Sunday, April 7, 2024

ಮರಿಯಮ್ಮನವರ ಹುಟ್ಟು ಹಬ್ಬ: ವಿಜೃಂಭಣೆಯಿಂದ ಆಚರಣೆ

ಬೊರಿಮಾರ್ ಚರ್ಚ್ ನಲ್ಲಿ ಕುರಲ್ ಪರ್ಬ ಆಚರಣೆ
1. ಬಂಟ್ವಾಳ:
ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬಂಟ್ವಾಳ ತಾಲೂಕಿನ ಬೊರಿಮಾರ್ ಚರ್ಚ್ ನಲ್ಲಿ ಭಾನುವಾರ ಮಾತೆ ಮರಿಯಮ್ಮನವರ ಹುಟ್ಟು ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ನೂತನವಾಗಿ ಉದ್ಘಾಟನೆಗೊಂಡ ಮಾತೆ ಮರಿಯಮ್ಮನವರಿಗೆ ಸಮರ್ಪಿತ ಗ್ರೊಟ್ಟೊದಲ್ಲಿ ಎಲ್ಲಾ ಭಕ್ತಾದಿಗಳು ಹೂಗಳನ್ನು ಅರ್ಪಿಸುವ ಮುಖಾಂತರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಎಲ್ಲಾ ಕ್ರೈಸ್ತ ಭಕ್ತಾದಿಗಳು ಕುಟುಂಬ ಸಮೇತ ಚರ್ಚ್ ಗೆ ಆಗಮಿಸಿ ದಿವ್ಯ ಬಲಿ ಪೂಜೆಯಲ್ಲಿ ಭಾಗವಹಿಸಿ ಪರಮ ಪ್ರಸಾದವನ್ನು ಸ್ವೀಕರಿಸಿ ಚರ್ಚ್ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾರವರು ಆಶೀರ್ವಚಿಸಿದ ತೆನೆಗಳನ್ನು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಎನ್ನುವ ಬೇಧಭಾವವಿಲ್ಲದೆ ಪರಸ್ಪರ ಒಬ್ಬರಿಗೊಬ್ಬರು ಹಂಚಿಕೊಂಡರು. ಕಳೆದ 125 ವರ್ಷಗಳಲ್ಲಿ ಹೇಗೆ ಪ್ರೀತಿಯಿಂದ ಜೀವನವನ್ನು ನಡೆಸುತ್ತಾ ಬಂದಿದ್ದೀರಿ ಹಾಗೆಯೇ ಇನ್ನು ಮುಂದೆಯೂ ಪರಸ್ಪರ ಒಬ್ಬರಿಗೊಬ್ಬರು ಕ್ಷಮಿಸುತ್ತಾ ಒಳ್ಳೆಯ ಜೀವನವನ್ನು ನಡೆಸಲು ಫಾದರ್ ಪಿರೇರಾ ಕರೆ ನೀಡಿದರು. ಚರ್ಚ್ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ರವರು ದಾನಿಗಳ ಹೆಸರುಗಳನ್ನು ವಾಚಿಸಿದರು. ಧರ್ಮಗುರುಗಳು ಎಲ್ಲರಿಗೂ ತೆನೆಗಳನ್ನು ನೀಡುವ ಮುಖಾಂತರ ಸನ್ಮಾನಿಸಿದರು. ಕಾರ್ಯದರ್ಶಿ ಪ್ರೀತಿ ಪಿರೇರಾ ಮತ್ತು ಸಿಸ್ಟರ್ ನ್ಯಾನ್ಸಿ ಉಪಸ್ಥಿತರಿದ್ದರು. ಎಲ್ಲಾ ಭಕ್ತಾದಿಗಳಿಗೂ ಕಬ್ಬನ್ನು ಹಾಗೂ ಸಿಹಿಯನ್ನು ಹಂಚಲಾಯಿತು.

