ಬಂಟ್ವಾಳ ಸೆ. ೨೨: ತೆಂಗು ಕೃಷಿ ಅಭಿವೃದ್ದಿ ಉದ್ದೇಶದಿಂದ ಕರ್ನಾಟಕ ತೆಂಗು ಅಭಿವೃದ್ದಿ ಸೌಹಾಧ ಸಹಕಾರಿ ಬಿ.ಸಿ.ರೋಡ್ ೨೦೧೭ರಲ್ಲಿ ಅಸ್ಥಿತ್ವಕ್ಕೆ ಬಂತು. ತೋಟಗಾರಿಕೆ, ಕೃಷಿ ಇಲಾಖೆ, ಕಾರ್ಮಿಕ ಇಲಾಖೆಗಳಲ್ಲಿ ರೈತಾಪಿ ವರ್ಗದ ಜನರಿಗೆ ಸಿಗುವ ವಿವಿಧ ಸವಲತ್ತುಗಳನ್ನು ತೆಗೆಸಿಕೊಡುವಲ್ಲಿ ಸೌಹಾರ್ಧ ಸಹಕಾರಿಯು ಅನೇಕ ಕೆಲಸಗಳನ್ನು ಮಾಡಿದೆ ಎಂದು ಸಹಕಾರಿ ಅಧ್ಯಕ್ಷ ರಾಜಾ ಬಂಟ್ವಾಳ ಹೇಳಿದರು.
ಅವರು ಸೆ. ೨೨ರಂದು ಬಿ.ಸಿ.ರೋಡ್ ಪದ್ಮಾ ಟೂರಿಸ್ಟ್ ಹೋಂ ಸಭಾಂಗಣದಲ್ಲಿ ನಡೆದ ಸಹಕಾರಿಯ ಪ್ರಥಮ ವಾರ್ಷಿಕ ಮಹಾಸಭೆಯ ಅಧಕ್ಷತೆ ವಹಿಸಿ ಮಾತನಾಡಿದರು.
ಮುಂದಿನ ಆರ್ಥಿಕ ವರ್ಷದಲ್ಲಿ ಒಂದು ಕೋಟಿ ರೂ. ಠೇವಣಿ, ನೂರು ಮಂದಿ ಹೆಚ್ಚುವರಿ ಸದಸ್ಯರ ನೋಂದಾವಣೆ ಗುರಿ ಉದ್ದೇಶ ಇರುವುದಾಗಿ ಪ್ರಕಟಿಸಿದರು.
ಸಹಕಾರಿಯು ಹಾಲಿ ವರ್ಷದಲ್ಲಿ ಸದಸ್ಯತ್ವ ನೋಂದಣಿಗೆ ಕನಿಷ್ಟ ರೂ. ೫ ಸಾವಿರ , ಮುಂದಿನ ವರ್ಷದಿಂದ ಅದು ೨೫ ರಸಾವಿರ ಆಗುವುದಾಗಿ ಪ್ರಕಟಿಸಿದರು.
ಹಿರಿಯ ಸಹಕಾರಿ, ಸಾಮಾಜಿಕ ಸೇವಾಕರ್ತ ಮಹಾಬಲ ರೈ ಬರ್ಕೆಗುತ್ತು ದೀಪ ಬೆಳಗಿಸಿ ಮಹಾಸಭೆಗೆ ಚಾಲನೆ ನೀಡಿದರು. ಬಳಿ ಮಾತನಾಡಿ ಕೃಷಿಕರಿಗೆ ಸರಕಾರಿ ಇಲಾಖೆಗೆ ಬರುವ ಅನುದಾನ ಸವಲತ್ತುಗಳ ಮಾಹಿತಿ ಇರುವುದಿಲ್ಲ. ಅಂತಹ ಸಂದ‘ದಲ್ಲಿ ಸಹಕಾರಿಯು ಮಾಹಿತಿ ನೀಡಿ ಸೌಲಭ ಸಿಗುವಂತೆ ಮಾಡುವ ಕೆಲಸ ಶ್ಲಾಘನೀಯ ಎಂದರು.
ರಂಗೋಲಿ ಹೋಟೆಲ್ ಮಾಲಕ ಸದಾನಂದ ಶೆಟ್ಟಿ ಮಾತನಾಡಿ ಸಹಕಾರಿಯ ಉದ್ದೇಶಗಳು ಜನಪರವಾಗಿದ್ದು ಕೃಷಿ ಪ್ರೇರಕವಾಗಿದೆ. ನಮ್ಮ ಊರಿನಲ್ಲಿ ಇದಕ್ಕೆ ಸೂಕ್ತ ವ್ಯಕ್ತಿಗಳನ್ನು ಸಂಪರ್ಕಿಸಿ ಸದಸ್ಯರಾಗುವಂತೆ ಸಹಕಾರ ನೀಡುವುದಾಗಿ ತಿಳಿಸಿದರು. ಬಾಲಕೃಷ್ಣ ಹೊಳ್ಳ ಬೈಪಾಡಿ ಸ‘ ಉದ್ದೇಶಿಸಿ ಮಾತನಾಡಿದರು.
ನಿರ್ದೇಶಕರಾದ ನಾರಾಯಣ ಪೂಜಾರಿ ದರ್ಖಾಸು, ಸದಾಶಿವ ಬಂಗುಲೆ, ವಿಠ್ಠಲ ಸಪಲ್ಯ. ಶಶಿಕಲಾ ಶೃಂಗೇರಿ, ಅಂಬಿಕಾ ಅನ್ನಪೂರ್ಣ, ನವೀನ್ ‘ಂಡಾರಿ, ನಾಮ ನಿರ್ದೇಶನ ಸದಸ್ಯರಾದ ಪ್ರೇಮನಾಥ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪವಿತ್ರ ಜಿ. ವರದಿ ವಾಚಿಸಿದರು. ಉಪಾಧಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ನಾಮ ನಿರ್ದೇಶನ ಸದಸ್ಯ ಶರಣಪ್ಪ ಉಮರಗಿ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here