ಮುಂಬಯಿ; ಮೈಸೂರಿನ ಜಗನ್ಮೋಹನ ಅರಮನೆಯ ವೇದಿಕೆಯಲ್ಲಿ, ವಿಶ್ವವಿಖ್ಯಾತ ಮೈಸೂರು ದಸರಾದಲಿ
ಅಕ್ಟೋಬರ್ ೬ರಂದು ಜರಗಿದ ವಿಖ್ಯಾತ ಕವಿಗೋಷಿ ಯಲ್ಲಿ ಡೊಂಬಿವಲಿಯ ಅನಿತಾ ಪಿ ಪೂಜಾರಿ ತಾಕೊಡೆ ಅವರು
ಬುದ್ಧ ಕವನವನ್ನು ವಾಚಿಸಿ ಎಲ್ಲರ ಗಮನಸೆಳೆದರು. ಕವಿಗೋಷಿ ಯ ಅಧ್ಯಕ್ಷತೆಯನು ವಹಿಸಿದ ಕವಿ ಡಾ. ಎಚ್.ಎಲ್
ಪುಷ್ಪ, ಅತಿಥಿಗಳಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ ಮನು ಬಳಿಗಾರ್, ಗೀತ ರಚನೆಕಾರ
ಡಾ.ನಾಗೇಂದ್ರ ಪ್ರಸಾದ್ ಸೇರಿದಂತೆ ಹಲವರು ಬುದ್ಧ ಕವನದ ಇಂದಿನ ಪ ಸು ತಿಯನು ಕುರಿತು ಉಲ್ಲೇಖಿಸಿ
ಪ್ರಶಂಸಿಸಿದರು.


ಕವಿತೆಗೆ ವಸ್ತು ಹೊಸದು ಹಳೆಯದೆಂಬುದೇನಿಲ . ಅದನು ನೋಡುವ ಕವಿಗಳ ನೋಟ ಬದಲಾಗುತ್ತದೆ ಅಷ್ಟೇ. ಕವಿತೆ
ಮತ್ತು ಬದುಕು ಬೇರೆ ಅಲ್ಲ. ಏನನು ಬದುಕುತ್ತೇವೋ ಅದನ್ನೇ ಬರೆಯುತ್ತೇವೆ. ಗಂಭೀರವಾದ ಕವಿತೆಗಳು ಯಾವ
ಚಪ್ಪಾಳೆ ಇಲ್ಲದೆಯೂ ಸಹೃದಯರ ಮೆಚ್ಚುಗೆಯನು ಪಡೆಯುತ್ತವೆ. ಕವಿ ಎಲ್ಲಿ ನಿಲ್ಲಬೇಕು, ಏನನು ಬರೆಯಬೇಕು, ಏನನ್ನು
ಮಾಡಬೇಕು ಎಂಬುದನು ತಿಳಿದುಕೊಳ್ಳಬೇಕಾದುದು ಅನಿವಾರ್ಯ ಎಂದು ಕವಿಗೋಷ್ಠಿಯ ಅಧ್ಯಕ್ಷತೆಯನು ವಹಿಸಿದ
ಡಾ.ಎಚ್.ಎಲ್ ಪುಷ್ಪ ಅಭಿಪಾ ಯಪಟ ರು.
ಡಾ.ಮನು ಬಳಿಗಾರ್ ಅವರು, ಕವಿಗೆ ಎಲ್ಲ ರೀತಿಯ ಸ್ವಾತಂತ್ರ್ಯ ಇರುತ್ತದೆ. ಆದರೆ ಅದನು ಬರಹದ ರೂಪದಲಿ
ಕೊಡುವಾಗ ತನಗಿರುವ ಸಾಮಾಜಿಕ ಜವಾಬ್ದಾರಿಯನು ಅರಿತುಕೊಳ್ಳಬೇಕು. ಸುತ್ತಮುತ್ತಲಿನ ಘಟನಾವಳಿಗಳ ನೋವಿಗೆ
ಕವಿ ಸ್ಪಂದಿಸಬೇಕು. ಸಮಾಜದಲ್ಲಿ ಸಹಬಾಳ್ವೆ ಸೌಹಾರ್ದ ಮುಖ್ಯ. ಇಂಥ ಮೌಲ್ಯದ ವಿಚಾರಗಳಿಗೆ ಕನ್ನಡ ಸಾಹಿತ್ಯದಲ್ಲಿ
ಸಿಕ್ಕಿರುವಷು ಪ್ರಾಧಾನ್ಯ ಜಗತ್ತಿನ ಯಾವ ಭಾಷೆಯಲ್ಲಿಯೂ ದೊರೆತಿಲ್ಲ ಎಂದರು.
ಕಾವ್ಯವೇ ವ್ಯಕ್ತಿತ್ವದ ವಿಕಸನಕ್ಕೆ ದಾರಿ. ನಾಟಕ, ಕಿರುತೆರೆ, ಹಿರಿತೆರೆಗೆ ಮಾರ್ಗ ಹಾಕಿಕೊಟ ದೆ ಕಾವ್ಯ. ಕಾವ್ಯವೆಂದರೆ
ನಮಗನಿಸಿದ್ದನು ಹೇಳ್ತಾ ಹೋಗುವುದರ ಜೊತೆಗೆ ನಮ ತನವನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಕವಿ
ಪಂಥಗಳ ಗೋಡೆಯಾಚೆ ನಿಂತು ಯೋಚಿಸಬೇಕು ಮತ್ತು ಬರೆಯಬೇಕು ಎಂದು ಗೀತರಚನೆಕಾರ ಡಾ. ನಾಗೇಂದ್ರ
ಪ್ರಸಾದ್ ಸಲಹೆ ನೀಡಿದರು. ಮೈಸೂರಿನ ದಸರಾ ಕವಿಗೋಷಿ ಯ ಹಲವು ಪತ್ರಿಕಾ ವರದಿಗಳಲಿ ಉಲ್ಲೇಖಗೊಂಡ
ಕೆಲವು ಕವಿತೆಗಳಲ್ಲಿ ಅನಿತಾ ಅವರ ಬುದ್ಧ ಕವನದ ಸಾಲುಗಳು ವಿಶ್ಲೇಷಿಸಲ್ಪಟು ವರದಿಗಾರರ ಮೆಚ್ಚುಗೆಗೂ
ಪಾತ್ರವಾಯಿತು.
ಮೈಸೂರು ದಸರಾ ಕವಿಗೋಷಿ ಯಲ್ಲಿ ಮುಂಬಯಿಯ ಕವಿ ವಿ.ಎಸ್.ಶಾನ್‌ಭಾಗ್ ಸಹಿತ ರಾಜ್ಯದ ನಾನಾ
ಭಾಗಗಳಿಂದ ಆಗಮಿಸಿದ ೩೬ ಕವಿಗಳು ತುಳು, ಕನ್ನಡ, ಉರ್ದು, ಕೊಂಕಣಿ, ಬ್ಯಾರಿ ಮತ್ತು ಕೊಡವ ಭಾಷೆಗಳಲ್ಲಿ
ಕಾವ್ಯವಾಚನ ಮಾಡಿದರು. ಈ ಮೂಲಕ ವಿಖ್ಯಾತ ಕವಿಗೋಷಿ ಯಲ್ಲಿ ಸಾಮಾಜಿಕ ಕಳಕಳಿಯ ಜೊತೆಗೆ
ಭಾಷಾಸಾಮರಸ್ಯವೂ ಮೇಳವಿಸಿತ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here