ಬಂಟ್ವಾಳ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ಇದರ ವತಿಯಿಂದ 151ನೇ ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ವ್ಯಸನಮುಕ್ತರ ಸಮಾವೇಶ ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಬುಧವಾರ ನಡೆಯಿತು.
ಗಣ್ಯರೆಲ್ಲರೂ ಗಾಂಧಿಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಾತ್ಮ ಗಾಂಧಿ ಅವರ ತತ್ವ ಹಾಗೂ ಆದರ್ಶ ಪಾಲನೆಯಾಗಬೇಕಾಗಿದೆ. ಗಾಂಧಿಜಿ ಅವರ ಅರ್ಥ ಪೂರ್ಣವಾದ ಕಾರ್ಯಕ್ರಮ ಇದಾಗಿದೆ. ಯೋಜನೆಯ ವತಿಯಿಂದ ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.


ಮಾಜಿ ಸಚಿವ ಬಿ.ರಮಾನಾಥ ರೈ ಅವರು ವ್ಯಸನಮುಕ್ತರನ್ನು ಅಭಿನಂದಿಸಿ‌ ಮಾತನಾಡಿ, ಅಹಿಂಸಾ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತರಲು ಗಾಂಧಿಜಿ ಅವರು ಶ್ರಮಿಸಿದ್ದು, ಇವರ ಆದರ್ಶವನ್ನು ಗುರುತಿಸಿ ಜಗತ್ತಿನೆಲ್ಲಡೆ ಗಾಂಧಿಜಿ ಅವರ ಸ್ಮಾರಕವನ್ನು ನಿರ್ಮಿಸಿರುವುದು ದೇಶದ ಸಂದ ಗೌರವವಾಗಿದೆ ಎಂದರು.
ಇನ್ನು ಕೆಲವರು ತೋರಿಕೆಗಾಗಿ ಮಾತ್ರ ಗಾಂಧಿಜಿ ಅವರ ಬಗ್ಗೆ ಮಾತನಾಡುತ್ತಾರೆ. ಅವರ ಮನಸಿನಲ್ಲಿ ಗಾಂಧಿಜಿ ಅವರ ಬಗ್ಗೆ ಕಿಂಚಿತ್ತು ಅಭಿಮಾನ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲಿಗೆ ಹೋದವರನ್ನು ಅಗೌರವದಿಂದ ಕಾಣುವ ಹಾಗೂ ಅವಮಾನಿಸುವ ಸಮಾಜದಲ್ಲಿ ನಾವಿದ್ದೇವೆ‌. ಈ ನಿಟ್ಟಿನಲ್ಲಿ ಗಾಂಧಿಜಿ ಅವರ ವಿಚಾರಧಾರೆಯಿಂದ ಪ್ರೇರಿತರಾದವರು ಇಂತಹವರಿಗೆ ತಿಳುವಳಿಕೆ ಹಾಗೂ ವಿಮರ್ಶಿಸವ ಕಾರ್ಯ ಆಗಬೇಕಾಗಿದೆ ಎಂದರು.


ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಕುಮಾರ್ ಪೂಂಜ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ಬಂಟ್ವಾಳ ಸ್ಥಾಪಕಾಧ್ಯಕ್ಷ ಎ.ಸಿ.ಭಂಡಾರಿ, ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ. ಟ್ರಸ್ಟ್ ದ‌.ಕ. ಇದರ ನಿರ್ದೇಶಕ ಸತೀಶ್ ಶೆಟ್ಟಿ, ಬಂಟ್ವಾಳ ವಲಯದ ಧರ್ಮಗುರು ಫಾದರ್ ವೆಲೇರಿಯನ್ ಡಿಸೋಜ, ನಿವೃತ್ತ ಆರೋಗ್ಯ ಮೇಲ್ವಿಚಾರಕ ಜಯರಾಂ ಪೂಜಾರಿ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಕೈಯ್ಯೂರು ನಾರಾಯಣ ಭಟ್, ಕಿರಣ್ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷ ಮಾಧವ ಎಂ.ವಳವೂರು, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ರೊನಾಲ್ಡ್ ಡಿಸೋಜ, ಸುಭಾಶ್ ಚಂದ್ರ ಜೈನ್, ಮಲ್ಲಿಕಾ ಶೆಟ್ಟಿ ಹಾಗೂ ಜನಜಾಗೃತಿ ವೇದಿಕೆಯ ಎಲ್ಲ ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆ ಬಂಟ್ವಾಳದ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ. ಟ್ರಸ್ಟ್ ನ ಯೋಜನಾಧಿಕಾರಿ ಜಯಾನಂದ್ ಸ್ವಾಗತಿಸಿ, ಪ್ರಸ್ತಾವಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ಬಳಿಯಿಂದ ಸಭಾಂಗಣದವರಗೆ ಜಾಗೃತಿ ಜಾಥಾ ನಡೆಯಿತು.
ಜಾಥಾವನ್ನು ಜನಜಾಗೃತಿ ಸ್ಥಾಪಕ ಅಧ್ಯಕ್ಷ ಎ.ಸಿ.ಭಂಡಾರಿ ಉದ್ಘಾಟಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here