ವಿಟ್ಲ: ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿ ಮಂಗಳವಾರ ಪೊಲೀಸ್ ಬಾಸ್ಮೀದಾರಿಕೆ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಕೊಳ್ನಾಡು ಮಣ್ಣಗದ್ದೆ ಮನೆ ನಿವಾಸಿ ಅಬ್ದುಲ್ ಹ್ಯಾರಿಸ್ (22) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಕಾರಿನಲ್ಲಿ ತಾಯಿ ಕರೆದುಕೊಂಡು ಅಕ್ಕನ ಮನೆಗೆ ಹೋಗುತ್ತಿದ್ದ ಸಮಯ ಮೆದು ಎಂಬಲ್ಲಿ ಓಮ್ನಿಯಲ್ಲಿ ಬಂದ ಬಶೀರ್ ಕಾರು ತಡೆದು, ಪೊಲೀಸರಿಗೆ ಬಾರಿ ಮಾಹಿತಿ ಕೊಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕಬ್ಬಿಣದ ಕಾಡ್‌ನಿಂದ ಹಲ್ಲೆ ನಡೆಸಿ, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.