌ಕುಮಾರ್ ಬ್ರಹ್ಮಾವರ ವಂದಿಸಿದರು. ಚಂದಳಿಕೆ ಶಾಲೆಯ ಮುಖ್ಯ ಶಿಕ್ಷಕ ವಿಶ್ವನಾಥ ಗೌಡ ಕುಳಾಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here