ವಿಟ್ಲ: ವಿಟ್ಲ ಜೇಸಿಐ ಸಪ್ತಾಹದ ಅಂಗವಾಗಿ ವಿಟ್ಲ ಜೇಸಿಐ ವತಿಯಿಂದ ಖ್ಯಾತ ಚಿತ್ರ ಕಲಾವಿದ ಸುರೇಶ್ ಹಂದಾಡಿಯವರ ಸ್ಮರಣಾರ್ಥ ಏರ್ಪಡಿಸಿದ್ದ ಬಂಟ್ವಾಳ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಮೇಗಿನಪೇಟೆ ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಖದೀಜಾ ಇಶಿಕಾ ಅನಿಲಕಟ್ಟೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಈಕೆ ಬರಹಗಾರ ಅಬೂಬಕರ್ ಅನಿಲಕಟ್ಟೆ ಮತ್ತು ರಝಿಯಾ ದಂಪತಿಯ ಪುತ್ರಿ.