ಬಂಟ್ವಾಳ: ವಯೋನಿವೃತ್ತಿ ಪಡೆದ ಸುಜೀರು ಸರಕಾರಿ ಪ್ರೌಢ ಶಾಲಾ ಶಿಕ್ಷಕ ಮಹಮ್ಮದ್ ಬಿ.ತುಂಬೆ ಅವರ ಬೀಳ್ಕೊಡುಗೆ ಕಾರ್ಯಕ್ರಮ ಸುಜೀರು ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಮಾತನಾಡಿದ ಜಿ.ಪಂ.ಮಾಜಿ ಸದಸ್ಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪರಂಗಿಪೇಟೆ ಉಮ್ಮರ್ ಫಾರೂಕ್ ಅವರು ಸರಕಾರಿ ನೌಕರ ಸಮಾಜ ಸೇವೆಯ ಮೂಲಕ ಗುರುತಿಸಿ ಜನರಿಂದ ಪಡೆಯವ ಗೌರವಕ್ಕಿಂತ ದೊಡ್ಡ ಪ್ರಶಸ್ತಿ ಬೇರೆ ಇಲ್ಲ ಎಂದು ಅವರು ಹೇಳಿದರು.
ಸರಕಾರಿ ಉದ್ಯೋಗ ಎಂದ ಮೇಲೆ ನಿವೃತ್ತಿ ಎಂಬುದು ನಿಶ್ಚಿತ ಆದರೆ ಈ ನಡುವೆ ಜನರ ವಿಶ್ವಾಸ ಪ್ರೀತಿ ಗಳಿಸಿದರೆ ನಿವೃತ್ತಿಯ ಬಳಿಕ ಜೀವನದ ಕೊನೆವರೆಗೂ ನಮಗೆ ದಾರಿದೀಪವಾಗುತ್ತದೆ ಎಂದು ಅವರು ಹೇಳಿದರು.
ಆಶೀರ್ವಾದ ಮತ್ತು ಹಾರೈಕೆ ಮನುಷ್ಯನ ಬೆಳವಣಿಗೆ ದಾರಿಯಾಗುತ್ತದೆ.
ಕರ್ತವ್ಯ ಕ್ಕೆ ಚ್ಯುತಿ ಬಾರದಂತೆ , ಎಲ್ಲರೊಂದಿಗೆ ಬೆರೆತು, ಸೇವಾ ಮನೋಭಾವ ದಿಂದ ಬದುಕಿದಾಗ ಜೀವನ ಸಾರ್ಥಕ ಎಂದರು.
ವಿದ್ಯಾರ್ಥಿಯನ್ನು ಉತ್ತಮ ಪ್ರಜೆಯಾಗಿ ಮಾರ್ಪಾಡು ಮಾಡುವ ಮೂಲಕ ದೇಶಕ್ಕೆ ಆಸ್ತಿಯಾಗಿ ನೀಡುವ ದೇವರ ಕೆಲಸ ಇದ್ದರೆ ಅದು ಶಿಕ್ಷಕ ವೃತ್ತಿ, ಅ ವೃತ್ತಿಯನ್ನು ಪ್ರೀತಿಸಿ , ಗೌರವಿಸಿ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಅದ್ಯಕ್ಷ ರಮ್ಲಾನ್, ಗ್ರಾ.ಪಂ.ಸದಸ್ಯರಾದ ಹಾಸೀರ್ ಪೆರಿಮಾರ್, ಭಾಸ್ಕರ್, ಹುಸೈನ್, ಜುಬೈರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜಯವತಿ,ಶಿಕ್ಷಕಿಯರಾದ ಅನುಪಮ, ವೀಣಾ, ಗೀತಾ, ಜ್ಯೋತಿ ರಾವ್, ಪ್ರೇಮ, ಹೇಮಲತಾ ಹಾಗೂ ಸಿಬ್ಬಂದಿ ಮನೋಹರ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಶಶಿಮಂಗಲ ಸ್ವಾಗತಿಸಿದರು.
ಶಿಕ್ಷಕಿ ಹೇಮಲತಾ
ಧನ್ಯವಾದ ನೀಡಿದರು.
ಶಿಕ್ಷಕ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.