ವಿಟ್ಲ: ಯಕ್ಷಭಾರತ ಸೇವಾ ಪ್ರತಿಷ್ಠಾನದ ವತಿಯಿಂದ ವಿಟ್ಲ ಭಗವತೀ ದೇವಸ್ಥಾನದ ರಂಗಮಂಟಪದಲ್ಲಿ ಭಾನುವಾರ ಉಭಯ ತಿಟ್ಟುಗಳ ಹೆಸರಾಂತ ಯಕ್ಷ ದಿಗ್ಗಜರ ಕೂಡುವಿಕೆಯಲ್ಲಿ ಮಳೆಗಾಲದ ಹಗಲು ರಾತ್ರಿ ಯಕ್ಷಗಾನ, ಸಭೆ, ಸಮ್ಮಾನ ನಡೆಯಿತು.
ಲಯನ್ಸ್ ಜಿಲ್ಲೆಯ ಯಕ್ಷಗಾನ ಕಾರ್ಯಕ್ರಮ ಸಂಯೋಜಕ ಯೋಗೀಶ್ ಕುಮಾರ್ ಜೆಪ್ಪು ಅವರು ಸಭಾ ಕಾರ್ಯಕ್ರವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ವಿಟ್ಲ ಭಗವತೀ ದೇವಸ್ಥಾನದ ವ್ಯವಸ್ಥಾಪಕ ಕೇಶವ ಆರ್.ವಿ., ಯಕ್ಷಧ್ರುವ ಪಟ್ಲ ಫೌಂಡೇಶನ್ ವಿಟ್ಲ ಘಟಕ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಡಾ.ರಮೇಶ್ಚಂದ್ರ ಸಿ.ಜಿ.ಬಲಿಪಗುಳಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲ್ತಡ್ಕ ಭಾಗವಹಿಸಿದ್ದರು.
ಇದೇ ಸಂದರ್ಭ ಕಲಾವಿದ ಸಂತೋಷ್ ಕುಮಾರ್ ಮಾನ್ಯ, ಹವ್ಯಾಸಿ ಕಲಾವಿದ ಈಶ್ವರ ಭಟ್ ಪೂರ್ಲಪ್ಪಾಡಿ ಅವರನ್ನು ಸಮ್ಮಾನಿಸಲಾಯಿತು. ಯಕ್ಷಗುರು ಬಾಯಾರು ಶಿವಪ್ಪ ಜೋಗಿಯವರನ್ನು ಶಿಷ್ಯರು ಗೌರವಿಸಿದರು.
ಯಕ್ಷಭಾರತ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಂಜೀವ ಪೂಜಾರಿ ಪ್ರಸ್ತಾವಿಸಿ, ಸ್ವಾಗತಿಸಿದರು. ಉಪನ್ಯಾಸಕ ಶ್ರೀಧರ ಶೆಟ್ಟಿಗಾರ ವನಭೋಜನ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಜೋಡುಕಲ್ಲು ಸಮ್ಮಾನಪತ್ರ ವಾಚಿಸಿದರು.
ಮಧ್ಯಾಹ್ನ ಬಾಯಾರು ಶಿವಪ್ಪ ಜೋಗಿ ಅವರ ಶಿಷ್ಯರಿಂದ ನರಕಾಸುರ ಮೋಕ್ಷ ಎಂಬ ಪೌರಾಣಿಕ ಯಕ್ಷಗಾನ, ಸಭೆಯ ಬಳಿಕ ಅನುಭವಿ ಕಲಾವಿದರಿಂದ ಓಂ ನಮಃ ಶಿವಾಯ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.