ಬಂಟ್ವಾಳ: ಗಾಂಧಿ ಜಯಂತಿ ಪ್ರಯುಕ್ತ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರ ನೇತ್ರತ್ವದಲ್ಲಿ ಮಿನಿವಿಧಾನ ಸೌಧದಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು.
ಗಾಂಧಿ ಜಯಂತಿ ಅಚರಣೆಯ ಮೊದಲು ಮಿನಿವಿಧಾನ ಸೌಧದ ಪ್ರತಿ ಕಚೇರಿಯನ್ನು ಸ್ವತಃ ತಹಶೀಲ್ದಾರ್ ಅವರ ಮುತುವರ್ಜಿಯಿಂದ ಸ್ವಚ್ಚ ಮಾಡುವ ಮೂಲಕ ಇತರ ಸರಕಾರಿ ಕಚೇರಿಗಳಿಗೆ ಇವರು ಮಾದರಿಯಾಗಿದ್ದಾರೆ.
ಮುಂಜಾನೆ 6 ಗಂಟೆಗೆ ಕಚೇರಿಗೆ ಆಗಮಿಸಿದ ರಶ್ಮಿ ಅವರು ಸ್ವತ: ಕೈಯಲ್ಲಿ ಪೊರಕೆ ಹಿಡಿದು ಗುಡಿಸಲು ಪ್ರಾರಂಬಿಸಿದರು.
ಇವರ ಜೊತೆಗೆ ಕಂದಾಯ ಇಲಾಖಾ ಸಿಬ್ಬಂದಿ ಗಳು ಕೈಜೊಡಿಸಿದರು. ಮಿನಿ ವಿಧಾನ ಸೌಧದ ಹೊರಗೂ ಒಳಗೂ ಸ್ಚಚ್ಚ ಮಾಡಲಾಯಿತು.

ಸರಕಾರಿ ಕಚೇರಿ ಎಂಬುದು ನಮ್ಮ ಮನೆಯಿದ್ದಂತೆ, ಅಲ್ಲಿಗೆ ಬರುವ ಪ್ರತಿಯೊಬ್ಬರು ಕಚೇರಿಗಳನ್ನು ನಮ್ಮ ಮನೆಯಂತೆ ಕಾಣಬೇಕು, ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಕಚೇರಿಗೆ ಬರುವ ಸಾರ್ವಜನಿಕರು ಉಗುಳುವುದು ಅಥವಾ ಇನ್ನಾವುದೇ ರೀತಿಯಲ್ಲಿ ಸ್ಚಚ್ಚಗೆ ಧಕ್ಕೆ ಮಾಡಿದರೆ ಅಂತವರ ವಿರುದ್ದ ಕ್ರಮಜರಗಿಸುವ ಬಗ್ಗೆ ಯೋಚನೆ ಮಾಡಲಾಗಿದೆ.
ಸರಕಾರ ಸ್ವಚ್ಚತೆಗೆ ಹಲವು ಕಾರ್ಯಕ್ರಮ ಗಳನ್ನು ಹಾಕಿಕೊಂಡಿದೆ. ಸ್ವಚ್ಚಗೆ ಸರಕಾರ ಅಥವಾ ಇಲಾಖೆಗಳ ಮುತುವರ್ಜಿ ಸಾಲದು ಜೊತೆಗೆ ಜನರು ಪ್ರೋತ್ಸಾಹ ಸಹಕಾರ ನೀಡಬೇಕು. ಹಾಗಾದಲ್ಲಿ ಮಾತ್ರ ಸ್ಚಚ್ಚಬಂಟ್ವಾಳ, ಸ್ಚಚ್ಚ ಭಾರತ ಸಾಧ್ಯ. ಮುಂದಿನ ದಿನಗಳಲ್ಲಿ ಬಂಟ್ವಾಳ ದ ಜನರ ಸಹಕಾರ ಸ್ಚಚ್ಚಗೆ ಇರಲಿ ಎಂದು ಅವರು ಹೇಳಿದರು.
ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಭಾರ ಉಪ ತಹಶೀಲ್ದಾರ್ ಸೀತಾರಾಮ, ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ .ದಿವಾಕರ ಮುಗುಳಿಯ, ನವೀನ್ ಬೆಂಜನ ಪದವು, ವಿಟ್ಲ ನಾಡ ಕಚೇರಿ ಉಪತಹಶೀಲ್ದಾರ್ ರವಿಶಂಕರ್ ಸಿ ಎಮ್, ತಾಲೂಕು ಕಚೇರಿ ಸಿಬ್ಬಂದಿ
ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು ಸ್ಚಚ್ಚತಾ ಕಾರ್ಯದಲ್ಲಿ ಪಾಲ್ಗೊಂಡರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here