ಬಂಟ್ವಾಳ: ಬಂಟರ ಸಂಘ ಅರಳ ವಲಯ ಇದರ ವಾರ್ಷಿಕ ಸಮಾರಂಭ ಮತ್ತು ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಅಣ್ಣಳಿಕೆ ಶ್ರೀ ವಿಘ್ನೇಶ್ವರ ಸಭಾ ಭವನದಲ್ಲಿ ಜರಗಿತು.
ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಟ ಸಮುದಾಯದವರು ಸಂಘಟನೆಗೊಂಡು ತಮ್ಮೊಂದಿಗೆ ಇತರ ಸಮುದಾಯದ ಅಭಿವೃದ್ಧಿಗೂ ಸಹಕರಿಸಬೇಕು. ಬಂಟ್ವಾಳ ತಾಲೂಕು ಬಂಟರ ಸಂಘವು ಇತರ ಸಮಾಜದವರಿಗೆ 40 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು.
ಬಂಟರ ಸಂಘ ಸಜಿಪ ವಲಯದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಬಂಟ್ವಾಳ ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ, ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಪ್ರಮುಖರಾದ ಬಾರ್ಲ ಸುಬ್ಬಯ್ಯ ಶೆಟ್ಟಿ, ಪದ್ಮರಾಜ ಬಲ್ಲಾಳ್ ಮಾವಂತೂರು, ರಾಜೇಶ್ ಶೆಟ್ಟಿ ಶೀತಾಳ ರಾಯಿ, ಸದಾನಂದ ಶೆಟ್ಟಿ ಪಂಜಿಕಲ್ಲು, ಶಶಿರಾಜ್ ಶೆಟ್ಟಿ ಕೊಳಂಬೆ, ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ವಿಶ್ವನಾಥ ಶೆಟ್ಟಿ ಸೊರ್ನಾಡು, ಅರಳ ಗಣೇಶ್ ಶೆಟ್ಟಿ (ಯಕ್ಷಗಾನ), ಸಂದೀಪ್ ಶೆಟ್ಟಿ (ನಾಟಕ),ತೀರ್ಥೇಶ್ ಶೆಟ್ಟಿ ಮಡಂದೂರು(ಕ್ರೀಡೆ)ಅವರನ್ನು ಸಮ್ಮಾನಿಸಲಾಯಿತು.ಕ್ರೀಡೋತ್ಸವದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು ಸ್ವಾಗತಿಸಿದರು. ಕಾರ್ಯದರ್ಶಿ ಹರೀಶ್ ಶೆಟ್ಟಿ ವರದಿ ಮಂಡಿಸಿದರು. ಲಕ್ಷ್ಮೀಧರ ಶೆಟ್ಟಿ ವಂದಿಸಿದರು. ದಿವ್ಯಾ ಎಸ್.ರೈ ಮಾವಂತೂರು ಮತ್ತು ವಿನುತಾ ಆಳ್ವ ಕಾರ್ಯಕ್ರಮ ನಿರೂಪಿಸಿದರು.ಕ್ರೀಡಾ ಕಾರ್ಯದರ್ಶಿ ಸುಕುಮಾರ ಆಳ್ವ ಸಹಕರಿಸಿದರು.