Wednesday, October 25, 2023

ಇಚ್ಚಾಶಕ್ತಿಯಿಂದ ಕೆಲಸ ಮಾಡಿದಾಗ ನಿಗದಿತ ಗುರಿ ಸಾಧ್ಯ: ಕರ್ಕೇರ

Must read

ಬಂಟ್ವಾಳ: ಬಂಟ್ವಾಳ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ತಾ.ಪಂ.ಎಸ್.ಜಿ.ಎಸ್.ವೈ.ಸಭಾಂಗಣದಲ್ಲಿ ನಡೆಯಿತು.
ಬಳಿಕ ಮಾತನಾಡಿ ದ ಅವರು ಪಿ.ಡಿ.ಒ.ಗಳು ತಾಲೂಕಿನ ಪ್ರತಿ ಶಾಲೆಯ ಶಾಲಾಭಿವೃದ್ದಿ ಸಮಿತಿಯ ವರ ಪ್ರತ್ಯೇಕ ಸಭೆ ಕರೆದು ಎಲ್ಲಾ ಶಾಲೆಗಳಿಗೆ ಅವರಣಗೋಡೆ ನಿರ್ಮಾಣದ ಬಗ್ಗೆ ಮಾಹಿತಿ ನೀಡಿ ಕ್ರಿಯಾ ಯೋಜನೆಗೆ ಸೇರಿಸಬೇಕು ಎಂದು ಅವರು ಹೇಳಿದರು.
ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದಾಗ ಮಾತ್ರ ಎನ್.ಆರ್.ಜಿ ಯೋಜನೆ ನಿಗದಿತ ಗುರಿ ತಲುಪಲು ಸಾಧ್ಯವಾಹಬಹುದು ಎಂದು ಅವರು ಹೇಳಿದರು.
ಪಂಚಾಯತ್ ವ್ಯಾಪ್ತಿಯಲ್ಲಿ ಬಾಕಿಯಾದ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಿ ಮಂಜೂರಾತಿ ಗಾಗಿ ತಿಂಗಳ ಅಂತ್ಯದೊಳಗೆ ತಾಲೂಕು ಪಂಚಾಯತ್ ಗೆ ನೀಡುವಂತೆ ಇ.ಒ.ರಾಜಣ್ಣ ತಿಳಿಸಿದರು. ‌
14ನೇ ಹಣಕಾಸು ಯೋಜನೆಯಲ್ಲಿ ತಾಲೂಕಿಗೆ ಕೋಟ್ಯಾಂತರ ರೂಗಳು ಅಭಿವೃದ್ಧಿ ಕಾರ್ಯಕ್ಕಾಗಿ ಬಂದಿರುವುದರಿಂದ ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು ಎಂದು ಬಂಟ್ವಾಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಪಿ.ಡಿ.ಒ.ಗಳಿಗೆ ತಿಳಿಸಿದರು. ‌
ಎನ್.ಆರ್.ಜಿ.ಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸದ ಹಿನ್ನೆಲೆಯಲ್ಲಿ ಇ.ಒ.ಅವರು ಪಿ.ಡಿ.ಒ.ಗಳಿಗೆ ಇಚ್ಚಾಶಕ್ತಿಯಿಂದ ಕೆಲಸ ಮಾಡಿ ಕಾರಣ ನೀಡಿ ಜವಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಬೇಡ ಎಂದು ಹೇಳಿದರು.

ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ ಉಪಸ್ಥಿತರಿದ್ದರು.

More articles

Latest article