ಬಂಟ್ವಾಳ: ಅನರ್ಹ ಪಡಿತರ ಚೀಟಿದಾರರನ್ನು ಗುರುತಿಸಿ ರದ್ದುಪಡಿಸಿ ಮುಕ್ತ ಮಾರುಕಟ್ಟೆ (omss ) ದರದಲ್ಲಿ ದಂಡ ವಸೂಲಿ ಮಾಡಲು ಜಿಲ್ಲಾಧಿಕಾರಿ ಸಿಂದೂರೂಪೇಶ್ ಅವರು ಕಠಿಣ ಅದೇಶ ಮಾಡಿದ್ದಾರೆ.
ಜಿಲ್ಲಾಧಿಕಾರಿ ಯವರ ಅದೇಶದಂತೆ ಈ ಕಾರ್ಯ ಬಂಟ್ವಾಳ ತಾಲೂಕಿನಲ್ಲಿ ಭರದಿಂದ ನಡೆಯುತ್ತಿದ್ದು , ದಂಡರೂಪದಲ್ಲಿ ಲಕ್ಷಾಂತರ ರೂ ಬ್ಯಾಂಕ್ ಖಾತೆಗೆ ಜಮಾ ಅಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್. ನಮ್ಮ ಬಂಟ್ವಾಳಕ್ಕೆ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಅ.30 ರವರೆಗೆ ಒಟ್ಟು 450 ಬಿಪಿಎಲ್ ಪಡಿತರ ಚೀಟಿದಾರರು ಕಂದಾಯ ಇಲಾಖೆಯ ಆಹಾರ ಶಾಖೆಯಲ್ಲಿ ಸ್ವತಃ ಬಂದು ಕಾರ್ಡ್ ರದ್ದು ಪಡಿಸಿ ದಂಡ ಪಾವತಿಸಿದ್ದಾರೆ.
450 ಅನರ್ಹ ಪಡಿತರ ಚೀಟಿದಾರರು ಒಟ್ಟು 1ಲಕ್ಷ 90 ಸಾವಿರ ರೂ ದಂಡ ಕಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಒಟ್ಟು 85,528 ಪಡಿತರ ಚೀಟಿದಾರರು ಇದ್ದು, ಅದರಲ್ಲಿ 22809 ಎ.ಪಿ.ಎಲ್ ಪಡಿತರ ಚೀಟಿ ದಾರರು ಮತ್ತು 62,719 ಬಿ.ಪಿ.ಎಲ್.ಪಡಿತರ ಚೀಟಿದಾರರು ಇದ್ದಾರೆ.
ಇದರಲ್ಲಿ 450 ಅನರ್ಹ ಪಡಿತರ ಚೀಟಿ ದಾರರು ಪತ್ತೆಯಾಗಿದೆ.
ಸರಕಾರದ ಮಾನದಂಡಗಳನ್ನು ಮೀರಿ ಬಿ.ಪಿ.ಎಲ್, ಪಡಿತರ ಚೀಟಿ ಹೊಂದಿರುವವರು
ಯಾವುದೇ ದಂಡ ವಿಲ್ಲದೆ ಸೆ.30 ರವರಗೆ ಸ್ವತಃ ಆಹಾರ ಶಾಖೆಗೆ ಹೋಗಿ ಅನರ್ಹ ಕಾರ್ಡ್ ದಾರರು ರದ್ದು ಮಾಡುವಂತೆ ಸರಕಾರ ಎಚ್ಚರಿಸಿತ್ತು, ಬಳಿಕ ಅವಧಿಯನ್ನು ಅ.15 ತಾರೀಖು ವರೆಗೂ ವಿಸ್ತರಣೆ ಮಾಡಿತ್ತು.
ಸರಕಾರ ನೀಡಿದ ಅವಧಿಯ ಬಳಿಕ ಹೋಗಿ ಪಡಿತರ ಚೀಟಿ ರದ್ದು ಮಾಡಿದವರು ಸರಕಾರದ ನಿಯಮದಂತೆ ದಂಡ ಕಟ್ಟಬೇಕು ಎಂಬುದನ್ನು ಸೂಚಿಸಿತ್ತು.
