Sunday, October 22, 2023

ಅಜ್ಜಿನಡ್ಕ ಭಜನಾ ಮಂದಿರದಲ್ಲಿ ವಾರ್ಷಿಕೋತ್ಸವ

Must read

ವಿಟ್ಲ: ಕಲಿಯುಗದಲ್ಲಿ ಸಾಮೂಹಿಕ ಭಜನೆಗೆ ಹೆಚ್ಚು ಶಕ್ತಿಯಿದೆ. ಭಗವಂತ ನಮ್ಮ ಬೇಕುಗಳನ್ನು ಈಡೇರಿಸುತ್ತಾನೆ. ಕೀರ್ತನೆಗಳನ್ನು ದೇವರಿಗೆ ಸಮರ್ಪಿಸುವುದು, ಭಗವಂತನನ್ನು ಹಾಡಿ ಧನ್ಯತಾ ಭಾವ ಸಮರ್ಪಣೆ ಮಾಡಿ ದೇವರ ಅನುಗ್ರಹ ಪಡೆಯಬಹುದು ಎಂದು ಖ್ಯಾತ ಭಜನಾ ಸಂಕೀರ್ತನಗಾರ ರಾಮಕೃಷ್ಣ ಕಾಟುಕುಕ್ಕೆ ಹೇಳಿದರು.
ಅವರು ಪುಣಚ ಅಜ್ಜಿನಡ್ಕ ದುರ್ಗಾನಗರ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ನಡೆದ ಭಜನಾ ಮಂಡಳಿಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರಾಮಕೃಷ್ಣ ಮೂಡಂಬೈಲು ಅಧ್ಯಕ್ಷತೆ ವಹಿಸಿದರು. ಭಜನಾ ಮಂದಿರದ ಅಧ್ಯಕ್ಷ ವಿನಯಕೃಷ್ಣ ಹಾಗೂ ಭಜನಾ ತರಬೇತುದಾರ ಪ್ರಶಾಂತ ಎನ್.ಜಿ. ದೊಡ್ಡಡ್ಕ ಉಪಸ್ಥಿತರಿದ್ದರು.
ಭಜನಾ ತರಬೇತುದಾರರಾದ ಪ್ರಶಾಂತ ಎನ್.ಜಿ. ದೊಡ್ಡಡ್ಕ ಮತ್ತು ರಾಮಕೃಷ್ಣ ಕಾಟುಕುಕ್ಕೆ ಅವರನ್ನು ಭಜನಾ ಮಂಡಳಿಯ ಪರವಾಗಿ ಸಮ್ಮಾನಿಸಲಾಯಿತು. ಸೃಜನಾ, ಅಕ್ಷತಾ.ಎ, ಲಿಖಿತಾ ಆಶಯಗೀತೆ ಹಾಡಿದರು.
ಮಧುಶ್ರೀ ಸ್ವಾಗತಿಸಿದರು. ಸುಮನ ಎನ್. ವಂದಿಸಿದರು. ಅಕ್ಷತಾ ಎಂ. ನಿರೂಪಿಸಿದರು. ಬಳಿಕ ರಾಮಕೃಷ್ಣ ಕಾಟುಕುಕ್ಕೆ ಅವರು ಭಜನಾ ತಂಡಕ್ಕೆ ಕೀರ್ತನೆ ತರಬೇತಿ ನೀಡಿದರು.

More articles

Latest article