ವಿಟ್ಲ : ವಿಟ್ಲ ಜೇಸಿಐ ಸಪ್ತಾಹದ ಸಮಾರೋಪ ಸಮಾರಂಭವು ವಿಟ್ಲ ವಿಠಲ ಪ.ಪೂ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ಅಧ್ಯಕ್ಷ ಬಾಲಕೃಷ್ಣ ವಿಟ್ಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪುತ್ತೂರು ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮುಖ್ಯಸ್ಥರಾದ ಡಾ.ನರೇಂದ್ರ ರೈ ದೇರ್ಲ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿ, ಆಧುನಿಕ ಜೀವನಶೈಲಿಯನ್ನು ಅಳವಡಿಸಿಕೊಂಡು ಮಾನವೀಯ ಮೌಲ್ಯಗಳನ್ನು ಮರೆತಿದ್ದೇವೆ. ಇದು ದೇಶದ ಅನನ್ಯತೆಗೆ ಮಾರಕವಾಗಬಹುದು. ಸಂಸ್ಕೃತಿ, ಮೌಲ್ಯಗಳ ಪಲ್ಲಟದ ಈ ಕಾಲಘಟ್ಟದಲ್ಲಿ ಜೇಸಿಐ ಸಂಸ್ಥೆಯು ಯಾವುದೇ ಎಡಬಲ ಹಾಗೂ ಧಾರ್ಮಿಕ ಸಿದ್ಧಾಂತಗಳಿಗೆ ಒಳಗಾಗದೇ ಯುವಕರನ್ನು ದೇಶಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲಗಳನ್ನಾಗಿ ಪರಿಚರ್ತಿಸುವ ಕಾರ್ಯ ಮಾಡುತ್ತಿದೆ ಎಂದರು.
ಜೇಸಿಐ ವಲಯ 15ರ ಉಪಾಧ್ಯಕ್ಷ ರಾಯನ್ ಉದಯ ಕ್ರಾಸ್ತಾ, ವಿಟ್ಲ ಜೇಸಿಐ ಮಾಜಿ ಅಧ್ಯಕ್ಷ ಹಸನ್ ವಿಟ್ಲ, ಮಾಜಿ ಅಧ್ಯಕ್ಷ ಬಾಬು ಕೆ.ವಿ., ಮಾಜಿ ಅಧ್ಯಕ್ಷ ಸೋಮಶೇಖರ್, ಜೆಸಿರೆಟ್ ಅಧ್ಯಕ್ಷೆ ಮಲ್ಲಿಕಾ ಬಿ.ಎಸ್. ಭಾಗವಹಿಸಿದ್ದರು.
ಇದೇ ಸಂದರ್ಭ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ವಿಠಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ ಅವರನ್ನು ಹಾಗೂ 15 ವರ್ಷಗಳಿಂದ ವಿವಿಧ ಶಾಲೆ ವಿದ್ಯಾರ್ಥಿಗಳನ್ನು ಕರೆ ತರುವ ನಾಲ್ವರು ರಿಕ್ಷಾ ಚಾಲಕರನ್ನು ಸಮ್ಮಾನಿಸಲಾಯಿತು. ನಾನಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಪ್ತಾಹ ನಿರ್ದೇಶಕ ಆರ್ತಿಕ್ ಪಿ. ಸಪ್ತಾಹದ ವರದಿ ಮಂಡಿಸಿದರು. ನವೀನ್‌ಚಂದ್ರ, ಅಕ್ಷತ್, ದಿನೇಶ್ ಶೆಟ್ಟಿ, ರಾಜೀವ್, ಹರ್ಷಿತ್, ಪರಮೇಶ್ವರ ಹೆಗ್ಡೆ, ಚಂದ್ರಹಾಸ ಶೆಟ್ಟಿ, ಗಣೇಶ್, ಅಭಿಷೇಕ್, ದೀಕ್ಷಿತ್, ಮನೋರಂಜನ್ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here