Friday, April 5, 2024

*ಮಾಡರ್ನ್ ಕವನ*- *ಸ್ಟೇಟಸ್*

ಸ್ಟೇಟಸ್ ಎಂದರೆ
ಸಾಮಾಜಿಕ ಸ್ಥಾನಮಾನ ಅಲ್ಲ.
ವಾಟ್ಸ್ ಆಪ್ ಸ್ಟೇಟಸ್
ವಿಷ್ಯವೇ ಇಲ್ಲಿ ಎಲ್ಲಾ.!?

ಸ್ಟೇಟಸ್ ಹೇಗೆಲ್ಲ ಅಪ್ಡೇಟ್ ಆಗುತ್ತೆ..!?
“ಮೈ ಲವ್ಲಿ ಡ್ಯಾಡ್ ಆಂಡ್ ಮಾಮ್”
ತಂದೆ ತಾಯಿ ಮಾತ್ರ ಆಶ್ರಮದಲ್ಲಿ.!
“ಮೈ ವೈಫ್ ಮೈ ಲೈಫ್”
ವಿಚ್ಛೇದನಕ್ಕೆ ಇರೋದು ಆರೇ ತಿಂಗಳು..!
“ಮೈ ಸ್ವೀಟ್ ಫ್ರೆಂಡ್”
ಹಿಂದೆಯಿಂದ ಚೂರಿ ಹಾಕುವುದು..!
ಸ್ಟೇಟಸ್‌ಗೂ ಭಾವನೆಗೂ ಸಂಬಂಧವಿಲ್ಲ..!

ಹೋದದ್ದು ಬಂದದ್ದು ತಿಂದದ್ದು ಎಲ್ಲಾ ಅಪ್ಡೇಟ್..
ಗೊಯಿಂಗ್ ಟು ಬೆಂಗಳೂರು,
ಕಮಿಂಗ್ ಟು ಮೈಸೂರು.
ಟುಡೇ ಸ್ಪೆಷಲ್‌ ಬಿರಿಯಾನಿ
ನೋಡಿದವನ ಬಾಯಲ್ಲಿ ಇಳಿಯಲಿ ಪಾನಿ..

ಸ್ಟೇಟಸ್ ನಲ್ಲೇ ಎಲ್ಲಾ ಆಚರಣೆಗಳು
ಹ್ಯಾಪಿ ಹುಟ್ದಬ್ಬ, ಹ್ಯಾಪಿ ಆ್ಯನಿವರ್ಸರಿ
ಹ್ಯಾಪಿ ದಸರಾ
ಹ್ಯಾಪಿ ಮದರ್ಸ್ ಡೇ,
ಫಾದರ್ಸ್ ಡೇ
ಆ ಡೇ ಈ ಡೇ
ಇಲ್ಲದ ಎಲ್ಲಾ ಡೇ
ಪರಿಚಯ ಮಾಡಿದ್ದೇ ವಾಟ್ಸ್ ಆಪ್.

ಒಮ್ಮೊಮ್ಮೆ ಇದೇ ಸ್ಟೇಟಸ್ ನಲ್ಲಿ
ಯುದ್ಧ..!
ಪಕ್ಕ ಕೋಲ್ಡ್ ವಾರ್..
ಹಿರಿಯರದೆಲ್ಲ ವ್ಯಾಖ್ಯಾನ,
ಶುಭನುಡಿಯೇ ಇಲ್ಲಿ ಅಸ್ತ್ರ.
ನಿಮಿಷಕ್ಕೊಂದು,ಗಂಟೆಗೊಂದು
ಅವನದೊಂದು, ಇವನದೊಂದು
ಸ್ಟೇಟಸ್
ಗೆದ್ದವರಾರೋ, ಸೋತವರಾರೋ
ಸತ್ಯ ಯಾವುದೋ ,ಸುಳ್ಳು ಯಾವುದೋ..
ಕದನದಲ್ಲಿ ಪಾಲ್ಗೊಂಡವರ ಬಿಟ್ಟು
ಬೇರಾರಿಗೂ ಗೊತ್ತಿಲ್ಲ..!

ಆದರೂ ನೆನಪಿಡಿ
ಸ್ಟೇಟಸ್ ನಿಮ್ಮ ಸ್ಟೇಟಸನ್ನು
ತೋರಿಸುತ್ತದೆ..!

 

✍ಯತೀಶ್ ಕಾಮಾಜೆ

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....