ಕಲ್ಲಡ್ಕ:  ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಶಾರದಾ ಪೂಜೆ, ಭಜನೆ ಮತ್ತು ಹುಟ್ಟುಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನೀವು ಮಾಡುವಂತಹ ನಿತ್ಯ ಸರಸ್ವತಿ ವಂದನೆ ಪುಣ್ಯಕ್ಷೇತ್ರದಲ್ಲಿ ತೀರ್ಥಸ್ನಾನ ಮಾಡಿದಂತಾಗುತ್ತದೆ. ಭಾರತೀಯದಲ್ಲಿನ ಇಂತಹ ಸಂಗತಿಗಳು ಎಲ್ಲಾಕಡೆಕಾಣಲು ಸಿಗುವುದಿಲ್ಲ. ಇಲ್ಲಿ ಭಾರತೀಯತೆ ಕಾಣಸಿಗುತ್ತದೆ.ಕಳ್ಳನಾಗಲು ಬೇಡ, ಸುಳ್ಳ ಹೇಳಲು ಬೇಡ, ಒಳ್ಳೆಯ ಗುಣಬಿಡಬೇಡ ಅಂತೆಯೇ ನಾವು ಒಳ್ಳೆಯದನ್ನು ಯೋಚನೆ ಮಾಡಬೇಕು, ಅದು ನಮಗೆ ಧೈರ್ಯಕೊಡುತ್ತದೆ.ಒಳ್ಳೆಯ ಶಿಕ್ಷಣದಿಂದ ಮನೆ, ಸಮಾಜ ಬದಲಾಗುತ್ತದೆ.ಹಾಗೂ ಈ ಸಂಸ್ಥೆಯಿಂದಇನ್ನೂ ಹೆಚ್ಚು ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿ ಎಂದು ನಿವೃತ್ತ ಷಣ್ಮುಖದೇವ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ವಿದ್ಯಾಭಾರತಿಯಜಿಲ್ಲಾ ಕಾರ್ಯದರ್ಶಿಯಾಗಿರವ ಲೋಕಯ್ಯರವರು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಮೊದಲಿಗೆ ವಿದ್ಯಾರ್ಥಿಗಳಿಂದ ಭಜನಾಕಾರ್ಯಕ್ರಮ ನಡೆಯಿತು. ನಂತರ ವೇದಿಕೆಗೆ ಆಗಮಿಸಿದ ಅತಿಥಿಗಳಿಗೆ ಹೂಗುಚ್ಛ ನೀಡಿ ಸಾಂಕೇತಿಕವಾಗಿ ಸ್ವಾಗತಿಸಲಾಯಿತು. ಹುಟ್ಟುಹಬ್ಬ ಆಚರಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಅಧ್ಯಾಪಕ ವೃಂದದವರು ಆರತಿಅಕ್ಷತೆ ಹಾಗೂ ತಿಲಕಧಾರಣೆ ಮಾಡಿ ಸಿಹಿನೀಡಿದರು. ಆ ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ನಿಧಿಸಮರ್ಪಣೆ ಮಾಡಿದರು.
ನಂತರ ವಿದ್ಯಾಭಾರತಿಜ್ಞಾನ ವಿಜ್ಞಾನ ಮೇಳ ಸ್ಪರ್ಧೆಯಲ್ಲಿಜಿಲ್ಲೆ, ಪ್ರಾಂತ ಹಾಗೂ ಕ್ಷೇತ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್, ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಮಲ್ಲಿಕಾಶೆಟ್ಟಿ, ಪ್ರಗತಿಪರ ಕೃಷಿಕರಾದ ಹಾಗೂ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಗಿಲ್ಕಿಂಜ ಕೃಷ್ಣ ಭಟ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನುಮಾತಾಜಿಗಳಾದ ದಿವ್ಯಾ ಕೆ ಸ್ವಾಗತಿಸಿ, ವಿದ್ಯಾ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here