Friday, October 27, 2023

ಆಯುಷ್ಮಾನ್ ಭಾರತ್ ಯೋಜನೆ ಫಲಾನುಭವಿಗಳ ಜೊತೆ ಸಂಸದ ಶಾಸಕರು ದೀಪಾವಳಿ ಆಚರಣೆ

Must read

ಬಂಟ್ವಾಳ: ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ ಫಲಾನುಭವಿಗಳ ಜೊತೆ ದೀಪಾವಳಿ ಆಚರಣೆ ಕಾರ್ಯಕ್ರಮ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲು ಈ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು
ದ.ಕ.ಜಿಲ್ಲೆಯಲ್ಲಿ 92ಸಾವಿರ ಜನ ಆಯುಷ್ಮಾನ್ ಭಾರತ್ ಕಾರ್ಡ್ ಪಡೆದುಕೊಂಡಿದ್ದಾರೆ.
8ಸಾವಿರಕ್ಕಿಂತಲೂ ಅಧಿಕ ಜನ ಫಲಾನುಭವಿಗಳು ಆಸ್ಪತ್ರೆ ಯಲ್ಲಿ ಇದರ ಪ್ರಯೋಜನ ಪಡೆದಿದ್ದಾರೆ ಇದು ಸಂತಸದ ವಿಷಯ ಎಂದು ಅವರು ಹೇಳಿದರು.
ಎಲ್ಲಿರೂ ಆರೋಗ್ಯವಂತರಾಗಿರಬೇಕು ಎಂಬುದೇ ಪ್ರಧಾನಿಯವರ ಚಿಂತನೆ.‌ ಜನರಿಕ್ ಹಾಗೂ ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಸರಕಾರ ದೇಶದ ಜನರಿಗೆ ಆರೋಗ್ಯ ದ ಸವಲತ್ತುಗಳನ್ನು ನೀಡಿದೆ ಎಂದು ಅವರು ಹೇಳಿದರು.
ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಕಾರ ಬೇರೆ ಬೇರೆ ಕಾರ್ಯಕ್ರಮ ಗಳನ್ನು ಹಾಕಿಕೊಂಡಿದ್ದು ಇದರ ಪ್ರಯೋಜನ ವನ್ನು ಪ್ರತಿಯೊಬ್ಬರು ಪಡೆಯಬೇಕು ಮತ್ತು ಆರೋಗ್ಯ ವನ್ನು ಕಾಪಾಡಬೇಕು ಎಂದು ಅವರು ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡುವ ಯೋಚನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರದ್ದು.
ಪ್ರಧಾನಮಂತ್ರಿಯವರ ಕನಸಿನ
ಈ ಯೋಜನೆ ಯಶಸ್ವಿಯಾಗಿಲು ಅಧಿಕಾರಿಗಳ ಸಹಕಾರ ಬಹಳ ಅಗತ್ಯವಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸರಕಾರದ ಪ್ರತಿಯೊಂದು ಯೋಜನೆಗಳನ್ನು ಫಲಾನುಭವಿಗಳು ಯಾವುದೇ ಮುಲಾಜಿಲ್ಲದೆ ಪಡೆದುಕೊಳ್ಳಲು ಅವರು ಹೇಳಿದರು.
ಸಣ್ಣಪುಟ್ಟ ಸಮಸ್ಯೆ ಗಳು ಇದ್ದರೆ ನಿವಾರಿಸಲು ಇಲಾಖೆ ಸಿದ್ದವಾಗಿದೆ ಎಂದು ಅವರು ಹೇಳಿದರು.
ಇಂತಹ ಯೋಜನೆ ಗಳ ಸಮಗ್ರವಾದ ಮಾಹಿತಿಯನ್ನು ಅಧಿಕಾರಿಗಳು ಸಾರ್ವಜನಿಕ ರಿಗೆ ಸರಿಯಾದ ರೀತಿಯಲ್ಲಿ ತಿಳಿಸುವಂತೆಯೂ ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ. ‌
ಜಿಲ್ಲಾ ಆರೋಗ್ಯಾಧಿಕಾರಿ ಡಾ! ರಾಮಕೃಷ್ಣ ರಾವ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ . ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನ ಜಿ.ಕೆ.ಭಟ್, ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಉಪಸ್ಥಿತರಿದ್ದರು.

ಆಯುಷ್ಮಾನ್ ಭಾರತ್ ಜಿಲ್ಲಾ ಸಂಯೋಜನಾಧಿಕಾರಿ ಸಚ್ಚಿದಾನಂದ ಎಂ.ಎಲ್ ಕಾರ್ಯಕ್ರಮ ನಿರೂಪಿಸಿದರು.

More articles

Latest article