ಉಜಿರೆ: ದೆವರಅನುಗ್ರಹಕ್ಕೆ ಪಾತ್ರರಾಗಲು ಭಜನೆ ಸರಳ ಮಾಧ್ಯಮವಾಗಿದೆ. ಭಜನಾ ಸಂಸ್ಕೃತಿಯಿಂದ ಸಭ್ಯ, ಸುಸಂಸ್ಕೃತಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆಎಂದುಆನೆಗುಡ್ಡೆ ಶ್ರೀ ವಿನಾಯಕದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣಉಪಾಧ್ಯಾಯ ಹೇಳಿದರು.


ಅವರು ಸೋಮವಾರ ಧರ್ಮಸ್ಥಳದಲ್ಲಿ ಇಪ್ಪತ್ತೊಂದನೆ ವರ್ಷದ ಭಜನಾತರಬೇತಿ ಶಿಬಿರ ಮತ್ತು ಸಂಸ್ಕೃತಿ ಸಂವರ್ಧನಾಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮುನುಷ್ಯಜನ್ಮ ಶ್ರೇಷ್ಠ ಅವಕಾಶವಾಗಿದ್ದು ಸತ್ಯ, ಸದಾಚಾರ ಮತ್ತು ಸತ್ಕಾರ್ಯಗಳೊಂದಿಗೆ ಸಾರ್ಥಕಜಿವನ ನಡೆಸಬೇಕು.ನವವಿಧ ಭಕ್ತಿಯಿಂದದೆವರ ಸ್ತುತಿ, ಆರಾಧನೆ ಮಾಡಬೇಕು.ದುಶ್ಚಟಗಳಿಂದದೂರವಿದ್ದು ಸತ್ಸಂಗದಿಂದ ಭಜನೆ ಮೂಲಕ ಉತ್ತಮಜೀವನ ನಡೆಸಬೇಕುಎಂದುಅವರು ಸಲಹೆ ನೀಡಿದರು.
ರಾಗ, ತಾಳ, ಲಯ ಬದ್ಧವಾಗಿ ಶಿಸ್ತಿನಿಂದ ಭಜನಾ ಸಂಸ್ಕೃತಿ ಪ್ರಸಾರಕ್ಕೆ ಧರ್ಮಸ್ಥಳದ ಕೊಡುಗೆಯನ್ನುಅವರು ಶ್ಲಾಘಿಸಿ ಅಭಿನಂದಿಸಿದರು.
ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಭಜನೆಯಿಂದ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗಿ ಸಾಮಾಜಿಕ ಪರಿವರ್ತನೆಯಾಗಬೇಕು.ಗ್ರಾಮಗಳಲ್ಲಿ ಸ್ವಚ್ಛತೆಯೊಂದಿಗೆಉತ್ತಮ ಸಂಸ್ಕಾರ ಮೂಡಿ ಬರಬೇಕು.ಭಜನಾ ಪಟುಗಳು ಆದರ್ಶ ನಾಯಕತ್ವದೊಂದಿಗೆಊರಿನ ಸರ್ವತೋಮುಖ ಪ್ರಗತಿಯ ರೂವಾರಿಗಳಾಗಬೇಕು ಎಂದು ಹೆಗ್ಗಡೆಯವರು ಕಿವಿ ಮಾತು ಹೇಳಿದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೆಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು.
ಭಜನಾತರಬೇತಿ ಶಿಬಿರದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು.ಕಾರ್ಯದರ್ಶಿ ಮಮತಾರಾವ್‌ಧನ್ಯವಾದವಿತ್ತರು.ಶ್ರೀನಿವಾಸ ರಾವ್‌ಕಾರ್ಯಕ್ರಮ ನಿರ್ವಹಿಸಿದರು.

ಮುಖ್ಯಾಂಶಗಳು:
೧೯೨೦ ಭಜನಾ ಮಂಡಳಿಗಳ ೩೮೪೦ ಮಂದಿಗೆ ಕಳೆದ ೨೦ ವರ್ಷಗಳಲ್ಲಿ ಭಜನಾತರಬೇತಿ ನೀಡಲಾಗಿದೆ.
ಈ ಬಾರಿ ೧೪೫ ಪುರುಷರು ಹಾಗೂ ೧೦೫ ಮಹಿಳೆಯರು ತರಬೇತಿ ಶಿಬಿರದಲ್ಲಿ ಭಾಗವಹಸುತ್ತಿದ್ದಾರೆ.
ಶಿಬಿರದಲ್ಲಿ ಉಪನ್ಯಾಸ, ಚರ್ಚೆ, ಚಿಂತನ ಮಂಥನ, ಯೋಗಾಭ್ಯಾಸ, ನಗರ ಭಜನೆಯೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನು ಅಳವಡಿಸಲಾಗಿದೆ.
ಇದೇ ೨೨ರಂದು ಭಾನುವಾರ ಸಮಾರೋಪ ಸಮಾರಂಭ ಹಾಗೂ ೫೦೦ ಭಜನಾ ಪಟುಗಳಿಂದ ನೃತ್ಯ ಭಜನೆ ನಡೆಯಲಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here