ಬಂಟ್ವಾಳ : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿ.ವೈ.ಎಫ್.ಐ)ನ ಬಂಟ್ವಾಳ ತಾಲೂಕು ಸಮಾವೇಶವು ಬಿ.ಸಿ.ರೋಡ್ ನ ರಿಕ್ಷಾ ಭವನ ದಲ್ಲಿ ನಡೆಯಿತು. ಸಮಾವೇಶವನ್ನು ಉದ್ಘಾಟಿಸಿ ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಇಂದು ನಿರುದ್ಯೋಗವು ಒಂದು ದೊಡ್ಡ ಸಮಸ್ಯೆಯಾಗಿ ಯುವಜನರನ್ನು ಕಾಡುತ್ತಿದ್ದು, ಉದ್ಯೋಗವಿಲ್ಲದೆ ಯವಜನತೆ ದಾರಿ ತಪ್ಪುತ್ತಿದ್ದು ಸರಕಾರದ ಜನ ವಿರೋಧಿ ನೀತಿಗಳ ಕಾರಣದಿಂದಾಗಿ ಹಾಗೂ ಉದ್ಯೋಗಗಳನ್ನು ಸೃಷ್ಟಿಸಲು ಸರಕಾರಗಳು ಸರಿಯಾದ ಕಾರ್ಯಕ್ರಮಗಳನ್ನು ರೂಪಿಸದೇ ಇರುವ ಕಾರಣದಿಂದಾಗಿ ಇಂದು ನಿರುದ್ಯೋಗ ಸಮಸ್ಯೆ ಉದ್ಭವಿಸಿದ್ದು ಸರಕಾರಗಳ ಈ ಜನವಿರೋದಿ ನೀತಿಗಳ ವಿರುದ್ದ ಯುವಜನತೆ ಸಂಘಟಿತರಾಗಿ ಹೋರಾಟಕ್ಕೆ ಮುಂದಗಬೇಕೆಂದು ಕರೆ ನೀಡಿದರು. ಸ್ಥಳೀಯ ಕೈಗಾರಿಕೆಗಳಲ್ಲಿ ಸ್ಥಳಿಯ ಯುವಕರಿಗೆ ಉದ್ಯೋಗ ನೀಡಬೇಕು ಎನ್ನುವ ನಿಟ್ಟಿನಲ್ಲಿ ಡಿ.ವೈ.ಎಫ್.ಐ ಜಿಲ್ಲಾದ್ಯಾಂತ ಹೋರಾಟವನ್ನು ಹಮ್ಮಿಕೊಂಡಿದ್ದು ಬಂಟ್ವಾಳ ತಾಲೂಕಿನಲ್ಲಿಯೂ ಹೋರಾಟವನ್ನು ಯಶಸ್ವಿಗೊಳಿಸಲು ಮುಂದಾಗಬೇಕೆಂದು ಕರೆನೀಡಿದರು.
ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪತ್ರಕರ್ತರಾದ ಲತೀಫ್ ನೇರಳಕಟ್ಟೆ ಮಾತನಾಡಿ ಡಿ.ವೈ.ಎಫ್.ಐ ಸಂಘಟನೆಯು ಇಂದು ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಇಂದು ದೇಶದ ಆರ್ಥಿಕ ಪರಿಸ್ಥಿತಿ ಬಹಳ ಚಿಂತಾಜನಕ ಸ್ಥಿತಿಯಲ್ಲಿದ್ದು ಸರಕಾರಗಳ ತಪ್ಪು ಆರ್ಥಿಕ ನೀತಿಗಳ ಕಾರಣದಿಂದಾಗಿ ಆರ್ಥಿಕ ಸಂಕಷ್ಟಗಳು ಉಂಟಾಗಿದ್ದು ಈ ಬಗ್ಗೆ ಯುವಜನತೆ ಜಾಗೃತಿಗೊಂಡು ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಡಿ.ವೈ.ಎಫ್.ಐ ಮಾಜಿ ಮುಖಂಡರಾದ ಜನಾರ್ಧನ ಕುಲಾಲ್ ಮಾತನಾಡಿದರು, ಅದ್ಯಕ್ಷತೆಯನ್ನು ಡಿ.ವೈ.ಎಫ್.ಐ ಮಾಜಿ ಮುಖಂಡರಾದ ಉದಯ ಕುಮಾರ್ ಬಂಟ್ವಾಳ ವಹಿಸಿದ್ದರು. ಆರಂಭದಲ್ಲಿ ತುಳಸೀದಾಸ್ ವಿಟ್ಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಮಾವೇಶದಲ್ಲಿ ಮುಂದಿನ ಹೋರಾಟಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು
ಎಂ.ಆರ್.ಪಿ.ಎಲ್ ನಲ್ಲಿ 233 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು ಇದರಲ್ಲಿ ಸ್ಥಳೀಯ ಅರ್ಹ ಉದ್ಯೋಗಾಂಕ್ಷಿಗಳಿಗೆ ೮೦% ಸ್ಥಾನಗಳನ್ನು ಮೀಸಲಿಡಬೇಕು .
ಬಂಟ್ವಾಳ ತಾಲೂಕಿನಾದ್ಯಂತ ನಿವೇಶನ ರಹಿತರಿಗೆ ಖಾಲಿ ಇರುವ ಸರಕಾರಿ ಜಮೀನನ್ನು ಗುರುತಿಸಿ ನಿವೇಶನ ನೀಡಬೇಕು.
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಆರಂಭಿಸಬೇಕು ಹಾಗೂ ತಾಲೂಕಿನ ಎಲ್ಲಾ ಸರಕಾರಿ ಆಸ್ಪತ್ರೆ ಗಳನ್ನು ಮೇಲ್ದಜೆಗೆ ಏರಿಸಬೇಕು. ಈ ನಿರ್ಣಯಗಳಿಗೆ ಸಂಬಂದಿಸಿ ಹೋರಾಟವನ್ನು ರೂಪಿಸಲು ತೀರ್ಮಾನಿಸಲಾಯಿತು.
ಸಮಾವೇಶ ದಲ್ಲಿ ನೂತನ ಸಮಿತಿ ರಚಿಸಲಾಯಿತು. ಅದ್ಯಕ್ಷರಾಗಿ ಸುರೇಂದ್ರ ಕೋಟ್ಯಾನ್, ಉಪಾದ್ಯಕ್ಷರುಗಳಾಗಿ ಸಾದಿಕ್ ಬಂಟ್ವಾಳ, ದೇವದಾಸ್ ಕುಲಾಲ್. ಕಾರ್ಯದರ್ಶಿಯಾಗಿ ತುಳಸೀದಾಸ್ ವಿಟ್ಲ , ಜೊತೆ ಕಾರ್ಯದರ್ಶಿಗಳಾಗಿ ಮಹಮ್ಮದ್ ಇಕ್ಬಾಲ್ ಬಂಟ್ವಾಳ ,ಶೌಕತ್ ಆಲಿ ಖಾನ್, ಕೋಶದಿಕಾರಿಯಾಗಿ ಮಹಮ್ಮದ್ ಗಝಾಲಿ, ಕ್ರೀಡಾ ಕಾರ್ಯದರ್ಶಿಯಾಗಿ ಸಪ್ವಾನ್ ಹಾಗೂ 17 ಜನರ ಕಾರ್ಯಕಾರಿ ಸಮಿತಿ ರಚಿಸಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here