ಬಂಟ್ವಾಳ: ಸಾವಿರಾರು ವರ್ಷಗಳ ನಾಗರೀಕತೆ, ಪುರಾತನ ಸಂಸ್ಕೃತಿ, ಇತಿಹಾಸವನ್ನು ಹೊಂದಿದ ನಮ್ಮ ದೇಶದ ಧರ್ಮದ ಮೇಲೆ ಜಾಗತೀಕರಣದ ದಾಳಿಯಾಗುತ್ತಿದ್ದು ಧಾರ್ಮಿಕ ಪ್ರಜ್ಞೆ ನಾಶವಾಗುತ್ತಿದೆ. ಧರ್ಮವನ್ನು ರೂಪಿಸಲು ದೇವಸ್ಥಾನಗಳಲ್ಲಿ ಧಾರ್ಮಿಕ ಚಿಂತನೆಯ ವೈಭವೀಕರಣವಾಗಿ ಧರ್ಮ ಉಳಿಯಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಹೇಳಿದರು.
ಬಂಟ್ವಾಳ ತಾ. ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರಿ ದೇವೀ ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಅ.೯ರಂದು ಸಂಜೆ ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ಜರಗಿದ ಪೂರ್ವಭಾವಿ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಧಾರ್ಮಿಕ ಪ್ರಜ್ಞೆ ರಕ್ತಗತವಾಗಿದ್ದು ಯಂತ್ರ ತಂತ್ರಜ್ಞಾನಗಳ ಸಹಕಾರವಿಲ್ಲದೆ ಶಕ್ತಿ ಮಾರ್ಗದಿಂದ ಅದ್ಭುತ ದೇವಸ್ಥಾನಗಳ ನಿರ್ಮಾಣವಾಗಿತ್ತು.ದೇವಸ್ಥಾನಗಳ ಮೂಲಕ ಪೂರ್ವಜರ ಧರ್ಮ ಸಂಸ್ಕೃತಿಗಳನ್ನು ಉಳಿಸಿಕೊಂಡು ಬರಬೇಕು. ಆಚರಣೆ,ಉತ್ಸವಗಳು, ಕಾಟಾಚಾರಕ್ಕೆ ನಡೆಯದೆ ಎಲ್ಲರೂ ಒಗ್ಗೂಡಿ ಸಹಕರಿಸಬೇಕು.
ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವುದು ಪೂರ್ವಜರ ಕೊಡುಗೆಯಾಗಿದೆ. ದೇವಸ್ಥಾನಗಳು ಜನರಿಗೆ ಸುಜ್ಞಾನ ಕೊಡುವ ಕೇಂದ್ರಗಳು.ಭಕ್ತಾಽಗಳೇ ದೇವಸ್ಥಾನಕ್ಕೆ ಕೊಡುಗೆಯಾಗಿದ್ದಾರೆ ಎಂದ ಅವರು ಬ್ರಹ್ಮಕಲಶೋತ್ಸವ ಕಾರ್ಯದಲ್ಲಿ ಭಾಗಿಯಾಗುವುದರಿಂದ ಭಗವಧನುಗ್ರಹ ದೊರಕುತ್ತದೆ ಎಂದು ಹೇಳಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್ ಅವರು ಮಾತನಾಡಿ, ಪುರಾಣೈತಿಹ್ಯ ಹೊಂದಿರುವ ದೇವಾಲಯ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಪಾವನ ಕ್ಷೇತ್ರವಾಗಿದೆ. ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಪ್ರಸ್ತುತ ಕಲ್ಯಾಣ ಮಂಟಪದ ವಿಸ್ತರಣೆ, ಭೋಜನ ಶಾಲೆಯ ನವೀಕರಣ, ಕಲ್ಯಾಣ ಮಂಟಪ ಛಾವಣಿಯ ಬದಲಾವಣೆ, ದೇವಸ್ಥಾನದ ಇತರ ದುರಸ್ತಿ ಕಾರ್ಯ ನಡೆಯಬೇಕಾಗಿದೆ. ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಬ್ರಹ್ಮ ಕಲಶೋತ್ಸವ ಉಪಸಮಿತಿ ರಚಿಸುವುದು ಮತ್ತು ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳನ್ನು ಸಿದ್ಧಗೊಳಿಸಲು ನಿರ್ಣಯಿಸಲಾಯಿತು.
ದೇವಸ್ಥಾನದ ಸ್ಥಾಪಕಾಧ್ಯಕ್ಷ ಜಾರಪ್ಪ ಶೆಟ್ಟಿ ಖಂಡಿಗ, ಪ್ರಧಾನ ಅರ್ಚಕ ಶ್ರೀನಿವಾಸ ಅರ್ಮುಡ್ತಾಯ, ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಉಳಿ ಗ್ರಾ. ಪಂ.ಉಪಾಧ್ಯಕ್ಷ ಸುರೇಶ್ ಮೈರ ವೇದಿಕೆಯಲ್ಲಿದ್ದರು.
ಜೀರ್ಣೋದ್ಧಾರ ಸಮಿತಿ ಪದಾಽಕಾರಿಗಳಾದ ಪಿ.ರಾಮಯ್ಯ ಭಂಡಾರಿ, ಇ.ನಾರಾಯಣ ರೈ ಅಟ್ಟದಡ್ಕ, ಎ.ಸಂಜೀವ ಗೌಡ ಅಗಲ, ಉತ್ಸವ ಸಮಿತಿ ಅಧ್ಯಕ್ಷ ಪಿ.ವಾಸುದೇವ ಮಯ್ಯ, ಉಪಾಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಿತ್ತ, ಪ್ರಮುಖರಾದ ಜಯ ಶೆಟ್ಟಿ ಕಿಂಜಾಲು, ಜಗನ್ನಾಥ ಶೆಟ್ಟಿ, ಡೀಕಯ್ಯ ಬಂಗೇರ, ಡಾ. ರಾಜಾರಾಮ ಕೆ.ಬಿ., ಗಣೇಶ್ ಕೋಂಗುಜೆ, ಯತೀಂದ್ರ ಚೌಟ, ಸಂಜೀವ ಪೂಜಾರಿ ಕೇರ್ಯ, ಗುರುಪ್ರಕಾಶ್, ಉಳಿ ಯುವಕ ಮಂಡಲದ ಅಧ್ಯಕ್ಷ ಸನತ್ ಕಕ್ಯ, ಚೈತನ್ಯ ಯುವತಿ ಮಂಡಲದ ಅಧ್ಯಕ್ಷೆ ದಿವ್ಯಾ ನಾಯಕ್, ಗ್ರಾ. ಪಂ.ಸದಸ್ಯರಾದ ಚಿದಾನಂದ ರೈ, ಚೇತನ್ ಹೂರ್ದೊಟ್ಟು ಮತ್ತಿತರರು ಉಪಸ್ಥಿತರಿದ್ದರು.
ಉಳಿ ದಾಮೋದರ ನಾಯಕ್ ಅವರು ಸ್ವಾಗತಿಸಿದರು. ಮೇನೇಜರ್ ವೀರೇಂದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here