Sunday, April 14, 2024

ಜನತಾ ಆಂಗ್ಲಮಾಧ್ಯಮ ಶಾಲೆ ಅಡ್ಯನಡ್ಕ: ನೂತನ ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

ಅಡ್ಯನಡ್ಕ: ಯಂಗ್ ಸ್ಟಾರ್ ಅಡ್ಯನಡ್ಕ ಇವರ ಸಹಕಾರದಲ್ಲಿ ಜನತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಿರ್ಮಿಸಲಾಗುವ ನೂತನ
ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ  ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ, ಅಡ್ಯನಡ್ಕ ಎಜುಕೇಶನಲ್
ಸೊಸೈಟಿಯ ಆಡಳಿತಾಧಿಕಾರಿ ರಮೇಶ ಎಂ. ಬಾಯಾರು, ಆಡಳಿತ ಮಂಡಳಿ ಸದಸ್ಯ ಹಾಗೂ ಕೇಪು ಗ್ರಾಮ ಪಂಚಾಯತ್ ಸದಸ್ಯ
ಅಬ್ದುಲ್ ಕರೀಂ ಕುದ್ದುಪದವು, ಯಂಗ್ ಸ್ಟಾರ್ ಅಡ್ಯನಡ್ಕ ಬಳಗದ ಪ್ರಮುಖರಾದ ಝಕಾರಿಯಾ ಮಂಜನಡ್ಕ, ಕಲಂದರ್ ಶಹಾ,
ಹುಸೈನ್, ಜನತಾ ಆಂಗ್ಲಮಾಧ್ಯಮ ಶಾಲೆಯ ಸಂಯೋಜನಾಧಿಕಾರಿ ಗಣೇಶಮೂರ್ತಿ ಎಂ., ಜನತಾ ಆಂಗ್ಲಮಾಧ್ಯಮ ಶಾಲೆಯ
ಮುಖ್ಯೋಪಾಧ್ಯಾಯಿನಿ ರಮ್ಯಶ್ರೀ, ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಾಧವ ನಾಯ್ಕ್, ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.

More from the blog

ಮತದಾರರ ಜಾಗೃತಿ ಕಾರ್ಯಕ್ರಮ, ಕಾಲ್ನಡಿಗೆ ಜಾಥಾ ಹಾಗೂ ಬೀದಿನಾಟಕ

ತಾಲೂಕು ಪಂಚಾಯತ್‌ ಬಂಟ್ವಾಳ, ತಾಲೂಕು ಸ್ವೀಪ್‌ ಸಮಿತಿ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಬಂಟ್ವಾಳ ಪುರಸಭೆ, ರಾಷ್ಟ್ರೀಯ ಸೇವಾ ಯೋಜನೆ, ಮತದಾರರ ಸಾಕ್ಷರತಾ...

ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಖಂಡನೀಯ-ಜಗದೀಶ್ ಕೊಯಿಲ

ಬಂಟ್ವಾಳ: ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಮಾಡಿದ್ದು ಖಂಡನೀಯ ಎಂದು ಜಗದೀಶ್ ಕೊಯಿಲ ತಿಳಿಸಿದ್ದಾರೆ. ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಷ್ಟ್ರೀಯ...

ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬೈಕ್ : ಮೂವರಿಗೆ ಗಾಯ

ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಬೈಕಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ನಡೆದಿದೆ. ಮಂಗಳೂರಿನಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ‌.ಸಿ.ಬಸ್ ಗೆ ಹೆಲ್ಮೆಟ್ ಧರಿಸಿದೆ...

ಮನೆ ಮನೆಗೆ ತೆರಳಿ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರ ಮತಯಾಚನೆ

ನಮ್ಮ ಬೂತ್ ನಮ್ಮ ಹೊಣೆ ಘೋಷನೇಯಂತೆ ಬೂತ್ ಸಂಖ್ಯೆ 126 ವಾರ್ಡ್ 12 ರ ಅಜ್ಜೀಬೆಟ್ಟು ನಲ್ಲಿ ಮನೆ ಮನೆಗೆ ತೆರಲಿ ಲೋಕ ಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರ ಪರವಾಗಿ ಮತ ಯಾಚನೆ...