ಬಂಟ್ವಾಳ: ಬಾಳ್ತಿಲ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಇಂಜಿನಿಯರರ ಮೇಲ್ವಿಚಾರಣೆ ಇಲ್ಲದೆ ಅವೈಜ್ಞಾನಿಕವಾಗಿದೆ.
ಗ್ರಾಮದ ಎಲ್ಲಾ ಕಡೆಯಲ್ಲಿ ಅರ್ಧಂಬರ್ಧ ಕೆಲಸ ನಡೆಸಿ, ಸ್ಥಳೀಯ ಪಂಚಾಯತ್ ಅನುಮತಿ ಇಲ್ಲದೆ ಹಳೆಯ ಪಂಚಾಯತ್ ಕಟ್ಟಡದ ಆವರಣ ಗೋಡೆ ಕೆಡವಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾಮಗಾರಿ ಪಕ್ಕಾ ಕಳಪೆ ಮತ್ತು ಭ್ರಷ್ಠಾಚಾರಕ್ಕೆ ಸಾಕ್ಷಿ ಎಂಬಂತಿದೆ. ಅಲ್ಲದೆ ಗುತ್ತಿಗೆದಾರರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಮಳೆಗಾಲದ ಸಮಯದಲ್ಲಿ ರಸ್ತೆಯೆಲ್ಲಾ ಕೆಸರುಮಯವಾಗಿದ್ದು, ಪ್ರಯಾಣಿಕರು ಕಷ್ಟ ಅನುಭವಿಸುತ್ತಿದ್ದಾರೆ.