ಉಜಿರೆ: ಧರ್ಮಸ್ಥಳದಲ್ಲಿ ಗುರುವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷಕದಐವತ್ತೆರಡನೆ ವರ್ಧಂತ್ಯುತ್ಸವದ ಸಂಭ್ರಮ-ಸಡಗರ.
ದೇವಸ್ಥಾನ, ಹೆಗ್ಗಡೆಯವರ ಬೀಡು, ವಸತಿ ಛತ್ರಗಳನ್ನು ಪ್ರಾಕೃತಿಕ ಪರಿಕರಗಳಿಂದ ಅಲಂಕರಿಸಲಾಗಿತ್ತು.ದೇವಸ್ಥಾನ, ಬಸದಿಯಲ್ಲಿ ವಿಶೇಷ ಪೂಜೆ ನಡೆಯಿತು.
ಧರ್ಮಸ್ಥಳದ ಭಕ್ತರು, ಅಭಿಮಾನಿಗಳು ಹಾಗೂ ಆಪ್ತರು ಹೆಗ್ಗಡೆಯವರನ್ನು ಭೇಟಿಯಾಗಿ ಫಲ-ಪುಷ್ಪ ಅರ್ಪಿಸಿ ಗೌರವಾರ್ಪಣೆ ಮಾಡಿದರು.
ದೇವಳದ ನೌಕರರ ವೃಂದದವರ ಛದ್ಮವೇಷ ಸ್ಪರ್ಧೆಕಣ್ಮನ ಸೆಳೆಯಿತು.
ಗೌರವಾರ್ಪಣೆ ಸಲ್ಲಿಸಿದ ಗಣ್ಯರು:
ಮಾಣಿಲದ ಮೋಹನದಾಸ ಸ್ವಾಮೀಜಿ
ಕನ್ಯಾಡಿರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
ಮಾಜಿ ಸಚಿವ ವಿನಯಕುಮಾರ್ ಸೊರಕೆ
ವಿಧಾನ ಪರಿಷತ್ ಸದಸ್ಯ ಕೆ. ಹರೀಶ್‌ಕುಮಾರ್
ಕನ್ನಡ ಸಾಹಿತ್ಯ ಪರಿಷತ್‌ದ.ಕ. ಜಿಲ್ಲಾಘಟಕದಅಧ್ಯಕ್ಷ ಕೆ. ಪ್ರದೀಪ್‌ಕುಮಾರ್‌ಕಲ್ಕೂರ
ಹಂಪಿ ಕನ್ನಡ ವಿ.ವಿ. ಮಾಜಿ ಕುಲಪತಿಡಾ. ವಿವೇಕ ರೈ
ಹಾವೇರಿಜಾನಪದ ವಿ.ವಿ. ಮಾಜಿ ಕುಲಪತಿಡಾ.ಕೆ. ಚಿನ್ನಪ್ಪಗೌಡ
ಡಾ. ತಾಳ್ತಜೆ ವಸಂತಕುಮಾರ್
ಕಟೀಲು ಲಕ್ಷ್ಮೀನಾರಾಯಣಅಸ್ರಣ್ಣ
ಹರಿಕೃಷ್ಣ ಪುನರೂರು
ಶಾಸಕ ಹರೀಶ್ ಪೂಂಜ
ಛದ್ಮವೇಷ ಸ್ಪರ್ಧೆ
ಉಜಿರೆ: ಧರ್ಮಸ್ಥಳದಲ್ಲಿ ಗುರುವಾರಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಂದರ್ಭ ನೌಕರರಛದ್ಮವೇಷ ಸ್ಪರ್ಧೆ ವಿಶೇಷ ಗಮನ ಸೆಳೆಯಿತು.