ಬಂಟ್ವಾಳ: ಬಾಳ್ತಿಲ ಗ್ರಾಮ ಪಂಚಾಯತ್, ದಾಸಕೋಡಿ ಅಂಗನವಾಡಿ ಕೇಂದ್ರ, ಸ್ತ್ರೀ ಶಕ್ತಿ ಗುಂಪುಗಳ ಸಹಯೋಗದಲ್ಲಿ ಗಾಂಧೀಜಿಯವರ ಜನ್ಮದಿನ, ಸ್ವಚ್ಛಮೇವ ಜಯತೇ, ಶೂ ವಿತರಣೆ ಮತ್ತು ಹುಟ್ಟುಹಬ್ಬ ಆಚರಣೆ , ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ಆಯೋಜನೆಗೊಂಡ ‘ಸ್ವಚ್ಛಮೇವ ಜಯತೇ’ ಜಾಗೃತಿ ರಥಯಾತ್ರೆ ಆಗಮಿಸಿ, ಗ್ರಾಮಸ್ಥರಿಗೆ ಪ್ಲಾಸ್ಟಿಕ್ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿದರು. ಕರ್ನಾಟಕ ಜಾನಪದ ಕಲಾ ತಂಡದ ಸದಸ್ಯರು, ಹಾಡು, ಸಂಭಾಷಣೆ , ಪ್ರಹಸನದ ಮೂಲಕ ”ಜಲಾಮೃತ-ಪರಿಸರ ಸ್ವಚ್ಛತೆ”ಯ ಕಾರ್ಯಕ್ರಮ ನಡೆಸಿಕೊಟ್ಟರು.  ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಠಲ್ ಅಧ್ಯಕ್ಷತೆ ವಹಿಸಿದರು. ಅಂಗನವಾಡಿ ಮೇಲ್ವಿಚಾರಕರಾದ ಶಾಲಿನಿ, ಕಾರ್ಯಕರ್ತೆ ಲಲಿತಾ, ಆಶಾ ಕಾರ್ಯಕರ್ತೆ ಜಯಶ್ರೀ, ಪಂಚಾಯತ್ ಸಿಬ್ಬಂದಿಗಳು, ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯರು, ಪೋಷಕರು, ಮಕ್ಕಳು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here