ಬಂಟ್ವಾಳ :ಪರಂಗಿಪೇಟೆ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಸೂತ್ರದಾರ ಆರೋಪಿಯೋರ್ವನನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಮತ್ತು ಗ್ರಾಮಾಂತರ ಎಸ್.ಐ.ಪ್ರಸನ್ನ ನೇತ್ರತ್ವದಲ್ಲಿ ಮಂಗಳೂರಿನ ಕಂಕನಾಡಿಯಲ್ಲಿ ಬಂಧಿಸಲಾಗಿದೆ.
ಮಾರಿಪಳ್ಳ ನಿವಾಸಿ ಜಬ್ಬಾರ್ ಬಂಧಿತ ಆರೋಪಿ.
2017 ಸೆ.25 ರಂದು ರಾತ್ರಿ ಸುಮಾರು 10.45 ರ ವೇಳೆ ಪರಂಗಿಪೇಟೆ ಹೋಟೇಲ್ ಒಂದರ ಎದುರಿನಲ್ಲಿ ನಡೆದ ಕಣ್ಣೂರಿನ ಜಿಯಾ ಗ್ಯಾಂಗ್ ಮತ್ತು ಮಾರಿಪಳ್ಳದ ಜಬ್ಬಾರ್ ಗ್ಯಾಂಗ್ ಮಧ್ಯೆ ನಡೆದ ಗಲಾಟೆಯಲ್ಲಿ ಜಿಯಾ ಯಾನೆ ರಿಯಾಝ್ ಹಾಗೂ ಫಯಾಜ್ ಕೊಲೆಯಾಗಿದ್ದರು, ಉಳಿದಂತೆ ಜಿಯಾ ಗ್ಯಾಂಗ್ ನ ಕೆಲವರು ಗಾಯಗೊಂಡಿದ್ದರು.
ಈ ಕೊಲೆಗೆ ಸಂಬಂಧಿಸಿದಂತೆ ಜಬ್ಬಾರ್ ಗ್ಯಾಂಗ್ ನ 12 ಮಂದಿಯನ್ನು ಪೋಲೀಸರು ಅರೆಸ್ಟ್ ಮಾಡಿದ್ದರು.
ಆದರೆ 13 ನೇ ಆರೋಪಿ ಹಾಗೂ ಈ ಕೊಲೆಗೆ ಪ್ರಮುಖ ಸೂತ್ರಾದಾರನಾಗಿದ್ದ ಜಬ್ಬಾರ ಪೋಲೀಸರ ಕಣ್ತಪ್ಪಿಸಿ ವಿದೇಶ ಕ್ಕೆ ತೆರಳಿದ್ದ.
ಕಳೆದ ಎರಡು ವರ್ಷಗಳಿಂದ ಪೋಲೀಸರ ಕಣ್ಣಿಗೆ ಕಾಣದ ವಿದೇಶದಲ್ಲಿದ್ದ ಈತ ನೇಪಾಳ ದ ಮೂಲಕ ಭಾರತಕ್ಕೆ ಬಂದು ಕಂಕನಾಡಿಯಲ್ಲಿ ವಾಸವಾಗಿದ್ದ ಎಂಬ ಖಚಿತ ಮಾಹಿತಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಅವರಿಗೆ ಸಿಕ್ಕಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಎಸ್.ಪ್ರಸನ್ನ ಮತ್ತು ತಂಡ ಈತನ ಬಂಧಿಸಿದ್ದಾರೆ.
ಕೊಲೆಗೆ ಪ್ರತೀಕಾರ: ಬಂಟ್ವಾಳ ತಾಲೂಕಿನ ಮಾರಿಪಳ್ಳ, ಪರಂಗಿಪೇಟೆ ಪರಿಸರದಲ್ಲಿ ಗಾಂಜಾ ಪ್ರಕರಣಕ್ಕೆ ಒಟ್ಟು ಮೂರು ಕೊಲೆಗಳು ಪ್ರತೀಕಾರವಾಗಿ ನಡೆದಿದೆ.
ಮಾರಿಪಳ್ಳ ಅಂಗಡಿ ಎದುರು ನೂರುದ್ದೀನ್ ಯಾನೆ ನೂರು ಎಂಬವನ ಪ್ರಥಮ ಕೊಲೆಗೆ ಪ್ರತೀಕಾರವಾಗಿ ಉಳಿದ ಎಲ್ಲಾ ಕೊಲೆಗಳು ನಡೆದಿದೆ.
ಅವನ ಕೊಲೆಗೆ ,
ಸುಜೀರು ಮಸೀದಿ ಎದುರು ಮಾರ್ಗದಲ್ಲಿ ನೌಶಾದ್ ನ ಕೊಲೆಯಾಗುತ್ತದೆ.
ನೌಶಾದ್ ಕೊಲೆ ಪ್ರಕರಣಕ್ಕೆ ರಿವೇಂಜ್ ಅಗಿ ಕಡೆಗೋಳಿ ಎಂಬಲ್ಲಿ ಸುಜೀರು ನಿವಾಸಿ ರಿಕ್ಷಾ ಚಾಲಕ ರಿಪಾಯಿನ್ ಎಂಬಾತನನ್ನು ಕೊಲೆಯಾಗುತ್ತದೆ.