2.ದಿ ಮೋಸ್ಟ್ ಹೋಲಿ ಸೇವಿಯರ್ ಚರ್ಚ್ ಅಗ್ರಾರ್, ಚರ್ಚ್ ನಲ್ಲಿ ಭಾನುವಾರ ಮಾತೆ ಮರಿಯಮ್ಮನವರ ಹುಟ್ಟು ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

3. ಅಲ್ಲಿಪಾದೆ ಚರ್ಚ್ ನಲ್ಲಿ ಭಾನುವಾರ ಮಾತೆ ಮರಿಯಮ್ಮನವರ ಹುಟ್ಟು ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

4.ಲೋರೆಟ್ಟೋ ಮಾತಾ ಚರ್ಚ್ ನಲ್ಲಿ ತೆನೆ ಹಬ್ಬ ವನ್ನು ಭಕ್ತಿಯಿಂದ ಆಚರಿಸಲಾಯಿತು. ಲೋರೆಟ್ಟೋ ಪದವು ನಲ್ಲಿ ಪ್ರಾರ್ಥನಾ ವಿಧಿ ಯೊಂದಿಗೆ ಆರಂಭವಾದ  ಆಚರಣೆ, ಕನ್ಯೆ ಮಾರಿಯಮ್ಮ ರವರ ಮೂರ್ತಿಯನ್ನು ಬ್ಯಾಂಡ್ ,ಪಟಾಕಿಗಳೊಂದಿಗೆ ಮೆರವಣಿಗೆ ಮೂಲಕ ಚರ್ಚ್ ಗೆ ತರಲಾಯಿತು.

ಈ ಸಂದರ್ಭದಲ್ಲಿ ಮಕ್ಕಳು ಹೂಗಳನ್ನು ಅರ್ಪಿಸಿದರು. ಅನಂತರ ಆರಂಭವಾದ ಬಲಿ ಪೂಜೆಯಲ್ಲಿ ಪ್ರಧಾನ ಧರ್ಮ ಗುರುಗಳಾಗಿ ಸಂತ ಜೋಸೆಫ್ ಸೆಮಿನರಿ ಯ ಪ್ರಾಧ್ಯಾಪಕರಾದ ವಂ ರೋಕ್ವಿನ್ ಪಿಂಟೋ ರವರು ಕನ್ಯಾ ಮಾರಿಯಮ್ಮ ರವರ ಜನ್ಮದಿನದ ಸಂದೇಶ ನೀಡಿದರು. ಅವರೊಂದಿಗೆ ವಂ ದಿಲ್ರರಾಜ್,ಹಾಗೂ ಲೋರೆಟ್ಟೋ ಚರ್ಚ್ ಧರ್ಮ ಗುರುಗಳಾದ ವಂ ಎಲಿಯಸ್ ಡಿಸೋಜಾ ಸಾವಿರಾರು ಭಕ್ತಾದಿಗಳೊಂದಿಗೆ ಬಲಿ ಪೂಜೆಯನ್ನು ಅರ್ಪಿಸಿದರು. ನೆರೆದಿದ್ದ ಭಕ್ತಾದಿಗಳಿಗೆ ತೇನೆಯನ್ನು ವಿತರಿಸಲಾಯಿತು.ಚರ್ಚ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಹನಗಳನ್ನು ಮೈದಾನದಲ್ಲಿ ಸಾಲಾಗಿ ನಿಲ್ಲಿಸಿ ಆಶಿರ್ವಚಿಸಲಾಯಿತು.ನೆರೆದಿದ್ದ ಸರ್ವ ಬಾಂಧವರಿಗೆ ಉಪಹಾರ ಹಾಗೂ ಕಬ್ಬು ವಿತರಿಸಲಾಯಿತು.ಕಥೋಲಿಕ್ ಸಭಾ ಲೋರೆಟ್ಟೋ ಘಟಕದ ವತಿಹಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಹಿತು.ಇಂದಿನ ಎಲ್ಲ ಕಾರ್ಯಕ್ರಮಗಳನ್ನು ಚರ್ಚ್ ನ ವಾಹನ ಚಾಲಕ – ಮಾಲಕ ಸಂಘ ,ಚರ್ಚ್ ಪಾಲನಾ ಮಂಡಳಿ ಯು ಆಯೋಜಿಸಿತ್ತು.ಕನ್ಯಾ ಮಾರಿಯಮ್ಮ ರವರ ಮೂರ್ತಿಯನ್ನು ಹಾಗೂ ಚರ್ಚ್ ಅಲ್ತಾರ್ ನ್ನು ಫ್ಲವರ್ ಡೆಕೋರೇಟರ್ಸ್ ಅಲಂಕರಿಸಿದರು.ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಿದವರನ್ನು ಧರ್ಮ ಗುರುಗಳು ವಂದಿಸಿದರು.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...