ಬಂಟ್ವಾಳ: ಕಾಣೆಯಾಗಿದ್ದ ಯುವತಿಯೋರ್ವಳು ಮದುವೆಯಾಗಿ ಗಂಡನೊಂದಿಗೆ ಠಾಣೆಗೆ ಆಗಮಿಸಿದ ಘಟನೆ ಇಂದು ನಡೆದಿದೆ.
ಬಂಟ್ವಾಳ ತಾಲೂಕಿನ ಅಗ್ರಾರ್ ಸಮೀಪದ ಕಾಂಜೀರಕೋಡಿ ನಿವಾಸಿ ಪ್ರಕಾಶ್ ದೇವಾಡಿಗ ಅವರ ಮಗಳು ಚೈತ್ರ(19) ಬೆಳ್ತಂಗಡಿ ನಿವಾಸಿ ಪ್ರಶಾಂತ್ ಗೌಡ ಅವರ ಜೊತೆ ಮದುವೆಯಾಗಿ ಇಂದು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಬಂದಿದ್ದಾರೆ.
ಚೈತ್ರ ಅವರು ಅ. 14 ರಂದು ಸೋಮವಾರ ಬೆಳಿಗ್ಗೆ ಬಿ.ಸಿ.ರೋಡಿನ ಬ್ಯಾಗ್ ಕಂಪೆನಿಗೆ ಕೆಲಸಕ್ಕೆ ಹೋಗುತ್ತೇನೆಂದು ಹೋದವಳು ನಾಪತ್ತೆಯಾಗಿದ್ದಳು ಎಂದು ಬಿಸಿರೋಡಿನ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರೆ ಇಂದು ಬೆಳಿಗ್ಗೆ ಚೈತ್ರ ಮತ್ತು ಪ್ರಶಾಂತ್ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಅಗಮಿಸಿದ್ದು ನಾವು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಬೆಳ್ತಂಗಡಿ ನೋಂದಣಿ ಕಚೇರಿ ಯಲ್ಲಿ ವಿವಾಹ ವಾಗಿರುವುದಾಗಿ ಹೇಳಿದ್ದಾರೆ ಎಂದು ಬಂಟ್ವಾಳ ನಗರ ಠಾಣಾ ಪೋಲೀಸರು ತಿಳಿಸಿದ್ದಾರೆ.