ಪ್ರಸ್ತುತ ಸರಕಾರದ ನಿಯಮದಂತೆ ಇಲಾಖೆ ದಂಡ ವಸೂಲಿ ಮಾಡುತ್ತಿದೆ.
ಯಾರು ಅನರ್ಹ ಪಡಿತರ ಚೀಟಿದಾರರು: 1. ಯಾವುದೇ ರೂಪದಲ್ಲಿ ಸರಕಾರಕ್ಕೆ ತೆರಿಗೆ ಪಾವತಿಸುವವರು.
2. ಗ್ರಾಮೀಣ ಪ್ರದೇಶದಲ್ಲಿ 3ಹೆಕ್ಟೇರು ಭೂಮಿ ಹೊಂದಿರುವ ವರು ನಗರ ಪ್ರದೇಶಗಳಲ್ಲಿ 1000 ಸಾವಿರ ಚ.ಅಡಿಗಿಂತ ಹೆಚ್ಚಿನ ವಿಸ್ತೀರ್ಣ ದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವವರು.
3. ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನ ಅಂದರೆ ಟ್ರ್ಯಾಕ್ಟರ್ , ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬ ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬ ಗಳು .
4. ಕುಟುಂಬದ ವಾರ್ಷಿಕ ಆದಾಯ ರೂ.1.20 ,ಲಕ್ಷಕ್ಕಿಂತ ಅಧಿಕ ಇರುವ ಕುಟುಂಬಗಳು.
ಮೇಲೆ ತಿಳಿಸಿದಂತೆ ಇವೆರಲ್ಲರೂ ಅನರ್ಹರಾಗಿರುತ್ತಾರೆ.
ಈ ಕುಟುಂಬ ಗಳು ಸರಕಾರದ ನಿಯಮದಂತೆ ದಂಡ ತೆರಬೇಕಾಗುತ್ತದೆ.
ದಂಡ ಕಟ್ಟುವುದು ಹೇಗೆ?:
ಬಿ.ಪಿ.ಎಲ್. ಪಡಿತರ ಕಾರ್ಡ್ ಯಾವಾಗ ಕುಟುಂಬ ಪಡೆದಿದೆ ಮತ್ತು ಸರಕಾರದ ಯಾವುದು ಎಂಬುದನ್ನು ನೋಡಿಕೊಂಡು ದಂಡ ವಿಧಿಸಲಾಗುತ್ತದೆ.
ಇಲಾಖೆ ವಿಧಿಸಿದ ದಂಡವನ್ನು ಕೆ.2 ಮೂಲಕ ಬ್ಯಾಂಕ್ ಖಾತೆಗೆ ಜಮಾಮಾಡಬೇಕಾಗುತ್ತದೆ. ಸರ್ವರ್ ಸಮಸ್ಯೆ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಈವರಗೆ ದಂಡ ವಸೂಲಿ ಮಾಡಿದ ಪ್ರಕರಣ ದಲ್ಲಿ 20000 ಅತೀ ಹೆಚ್ಚು ದಂಡ ಒಂದು ಕುಟುಂಬಕ್ಕೆ ವಿಧಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಸರಕಾರದ ಎಚ್ಚರಿಕೆ ಯ ಬಳಿಕವೂ ಅನರ್ಹ ಪಡಿತರ ಚೀಟಿ ದಾರರು ರದ್ದು ಪಡಿಸದೆ ಇದ್ದರೆ ಜಿಲ್ಲಾಧಿಕಾರಿ ಕಚೇರಿಯಿಂದ ನವೆಂಬರ್ ತಿಂಗಳಿನಿಂದ ನೇರವಾಗಿ ಮನೆಗೆ ನೋಟೀಸ್ ಜಾರಿಯಾಗುತ್ತದೆ.
ಈಗಾಗಲೇ ಜಿಲ್ಲಾಧಿಕಾರಿ ಕಚೇರಿ ಆರ್.ಟಿ.ಒ.ಮೆಸ್ಕಾಂ ಸೇರಿದಂತೆ ಎಲ್ಲಾ ಸರಕಾರಿ ಇಲಾಖೆಯಿಂದಲೂ ಮಾಹಿತಿ ಪಡೆದುಕೊಂಡಿದ್ದು ಶೀಘ್ರವೇ ನೋಟೀಸ್ ನೀಡುಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.