ರಿಫಾಯಿ ಕೊಲೆಗೆ ಪ್ರತೀಕಾರವಾಗಿ ಪೇರಿಮಾರ್ ನಿವಾಸಿ ಮಾದಹನೀಫ್ ಅವರ ಮೇಲೆ ಕೊಲೆಗೆ ಯತ್ನ ಅದೃಷ್ಟ ವಸಾತ್ ಈತ ಬಚಾವಾಗುತ್ತದೆ
ಆದರೆ ಅಂಗವೈಕಲ್ಯಗೊಂಡು ಈತ ಮನೆಯಲ್ಲಿದ್ದಾನೆ.
ಈ ಮಧ್ಯೆ ಕಣ್ಣೂರಿನಲ್ಲಿ ಎರಡು ಕೊಲೆಯಾಗಿರುತ್ತದೆ.
ಮುಂದಿನ ಕೊಲೆಗೆ ಹಫೀಜ್ ಪಿಕ್ಸ್ ಹಾಗಿ ಸ್ಕೆಚ್ ಹಾಕಲಾಗುತ್ತದೆ, ಹಫೀಜ್ ಸ್ಕೂಟರ್ ನಲ್ಲಿ ಬರುತ್ತಿದ್ದ ವೇಳೆ ವಳಚ್ಚಿಲ್ ಎಂಬಲ್ಲಿ ಅಟ್ಯಾಕ್ ಮಾಡುತ್ತಾರೆ ಅದರೆ ಅತ ಅಲ್ಲಿಂದ ಓಡಿ ಹೋಗಿ ತಪ್ಪಿಸುತ್ತಾನೆ.
ಬಳಿಕ ಹಫೀಜ್ ಜಿಯಾನಿಗೆ ಈ ವಿಷಯ ತಿಳಿಸುತ್ತಾನೆ.
ಜಿಯಾ ತಂಡ ಕಾರಿನಲ್ಲಿ ಹೋಗಿ ಇನೋವಾ ಕಾರಿನಲ್ಲಿ ಬರುತ್ತಿದ್ದ ನೌಫಾಲ್ ಅವರ ಕಾರಿಗೆ ಪರಂಗಿಪೇಟೆ ಯಲ್ಲಿ ಅಡ್ಡ ಹಾಕುತ್ತಾರೆ.
ಜಿಯಾ ಗ್ಯಾಂಗ್ ಹಾಗೂ ನೌಫಾಲ್ ಗ್ಯಾಂಗ್ ಮಧ್ಯೆ ಗಲಾಟೆ ನಡೆದು ಜಿಯಾ ಹಾಗೂ ಫಯಾಜ್ ಕೊಲೆಯಾಗುತ್ತಾರೆ.ಜಿಯಾ ಜೊತೆ ಇದ್ದ ಮೂವರ ಪೈಕಿ ಇಬ್ಬರಿಗೆ ಗಾಯವಾಗಿಅಸ್ಪತ್ರೆಯಲ್ಲಿ ದಾಖಲಾಗುತ್ತಾರೆ.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಬ್ಬಾರ್ ಗ್ಯಾಂಗ್ ನ ನೌಫಾಲ್ ಹಾಗೂ ಸ್ನೇಹಿತ ರಾದ ಒಟ್ಟು 12 ಮಂದಿಯನ್ನು ಅರೆಸ್ಟ್ ಮಾಡಿದ್ದರು.
ಆದರೆ ಪ್ರಮುಖ ಸೂತ್ರದಾರ ಜಬ್ಬಾರ್ ತಲೆಮರೆಸಿಕೊಂಡಿದ್ದ.
ಬಂಟ್ವಾಳ ಎ.ಎಸ್.ಪಿ.ಸೈದುಲ್ ಅಡಾವತ್ ಅವರ ಮಾರ್ಗದರ್ಶನ ದಂತೆ ಬಂಟ್ವಾಳ ಸಿ.ಐ.ಟಿ.ಡಿ.ನಾಗರಾಜ್ ಹಾಗೂ ಗ್ರಾಮಾಂತರ ಎಸ್.ಐ.ಪ್ರಸನ್ನ ನೇತ್ರತ್ವದಲ್ಲಿ ಜಬ್ಬಾರ್ ಅವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈತನಿಗೆ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಕಾರ್ಯಚರಣೆಯಲ್ಲಿ ಪ್ರೊಬೇಶನರಿ ಪಿ.ಎಸ್.ಐ ರವರಾದ ವಿನೋದ್ ಮತ್ತು ಜಂಬುರಾಜ್ ಮಹಾಜನ್, ಹೆಡ್ ಕಾನ್ಸ್ ಟೇಬಲ್ ಗಿರೀಶ್, ಯೊಗೆಶ್,ಕಿರಣ ಕಾನ್ಸ್ ಟೇಬಲ್ ಗಳಾದ ನಝೀರ್, ಆದರ್ಶ್ ರವರು ಪಾಲ್ಗೊಂಡಿರುತ್ತಾರೆ.