ಬಂಟ್ವಾಳ : ಮಂಗಳೂರು ವಿಧಾನಸಭಾ ಕ್ಷೇತ್ರದ ಸಜೀಪನಡು ಗ್ರಾಮದ ಜಂಕ್ಷನ್ ನಿಂದ ಹೊಳೆಬದಿಯವರೆಗಿನ ಸುಮಾರು ೧.೨೫ ಕಿಲೋಮೀಟರ್ ರಸ್ತೆಯನ್ನು ಗ್ರಾಮ ಸುಂದರೀಕರಣಗೊಳಿಸುವ ನಿಟ್ಟಿನಲ್ಲಿ ಸುಮಾರು 2.10ಲಕ್ಷ ಅನುದಾನದಲ್ಲಿ ನಡೆಯುವ ಕಾಮಗಾರಿಗೆ ಕ್ಷೇತ್ರದ ಶಾಸಕರಾದ ಯು.ಟಿ. ಖಾದರ್ ರವರು ಇಂದು ಶಿಲಾನ್ಯಾಸವನ್ನು ನೆರವೇರಿಸಿದರು.
ಈ ಸಮಾರಂಭದಲ್ಲಿ ಕರ್ಣಾಟಕ ಖಾದಿ ಮಂಡಳಿಯ ಮಾಜಿ ನಿರ್ದೇಶಕರಾದ ಹಾಜಿ.ಎಸ್ ಅಬ್ಬಾಸ್, ಸಜೀಪ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ.ಅಬ್ದುಲ್ ರಝಾಕ್, ಮಾಜಿ ಜಿಲ್ಲಾಪಂಚಾಯತ್ ಸದಸ್ಯರಾದ ಉಮರ್ ಫಾರೂಖ್, ಜಾತ್ಯಾತೀತ ಜನತಾದಳದ ರಾಜ್ಯ ಕಾರ್ಯದರ್ಶಿಯಾದ ಎಸ್.ಮೊಹಮ್ಮದ್ ಶಫಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪ್ರವೀಣ್ ಆಲ್ವ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಝಾಕ್ ಕುಕ್ಕಾಜೆ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮ್ಲಾನ್. ಸಜೀಪನಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸೋಮನಾಥ ಭಂಡಾರಿ, ಹಾಗೂ ಎಸ್.ಕೆ ಮೊಹಮ್ಮದ್, ಸಜೀಪನಡು ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಗೋಳಿಪಡ್ಪು, ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷರಾದ ಇಂತಿಯಾಝ್ ತುಂಬೆ, ಕರ್ಣಾಟಕ ರಾಜ್ಯ ರಸ್ತೆಸಾರಿಗಾ ನಿಗಮದ ಮಾಜಿ ನಿರ್ದೇಶಕರಾದ ರಮೇಶ್ ಶೆಟ್ಟಿ ಬೋಳಿಯಾರ್. ಹನೀಫ್, ಆಶಿಫ್ ಉಪಸ್ಥಿತರಿದ್ದರು.
ದ.ಕ ಜಿಲ್ಲಾ ವಕ್ಫ್ ಸಲಹಾ ಸಮೀತಿಯ ನಿಕಟಪೂರ್ವ ಉಪಾಧ್ಯಕ್ಷರಾದ ಎಸ್. ಅಬೂಬಕ್ಕರ್ ಸಜೀಪ ಸ್ವಾಗತಿಸಿ ರಝಾಕ್ ಕುಕ್ಕಾಜೆ ಯವರು ವಂದಿಸಿದರು.