ವಿಟ್ಲ: ವಿಟ್ಲ ಸಮೀಪದ ಮರಕ್ಕಿಣಿ ಎಂಬಲ್ಲಿ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕಾರ್ಮಿಕ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ನಿವಾಸಿ ಫಾರೂಕ್(35) ಮೃತಪಟ್ಟ ಯುವಕ. ಈತ ವಿಟ್ಲದ ಶಾಮಿಯಾನ ಸರ್ವೀಸ್‌ನಲ್ಲಿ ಕಳೆದ ಎಂಟು ವರ್ಷದಿಂದ ಕೆಲಸ ಮಾಡುತ್ತಿದ್ದು, ಸೆ.19ರಂದು ಅಡ್ಯನಡ್ಕ ಸಮೀಪದ ಮರಕ್ಕಿಣಿ ಎಂಬಲ್ಲಿ ಮನೆಯೊಂದರ ಮಹಡಿಯಿಂದ ಕೆಳಗಡೆ ಬಿದ್ದು ಗಂಭೀರ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಸ್ಪಂದಿಸದ ಆತ ಮೃತಪಟ್ಟಿದ್ದಾರೆ. ಈತ ವಿವಾಹಿತನಾಗಿದ್ದಾನೆ.