ಬಂಟ್ವಾಳ: ಕಳೆದ ಎರಡು ತಿಂಗಳ ಕಾಲ ಸುರಿದ ವಿಪರೀತ ಮಳೆಯ ಸಂದರ್ಭದಲ್ಲು ರಾತ್ರಿ ಹಗಲೆನ್ನದೆ ಕರ್ತವ್ಯ ನಿರ್ವಹಿಸಿದ ಮೆಸ್ಕಾಂ ಇಲಾಖೆಯ ಇಂಜಿನಿಯರ್, ಲೈನ್ ಮ್ಯಾನ್ ಮತ್ತು ಸಿಬಂದಿಗಳನ್ನು” ಸೂಪರ್ ಮ್ಯಾನ್, ಪವರ್ ಮ್ಯಾನ್, ಲೈನ್ ಮ್ಯಾನ್ ” ಎಂಬ ಬಿರುದನ್ನಿತ್ತು ವಾಮದಪದವಿನ ಸಾರ್ವಜನಿಕ ಗಣೇಶೋತ್ಸವದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಸನ್ಮಾನಿಸಿ ಅಭಿನಧಿಸಲಾಯಿತು. ಸ್ಥಳೀಯ ಹಿರಿಯರು, ಸಮಿತಿಯ ಮಾಜಿ ಅಧ್ಯಕ್ಷ ದಪ್ಪರಬೈಲ್ ವೆಂಕಪ್ಪ ಶೆಟ್ಟಿ ಹಾಗೂ ಮಾಜಿ ಕಾರ್ಯದರ್ಶಿ ಜಿ.ಕೆ.ಭಟ್ ಅವರು ಇಂಜಿನಿಯರ್ ಮತ್ತು ಲೈನ್ ಮ್ಯಾನ್ ಗಳನ್ನು ಸನ್ಮಾನಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ದೇರಳಕಟ್ಟೆ ವಿದ್ಯಾರತ್ನ ವಿದ್ಯಾಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಅವರು ವಹಿಸಿದ್ದರು. ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ: ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಧಾರ್ಮಿಕ ಉಪನ್ಯಾಸಗೈದರು. ಬಂಟ್ವಾಳ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಗಾಣದಪಡ್ಪು, ಮಾಜಿ ತಾ.ಪಂ.ಸದಸ್ಯ ರತ್ನಕುಮಾ್ ಚೌಟ, ಪುಂಜಾಲಕಟ್ಟೆ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸೌಮ್ಯ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಕುಕ್ಕಿಬೆಟ್ಟು ನವೀನ್ ಶೆಟ್ಟಿ ಸ್ವಾಗತಿಸಿದರು. ದೇವಿಪ್ರಸಾದ್ ಶೆಟ್ಟಿ ವಂದಿಸಿದರು. ಕೆ.ರಮೇಶ್ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು.