ಬಂಟ್ವಾಳ: ಚೈನೀಸ್ ಫಾಸ್ಟ್ ಫುಡ್ ವೊಂದರಿಂದ ಸಾವಿರಾರು ರೂ. ನಗದು ಕಳವುಗೈದ ಘಟನೆ ಬಂಟ್ವಾಳ ತಾಲೂಕಿನ‌ ಕರಿಯಂಗಳ ಗ್ರಾಮದ ಬಡಕಬೈಲು ಎಂಬಲ್ಲಿ ನಡೆದಿದೆ.
ಇಲ್ಲಿನ ಬಡಕಬೈಲು ನಿವಾಸಿ ಪದ್ಮನಾಭ ಎಂಬವರಿಗೆ ಸೇರಿದ ಫಾಸ್ಟ್ ಫುಡ್ ಅಂಗಡಿಯಲ್ಲಿ ಈ ಕೃತ್ಯ ನಡೆದಿದೆ. ಅಂಗಡಿಯ ಪೆಟ್ಟಿಗೆಯಲ್ಲಿದ್ದ ಸುಮಾರು 7,800 ರೂ. ಕಳವು ಮಾಡಲಾಗಿದೆ ಎಂದು‌ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here