ಮುಂಬಯಿ: ಗುಜರಾತ್‌ನ ತುಳುವ ಜನನಾಯಕ, ಅಪದ್ಭಾಂಧವ, ತುಳು ಸಂಘ ಬರೋಡಾ ಇದರ ಅಧ್ಯಕ್ಷ, ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಬರೋಡಾ ಇದರ ಆಡಳಿತ ನಿರ್ದೇಶಕ ಶಶಿಧರ್ ಬಿ.ಶೆಟ್ಟಿ ಬೆಳ್ತಂಗಡಿ ಸಾರಥ್ಯ ಮತ್ತು ಮುಂದಾಳುತ್ವದಲ್ಲಿ ಗುಜರತ್‌ನ ಹೆಸರಾಂತ ಹಿರಿಯ ಪತ್ರಕರ್ತ ಎಂ.ಎಸ್ ರಾವ್ ಅಹ್ಮದಾಬಾದ್ ಇವರ ಸಹಯೋಗದೊಂದಿಗೆ ಗುಜರಾತ್ ಇಲ್ಲಿನ ಅಹ್ಮದಾಬಾದ್‌ನಲ್ಲಿ ಮತ್ತೊಂದು ತುಳು ಸಂಸ್ಥೆ ಅಸ್ತಿತ್ವಕ್ಕೆ ತರಲಾಗಿದ್ದು ಈ ಮೂಲಕ ಗುಜರಾತ್‌ನಲ್ಲಿ ತುಳು ಸಂಘಸಂಸ್ಥೆಗಳ ಮುಕುಟಕ್ಕೆ ಇನ್ನೊಂದು ಗರಿ ಮೂಡಿದಂತಾಗಿದೆ.

ತುಳು ಸಂಘ ಅಹಮದಾಬಾದ್ ಇದರ ಪ್ರಧಾನ ಪದಾಧಿಕಾರಿಗಳ ಆಯ್ಕೆ ಇದೀಗಲೇ ನಡೆಸಲಾಗಿದ್ದು ಗುಜರಾತ್‌ನ ಪ್ರತಿಷ್ಠಿತ ಮತ್ತು ಹೆಸರಾಂತ ಹಿರಿಯ ಉದ್ಯಮಿಗಳಾದ ಮೋಹನ್ ಸಿ.ಪೂಜಾರಿ (ಗೌರವಾಧ್ಯಕ್ಷ), ಅಪ್ಪು ಪಿ.ಶೆಟ್ಟಿ (ಅಧ್ಯಕ್ಷ), ಗಣಪತಿ ಶೆಟ್ಟಿಗಾರ್ (ಪ್ರಧಾನ ಕಾರ್ಯದರ್ಶಿ), ಶಶಿಧರ್ ಬಿ.ಶೆಟ್ಟಿ ಬೆಳ್ತಂಗಡಿ (ಸಂಚಾಲಕ) ಮತ್ತು ಎಂ.ಎಸ್ ರಾವ್ ಅಹ್ಮದಾಬಾದ್ (ಸಲಹೆಗಾರ) ಇವರನ್ನು ನೇಮಿಸಲಾಗಿದೆ.

ಸಮಾಲೋಚನಾ ಸಭೆಯನ್ನು ಇದೇ ಬರುವ 29 ರವಿವಾರ ಸೆಪ್ಟೆಂಬರ್ 2019, ಮಧ್ಯಾಹ್ನ 2.30 ಗಂಟೆಯಿಂದ ಅಹಮಬಾದ್ ಇಲ್ಲಿನ ಲಾ ಗಾರ್ಡನ್‌ನಲ್ಲಿ ಇರುವ ಠಾಕೋರ್ ಭಾಯಿ ದೇಸಾಯಿ ಸಭಾಗೃಹದಲ್ಲಿ ಆಯೋಜಿಸಲಾಗಿದ್ದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಇವರಿಂದ ಕೊಲ್ಲೂರು ಕ್ಷೇತ್ರ ಮಹಾತ್ಮೆ ತುಳು ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ ಎಂದು ಮೋಹನ್ ಸಿ.ಪೂಜಾರಿ ತಿಳಿಸಿದ್ದಾರೆ.

ತುಳು ಭಾಷೆ, ಸಂಸ್ಕೃತಿ, ಸಂಘಟನೆ, ತುಳುವರ ಐಕ್ಯತೆ ಮೂಲಕ ತುಳುನಾಡ ಹೊರನಾಡು, ರಾಷ್ಟ್ರದ ಪ್ರಧಾನಿ ಮೋದಿ ತವರೂರು ಗುಜರಾತ್‌ನಲ್ಲೇ ತುಳುವ ಭವಿಷ್ಯಕ್ಕೆ ನಾಂದಿಯಾಡಿದ ಈ ಸಂಘಟನೆ ಇದೇ ನವೆಂಬರ್‌ನಲ್ಲಿ ರಾಷ್ಟ್ರದ, ಕರ್ನಾಟಕ, ತುಳುನಾಡು ಅಲ್ಲಿನ ಘಣಾನುಘಟಿ ನಾಯಕರ, ತುಳುವ ಧುರೀಣರ ಉಪಸ್ಥಿತಿ ಹಾಗೂ ಸಾವಿರಾರು ತುಳುವರ ಸಮ್ಮುಖದಲ್ಲಿ ಈ ಸಂಸ್ಥೆಯನ್ನು ವಿಧ್ಯುತವಾಗಿ ಸೇವಾರ್ಪಣೆ ಮಾಡಲಾಗುವುದು ಎಂದು ಶಶಿಧರ್ ಬಿ.ಶೆಟ್ಟಿ ತಿಳಿಸಿದ್ದಾರೆ.

ಆ ಪ್ರಯುಕ್ತ ಗುಜರಾತ್ ರಾಜ್ಯದಾದ್ಯಂತ ನೆಲೆಯಾಗಿರುವ ತುಳು ಎಲ್ಲಾ ಸಂಘಸಂಸ್ಥೆಗಳ ಮುಖ್ಯಸ್ಥರು, ಸದಸ್ಯರು ಆಗಮಿಸಿ ಸಂಸ್ಥೆಯ ಬಲಾಢ್ಯತೆಗೆ ಸಹಕರಿಸುವಂತೆ ಸಂಘಟಕರು ಈ ಮೂಲಕ ವಿನಂತಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here