Friday, October 27, 2023

ಆಧಾರ್ ಕೇಂದ್ರದ ಮೂರು ಆಪರೇಟರ್ ಗಳ ಸಸ್ಪೆಂಡ್ ಆರ್ಡರ್ ಮಾಡಿದ ಎ.ಡಿ.ಸಿ.ರೂಪಾ

Must read

ಬಂಟ್ವಾಳ: ನಾಡ ಕಚೇರಿ ಅಟಲ್ ಜಿ ಜನಸ್ಮೇಹಿ ಕೇಂದ್ರ ಆಧಾರ್ ನಲ್ಲಿ ಕೆಲಸ ಮಾಡುತ್ತಿದ್ದ ಮೂರು ಆಪರೇಟರ್ ಗಳನ್ನು ಕೆಲಸದಿಂದ ಸಸ್ಪೆಂಡ್ ಮಾಡುವಂತೆ ಎ.ಡಿ.ಸಿ.ರೂಪಾ ಅವರು ಆದೇಶ ಹೊರಡಿಸಿದ್ದಾರೆ.
ವಿಟ್ಲದ ಪ್ರಭಾ ಹಾಗೂ ಬಂಟ್ವಾಳ ಆಧಾರ್ ಕೇಂದ್ರದ ಆಶಾ, ವಿಜಯ ಅವರನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆ.
ಮೇಲಾಧಿಕಾರಿಗಳಿಗೆ ಯಾರಿಗೂ ಮಾಹಿತಿ ನೀಡದೆ ಅಧಾರ್ ಕೇಂದ್ರದ ಲ್ಲಿ ಸಿಬ್ಬಂದಿಗಳು ಆಧಾರ್ ತಿದ್ದುಪಡಿ ಸುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆಧಾರ್ ತಿದ್ದುಪಡಿ ಯಲ್ಲಿ ವಸೂಲಿ ಮಾಡಿದ ಲಕ್ಷಾಂತರ ರೂ ಹಣವನ್ನು ಇಲಾಖೆಗೆ ಕಟ್ಟದೆ ತಮ್ಮ ಬಳಿಯಲ್ಲಿಯೇ ಉಳಿಸಿಕೊಂಡಿದ್ದರು.
ಈ ವಿಷಯ ಕೊನೆಗೆ ತಹಶೀಲ್ದಾರ್ ರಶ್ಮಿ ಅವರ ಗಮನಕ್ಕೆ ಬಂದಿದ್ದು, ಕೂಡಲೇ ಹಣ ವನ್ನು ಇಲಾಖೆಯ ಖಾತೆಗೆ ಜಮಾ ಮಾಡಿಸಿದ್ದರು.
ಆದರೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ದಿನಗೂಲಿ ನೌಕರರಾದ ಮೂವರನ್ನು ಕೆಲಸದಿಂದ ಸಸ್ಪೆಂಡ್ ಮಾಡುವಂತೆ ಅಪಾರ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.
ಬದಲಿ ವ್ಯವಸ್ಥೆ ಮಾಡುವ ವರೆಗೆ ಇಂದಿನಿಂದ ಎರಡು ದಿನಗಳ ಕಾಲ ಅಧಾರ್ ಕೇಂದ್ರ ಸ್ಥಗಿತಗೊಳಿಸಲಾಗಿದೆ ಎಂದು ತಹಶೀಲ್ದಾರ್ ಕಚೇರಿ ತಿಳಿಸಿದೆ.

More articles

Latest article