ಬಂಟ್ವಾಳ: ಬಂಟ್ವಾಳ ತಾಲೂಕು ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿದೋದ್ಧೇಶ ಸಹಕಾರಿ ಸಂಘ ನಿಯಮಿತವು  2018-19 ನೇ ಸಾಲಿನಲ್ಲಿ 7.87.985 ರೂ.ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎ.ಸತೀಶ್ಚಂದ್ರ ಹೊಸಮನೆ ತಿಳಿಸಿದ್ದಾರೆ.          ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್ ಜಿಎಸ್ ಆರ್ ವೈ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಾಂಡವರಕಲ್ಲಿನಲ್ಲಿರುವ ಸಂಘದ ಶಾಖೆಯು ಪ್ರಸಕ್ತ ಸಾಲಿನಲ್ಲಿ ಲಾಭದಲ್ಲಿದೆ ಎಂದರು.                       ಶಾಖೆಯ ಅಭಿವೃದ್ದಿ ದೃಷ್ಠಿಯಿಂದ ಕೆಲವೊಂದು ಕಾರ್ಯ ಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದ ಅವರು ಸಂಘದ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ಪಾಲುಬಂಡವಾಳ ಹೆಚ್ಚಿಸಲು ಪ್ರಯತ್ನಿಸುವುದು,ಠೇವಣಿ ಸಂಗ್ರಹಕ್ಕೆ ಒತ್ತು ನೀಡುವುದು ಹಾಗೂ ಸಾಲ ಸೌಲಭ್ಯವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು. ದ.ಕ.ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಸಂಘವು ಪ್ರಸಕ್ತ ವರ್ಷ 2,77,44,835  ರೂ. ವಿವಿಧ ಸಾಲವನ್ನು ನೀಡಿದೆ.24,36,063 ರೂ.ವಿವಿಧ ರೀತಿಯ ನಿಧಿಯು ಇದೆ ಎಂದು ವಿವರಿಸಿದ ಅಧ್ಯಕ್ಷ ಕೆ.ಎ.ಸತೀಶ್ಚಂದ್ರ ಅವರು, ಸಂಘವು ವರದಿ ವರ್ಷದಲ್ಲಿ 3,56,928 ರೂ.ವಿನ ಜೇನು ಮತ್ತು ಜೇನು ಪರಿಕರಗಳನ್ನು ಮಾರಾಟ ಮಾಡಿ 70,878 ರೂ.ಲಾಭವನ್ನು ಗಳಿಸಿದೆ ಎಂದು ಹೇಳಿದರು. ನಿರ್ದೇಶಕರಾದ ಬಿ.ಪದ್ಮಶೇಖರ ಜೈನ್,ತಿಮ್ಮಪ್ಪ ಪೂಜಾರಿ ಕುಕ್ಕಿಪ್ಪಾಡಿ,ಈಶ್ವರ ಭಟ್ ಬೋಳಂತೂರು,ಅರವಿಂದ ಭಟ್ ಮಡಾವು,ವಸಂತ ಮಿತ್ತೊಟ್ಟು,ರಾಮಚಂದ್ರ ಕಂರ್ಬಡ್ಕ,ರಾಜೇಂದ್ರ ಹಾರ್ದೊಟ್ಟು,  ಎ.ಕೆ.ಹ್ಯಾರೀಸ್ ಮಂಚಿ,ಈಶ್ವರ ಬಾಳ್ತಿಲ, ಕಾಂಚಲಾಕ್ಷಿ ಮಣಿನಾಲ್ಕೂರು,ಕೋಕಿಲ ಪಾಂಡವರಕಲ್ಲು ರವರು ವೇದಿಕೆಯಲ್ಲಿದ್ದರು.ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುಣಶೇಖರ ಕೊಡಂಗೆ ಗತವರ್ಷದ ವರದಿ ವಾಚಿಸಿದರು. ನಿರ್ದೇಶಕ ಮೋಹನ್ ಪಿ.ಎಸ್.ಸ್ವಾಗತಿಸಿ,ವಂದಿಸಿದರು‌. ಸಭೆಯಲ್ಲಿ ಹಾಜರಾದ ಸಂಘದ ಎಲ್ಲಾ ಸದಸ್ಯರಿಗೂ ತೆಂಗು,ಕಂಗು,ಕರಿಮೆಣಸಿನ ಸಸಿಯನ್ನು ವಿತರಿಸಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here