ವಿಟ್ಲ: ಪರಸ್ಪರ ಒಬ್ಬರಿಗೊಬ್ಬರು ಕ್ಷಮಿಸಿ, ಪ್ರೀತಿ ವಿಶ್ವಾಸದಿಂದ ಜೀವನ ನಡೆಸುವುದೇ ಶತಮಾನೋತ್ತರ ಬೆಳ್ಳಿ ಹಬ್ಬದ ನಿಜವಾದ ಸಂಭ್ರಮಾಚರಣೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಗುರು ಅತೀ ವಂದನೀಯ ಮ್ಯಾಕ್ಸಿಂ ಎಲ್ ನೊರೊನ್ಹಾ ಹೇಳಿದರು.
ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬಂಟ್ವಾಳ ತಾಲೂಕಿನ ಸೂರಿಕುಮೇರು ಸಮೀಪದ ಬೊರಿಮಾರ್ ಚರ್ಚ್ ಗೆ 125 ವರ್ಷದ ತುಂಬಿದ ಸವಿ ನೆನಪಿಗಾಗಿ ಹೊಸ ವಿನ್ಯಾಸದೊಂದಿಗೆ ನಿರ್ಮಿಸಲಾದ “ಮಾತೆ ಮರಿಯಮ್ಮ”ನವರ ಗ್ರೊಟ್ಟೊವನ್ನು ಮಂಗಳವಾರ ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಕಳೆದ ನೂರಿಪ್ಪತ್ತೈದು ವರ್ಷಗಳಲ್ಲಿ ಎಲ್ಲರನ್ನೂ ಒಂದಾಗಿ ಬೆಸೆಯುವ ಕೇಂದ್ರವಾಗಿ ಬೆಳೆದ ಚರ್ಚ್‌ಗೆ ಹೊಸದಾಗಿ ನಿರ್ಮಿಸಿದ ಗ್ರೊಟ್ಟೋ ಹೊಸ ಶಕ್ತಿ ಮತ್ತು ಸೌಂದರ್ಯ ವನ್ನು ತುಂಬಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರು ವಲಯದ ಪ್ರಧಾನ ಧರ್ಮಗುರುಗಳು ವಂದನೀಯ ಆಲ್ಫ್ರೆಡ್ ಜೆ. ಪಿಂಟೊ ರವರು ಮಾತನಾಡಿ, ಬೊರಿಮಾರ್ ಚರ್ಚ್ ಒಂದು ಸಣ್ಣ ದೇವಾಲಯವಾದರೂ ಕಳೆದ ಒಂದು ವರ್ಷದಿಂದ ನಡೆಸಿದ ಅವಿಸ್ಮರಣೀಯ ಕಾರ್ಯಕ್ರಮಗಳು ಎಲ್ಲಾ ಚರ್ಚ್ ಗಳಿಗೆ ಮಾದರಿಯಾಗಿವೆ ಎಂದು ಶ್ಲಾಘಿಸಿದರು.
ಇದೇ ವೇಳೆ ನಡೆದ ಸಭಾ ಕಾರ್ಯಕ್ರಮದಲ್ಲಿ ನೂತನ ಗ್ರೊಟ್ಟೊ ನಿರ್ಮಾಣಕ್ಕೆ ದಾನಿಗಳಾಗಿ ಸಹಕರಿಸಿದ ತೆರೆಜಾ ಫೆರ್ನಾಂಡಿಸ್, ಶರಲ್ ಲಸ್ರಾದೊ, ವಿನೋಲಾ ಕ್ರಾಸ್ತ, ರೀನಾ ಡಿ’ಸೋಜ ಮತ್ತು ಜೆಸಿಂತಾ ಸಿಕ್ವೇರಾರವರನ್ನು ಸನ್ಮಾನಿಸಲಾಯಿತು.
ಗ್ರೊಟ್ಟೊ ನಿರ್ಮಾಣ ಮಾಡಿದ ವಾಲ್ಟರ್ ಪಿಂಟೊ ವಾಮಂಜೂರ್, ಪ್ರಧಾನ ಧರ್ಮಗುರು ಅತೀ ವಂದನೀಯ ಮ್ಯಾಕ್ಸಿಂ ನೊರೊನ್ಹಾ ಮತ್ತು ವಂದನೀಯ ಫಾದರ್ ಆಲ್ಫ್ರೆಡ್ ಪಿಂಟೊರವರನ್ನು ಚರ್ಚ್ ಪಾಲನಾ ಸಮಿತಿಯ ಪರವಾಗಿ ಗೌರವಿಸಲಾಯಿತು.
ಚರ್ಚ್ ಧರ್ಮಗುರು ಫಾದರ್ ಗ್ರೆಗರಿ ಪಿರೇರಾ, ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್, ಕಾರ್ಯದರ್ಶಿ ಪ್ರೀತಿ ಪಿರೇರಾ ಮತ್ತು ಸಿಸ್ಟರ್ ನ್ಯಾನ್ಸಿ ಉಪಸ್ಥಿತರಿದ್ದರು. ಕಾರ್ಯಕ್ರ‌ಮದ ಬಳಿಕ ನೆರೆದ ಎಲ್ಲಾ ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here