ಬಂಟ್ವಾಳ: ಶ್ರೀ ಬಿ ರಮಾನಾಥ ರೈ ಮಾಜಿ ಸಚಿವರ 2017-18 ಸಾಲಿನ ಸ್ಥಳೀಯ ಸಂಸ್ಥೆಯ ಬಂಟ್ವಾಳ ಪುರಸಭೆ ನಗರೋತ್ಪಾನದ ಅನುದಾನದಿಂದ ಆಗ್ರಾರ್ ಚರ್ಚ್ ನಿಂದ-ನೇರಂಬೋಳು ರಸ್ತೆ ಹಾಗೂ ನೆರೆಂಬೋಳು ರಕ್ತೇಶ್ವರೀ ದೇವಸ್ಥಾನದಿಂದ ರೇಮಾನುಪಾಲ್ ರಸ್ತೆ ಕಾಂಕ್ರಿಟೀರಣಕ್ಕೆ ಅನುದಾನ ಒದಗಿಸಿ ಕಾಮಗಾರಿ ವೀಕ್ಷಣೆ.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಕರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾದ ಪಿಯುಸ್ ಎಲ್. ರೊಡ್ರಿಗಸ್, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ಪದ್ಮಶೇಖರ್ ಜೈನ್, ಪುರಸಭಾ ಸದಸ್ಯರಾದ ಜನಾರ್ದನ್ ಚಂಡ್ತಿಮಾರ್, ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮೋಹನ್ ಗೌಡ, ಮಾಜಿ ಪುರಸಭಾ ಅಧ್ಯಕ್ಷರು ವಸಂತಿ ಚಂದಪ್ಪ, ಮನೋಹರ್ ನೇರಂಬೋಳು, ಬಾಲಕೃಷ್ಣ ಅಂಚನ್, ಮಾಯಿಲಪ್ಪ ಸಾಲಿಯಾನ್, ವಾಸು ಪೂಜಾರಿ ಲೊರೆಟ್ಟೊ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಪವನ್ ಆಳ್ವ, ಚೇತನ್ ಪೂಜಾರಿ, ಹಾಗೂ ಮೊದಲಾದವರು ಉಪಸ್ಥಿತರಿದ್ದರು.