ಮೂಡುಬಿದಿರೆ: ಕನ್ನಡಕ್ಕೆ ನಿರಂತರ ಪ್ರೋತ್ಸಾಹವಿರಲಿ. ಇಂಗ್ಲಿಷ್ ಕಲಿಯಿರಿ ಕನ್ನಡವನ್ನು ನಮ್ಮ ತಾಯಿಯನ್ನು ಮರೆತಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ, ಮೂಡುಬಿದಿರೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಹೋಬಳಿಮಟ್ಟದ ಊರಿಗೆ ತಂದು ತಂದು ಆಧುನಿಕ ಮೂಡುಬಿದಿರೆಗೆ ಮುನ್ನುಡಿ ಬರೆದ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಅವರು ಮೂಡುಬಿದಿರೆಯಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಟಿಸ್ಟರ್ ಡ್ಯಾನ್ಸ್ ಅಕಾಡೆಮಿ ಜಂಟಿಯಾಗಿ ಅಕಾಡೆಮಿಯ ನೂತನ ನೃಂತಾಗಣದಲ್ಲಿ ನಡೆಸಿದ ಮೂಡುಬಿದಿರೆ ತಾಲೂಕು ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕನ್ನಡದ ಪುಸ್ತಕಗಳ ಪ್ರಕಟಣೆ ಹೆಚ್ಚಾಗಿದೆ, ಆದರೆ ಓದುಗರ ಸಂಖ್ಯೆ ಕಡಿಮೆಯಾಗಿದೆ. ಮಕ್ಕಳಿಗೆ ಪಸ್ತಕಗಳನ್ನು ತಂದು ಕೊಡುವ ಮೂಲಕ ಓದುವ ಹವ್ಯಾಸವನ್ನು ಬಾಲ್ಯದಲ್ಲಿಯೇ ರೂಢಿಸ ಬೇಕೆಂದು ಅವರು ಕರೆ ನೀಡಿದರು.
ಪುನರೂರು ಅವರು ಅಕಾಡೆಮಿಯ ಸಂಸ್ಥಾಪಕ, ಪ್ರಧಾನ ಗುರು ನಿತಿನ್ ಕುಮಾರ್ ಮೂಡುಬಿದಿರೆ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ವಚನ ಸಾಹಿತ್ಯದ ಓದು ಮತ್ತು ಬರವಣಿಗೆ ನನ್ನ ಹವ್ಯಾಸ ನನಗೆ ಹೊಸ ಬದುಕನ್ನು ನೀಡಿತು. ಸಾಲ ಮಾಡಿ ಸಾಯಲು ಹೊರಟಿದ್ದ ಕೃಷಿಕನಾದ ನನ್ನನ್ನು ಹೊಸ ಬದುಕು ನೀಡಿ ಕರಾವಳಿಯ ಜನ ಬೆಳಸಿದ್ದಾರೆ ಎಂದು ಅಧ್ಯಕ್ಷತೆ ವಹಿಸಿದ್ದ ರೈತ ಕವಿ ವೀರಣ್ಣ ಕುರುವತ್ತಿ ಗೌಡರ್ ಪ್ರಶಂಸಿಸಿದರು.
ಭಾವನೆಗಳು ಎಲ್ಲರ ಮನದಲ್ಲೂ ಇರುತ್ತವೆ. ಅದನ್ನು ಕವಿತೆಗಳ ಮೂಲಕ, ನೃತ್ಯ, ಕಲೆ ಪ್ರತಿಭೆಯ ಮೂಲಕ ಪ್ರದರ್ಶಿಸ ಬಹುದು. ಅದಕೆಕ ಸೂಕ್ತ ವೇದಿಕೆಯನ್ನು ನಿರಂತರವಾಗಿ ಒದಗಿಸುತ್ತಾ ಬಂದಿರುವ ಅಜೆಕಾರು ಅಭಿನಂದನಾರ್ಹರು ಎಂದು ಉದ್ಘಾಟನಾ ಕವಿತೆ ವಾಚಿಸಿ ಮಾತನಾಡಿದ ಕವಿ, ವೈದ್ಯ ಡಾ.ಸುರೇಶ ನೆಗಳಗುಳಿ ಹೇಳಿದರು.
ಸಂಘಟಕ ಸುಬ್ರಮಣ್ಯ ಪಾಲಡ್ಕ, ಮಟ್ಟಿ ಲಕ್ಷ್ಮೀನಾರಾಯಣ ರಾವ್, ಜಯ ಶೆಟ್ಟಿ ಮೂಲ್ಕಿ ಮೊದಲಾದವರು ಉಪಷ್ಥಿತರಿದ್ದರು.
ಬೆಳದಿಂಗಳ ಮಹಿಳಾ ಬಳಗದ ಶಶಿಕಲಾ, ಕವಿತಾ, ಜ್ಯೋತಿ ಪ್ರಾರ್ಥಿಸಿದರು, ನಿತಿನ್ ಕುಮಾರ್ ಸರ್ವರನ್ನು ಸ್ವಾಗತಿಸಿದರು. ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಡಾ. ಶೇಖರ ಅಜೆಕಾರು ಅವರು ನಿರೂಪಿಸಿದರು. ಆಮಂತ್ರಣ ಪರಿವಾರದ ರೂವಾರಿ ವಿಜಯ ಕುಮಾರ್ ಜೈನ್ ವಂದಿಸಿದರು.
ಕವಿಕಾವ್ಯ ಸಂಭ್ರಮದಲ್ಲಿ ಪ್ರಹ್ಲಾದ ಮೂರ್ತಿ ಕಡಂದಲೆ, ಅವನಿ ಉಪಾಧ್ಯ ಬಿ ಕಾರ್ಕಳ, ಆರಾಧನಾ ನಿಡ್ಡೋಡಿ, ರಾಘವೇಂದ್ರ ಕರ್ವಾಲೋ ಹಿರಿಯಡಕ, ಶ್ಯಾಮಪ್ರಸಾದ್ ತೆಳ್ಳಾರು, ವಿಷ್ಣು ಪ್ರಸಾದ್ ಕೊಡಿಬೆಟ್ಟು, ಹಿದಾಯತ್ ಕಂಡ್ಲೂರಿ ಕುಂದಾಪುರ, ಸುಮತಿ ಪ್ರಭು ಅಂಡಾರು, ಪ್ರತೀಕ್ ಸಾಲ್ಯಾನ್ ಮೂಡುಬಿದಿರೆ ಮೊದಲಾದವರು ಕವಿತೆಗಳನ್ನು ವಾಚಿಸಿ ಕಾವ್ಯದ ಜೊತೆಗಿನ ಅನುಸಂಧಾನದ ಬಗ್ಗೆ ಮಾತನಾಡಿದರು.