ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಮನವಿಯಂತೆ ಸ್ತ್ರೀ ಗ್ರೂಪ್ ಬೆಂಗಳೂರು ಇವರ ವತಿಯಿಂದ ಮಳೆಹಾನಿಯಿಂದ ಸಂಪೂರ್ಣ ನೆಲಸಮವಾಗಿ ವಾಸಕ್ಕೆ ಯೋಗ್ಯವಾಗಿರದ ಬಂಟ್ವಾಳ ತಾಲೂಕಿನ ಕಡುಬಡತನದ ಮೂರು ಮನೆಗಳನ್ನು ಗುರುತಿಸಿ ತಲಾ ರೂ 50 ಸಾವಿರದಂತೆ 1.50 ಲಕ್ಷ ಚೆಕ್ ನೀಡಿದರು.

ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ನಿವಾಸಿ ಭವಾನಿ ಶೆಟ್ಟಿ , ಪಂಜಿಕಲ್ಲು ಗ್ರಾಮದ ಸೋರ್ನಾಡು ನಿವಾಸಿ ಕಲ್ಯಾಣಿ ಸಪಲ್ಯ ಹಾಗೂ ಅಮ್ಮುಂಜೆ ಗ್ರಾಮದ ಮಾದುಕೋಡಿ ನಿವಾಸಿ ಗಂಗಯ್ಯ ಪೂಜಾರಿ ಅವರ ಮನೆಗಳು ಸಂಪೂರ್ಣ ಹಾನಿಯಾಗಿದ್ದು, ತೀರಾ ಬಡತನದ ಕುಟುಂಬ.
ಕಡುಬಡತನದಲ್ಲಿರುವ ಈ ಕುಟುಂಬದ ಮನೆ ನಿರ್ಮಾಣಕ್ಕೆ ಸಹಾಯಹಸ್ತವನ್ನು ಸ್ತ್ರೀ ಗ್ರೂಪ್ ಮಾಡಿದೆ.‌

ಬೆಂಗಳೂರು ಸ್ತ್ರೀ ಗ್ರೂಪ್ ನ ಪ್ರಮುಖರಾದ ತಾರಾ ಇರ್ಮಾಡಿ, ಗೀತಾ ಶೆಟ್ಟಿ, ಉಷಾ ಹೆಗ್ಡೆ , ವಿದ್ಯಾ ಶೆಟ್ಟಿ ಅವರು ಶುಕ್ರವಾರ ಮಧ್ಯಾಹ್ನ ಶಾಸಕರ ಆಪ್ತ ಸಹಾಯಕ ಪವನ್ ಕುಮಾರ್ ಶೆಟ್ಟಿ ಅವರ ಜೊತೆಯಲ್ಲಿ ತಾಲೂಕಿನ ಮೂರು ಮನೆಗಳಿಗೆ ಬೇಟಿ ನೀಡಿ ಸ್ಥಳದಲ್ಲಿಯೇ ಚೆಕ್ ನೀಡಿದರು.
ಬೆಂಗಳೂರಿನಲ್ಲಿ ಕಳೆದ 36 ವರ್ಷಗಳಿಂದ ಸ್ತ್ರೀ ಗ್ರೂಪ್ ಮೂಲಕ ಸಮಾಜಸೇವೆ ಮಾಡುತ್ತಿದ್ದೇವೆ. ಜೊತೆಗೆ ನೆರೆ ಸಂತ್ರಸ್ತರಿಗೆ ನೆರವು ನೀಡುವ ಕೆಲಸ ಕೂಡ ಈ ಸಂಘದಿಂದ ನಡೆಯುತ್ತಿದೆ. ಕಳೆದ ಬಾರಿ ಮಡಿಕೇರಿಯ ನೆರೆ ಸಂತ್ರಸ್ತರಿಗೆ ಧನಸಹಾಯ ಮಾಡಿದ್ದೇವೆ, ಈ ಬಾರಿ ಇಲ್ಲಿಗೆ ದ‌.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂರು ಮನೆಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದೇವೆ ಎಂದು ಗ್ರೂಪ್ ನ ಸದಸ್ಯೆ ಗೀತಾ ಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವದಾಸ ಶೆಟ್ಟಿ, ಬಿಜೆಪಿ ಕಾರ್ಯದರ್ಶಿ ರಮಾನಾಥ ರಾಯಿ, ರೈತ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ನಂದರಾಮ ರೈ, ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸಂತೋಷ್ ರಾಯಿಬೆಟ್ಟು, ಪ್ರಮುಖರಾದ ಶಶಿಕಾಂತ್ ಶೆಟ್ಟಿ, ಪುರುಷೋತ್ತಮ ಪೂಜಾರಿ ಮಜಲು, ಶಾಂತಪ್ಪ ಪೂಜಾರಿ ಮಣಿನಾಲ್ಕೂರು, ಧನಂಜಯ ಶೆಟ್ಟಿ ಸರಪಾಡಿ, ಆನಂದ ಶೆಟ್ಟಿ ಬಾಚಕೆರೆ, ರವೀಂದ್ರ ಶೆಟ್ಟಿ, , ಆಶೋಕ್ ಶೆಟ್ಟಿ ಸರಪಾಡಿ,
ಬಾಲಕೃಷ್ಣ, ಗೋಪಾಲ, ಅಖಿಲೇಶ್, ರಾಮಚಂದ್ರ ಎಂ.ಕೆ, ವಿಶ್ವನಾಥ ಎಂ.ಕೆ.ದಿನೇಶ್ ಬಂಗೇರ,ವಾಮನ ಆಚಾರ್ಯ, ಸುರೇಶ್ ಅಮ್ಮುಂಜೆ, ಕಾರ್ತಿಕ್ ಬಲ್ಲಾಳ್ ರವಿ ಅಮ್ಮುಂಜೆ ಇತರ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here