ವಿಟ್ಲ: ವಿಟ್ಲ ಶೋಕಮಾತೆ ಇಗರ್ಜಿ ವತಿಯಿಂದ ಪಾಲಕರ ಹಬ್ಬದ ಸಂಭ್ರಮದ ಪ್ರಯುಕ್ತ ಸರಕಾರದ ನಾನಾ ಇಲಾಖೆಯ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ವಿಟ್ಲದ ಶೋಕಮಾತೆ ಇಗರ್ಜಿಯಲ್ಲಿ ನಡೆಯಿತು.
ವಿಟ್ಲ ಶೋಕಮಾತ ಇಗರ್ಜಿ ಆಡಳಿತಗೊಳಪಟ್ಟ ವ್ಯಾಪ್ತಿಯ ನಿವೃತ್ತ ಶಿಕ್ಷಕರಿಗೆ, ಮಾಜಿ ಸೈನಿಕರಿಗೆ, ಕೇಂದ್ರದ ನಿವೃತ್ತ ನೌಕರು, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರು, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಸರಕಾರಿ ಕಚೇರಿ ಸಿಬ್ಬಂದಿಗಳು ಸೇರಿದಂತೆ ಸುಮಾರು 32 ಮಂದಿಯನ್ನು ಸನ್ಮಾನಿಸಲಾಯಿತು.
ವಿಟ್ಲ ಶೋಕಮಾತೆ ಇಗರ್ಜಿಯ ಧರ್ಮಗುರು ಎರಿಕ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಸಂತಾ ರೀಟಾ ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಸುನೀಲ್ ಪ್ರವೀಣ್ ಪಿಂಟೊ, ಅಜ್ಮೀರ್ ಧರ್ಮಕೇಂದ್ರದ ಧರ್ಮಗುರು ಜೋನ್ ಪಾಯಸ್, ಮುಂಬೈ ಪ್ರಾಂತ್ಯದ ಧರ್ಮಗುರು ಆಶಿಸ್ ರೋಡ್ರಿಗಸ್, ಮಂಗಳೂರು ರಚನಾ ಸಂಸ್ಥೆಯ ಅಧ್ಯಕ್ಷ ಎಲಿಯಸ್ ಸಾಂತ್ತಿಸ್, ವಿಟ್ಲ ಶೋಕಮಾತೆಯ ಚರ್ಚ್‌ನ ಪಾಲನ ಸಮಿತಿ ಉಪಾಧ್ಯಕ್ಷ ಲೂಯಿಸ್ ಮಸ್ಕರೇಂಞಸ್, ಕಾರ್ಯದರ್ಶಿ ಬಿ.ವಿ ಮಾಡ್ತ ಉಪಸ್ಥಿತರಿದ್ದರು.
ಜಾಸ್ಮಿನ್ ವೇಗಸ್ ನಿರೂಪಿಸಿದರು. ವಿಜಯ ಪಾಯಸ್ ಪರಿಚಯಿಸಿದರು. ಲೂಯಿಸ್ ಮಸ್ಕರೇಂಞಸ್ ಸ್ವಾಗತಿಸಿದರು. ಮನೋಹರ್ ಲ್ಯಾನ್ಸಿ ಡಿ’ ಸೋಜ ವಂದಿಸಿದರು. ಬಿ.ವಿ ಮಾಡ್ತ ಸನ್ಮಾನಿತರ ಪಟ್ಟಿ ಓದಿದರು.