ಬಂಟ್ವಾಳ: ಬಂಟ್ವಾಳ ತಾಲೂಕು ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ, ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಹಾಗೂ ಶ್ರೀ ಕ್ಷೇ.ಧ.ಗ್ರಾ. ಯೋಜನೆ ಸಿದ್ದಕಟ್ಟೆ ವಲಯ, ನವೋದಯ ಸ್ವಸಹಾಯ ಸಂಘ, ಪ್ರಗತಿಬಂಧು ಒಕ್ಕೂಟಗಳ ಸಹಕಾರದಲ್ಲಿ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವದ ಪ್ರಯುಕ್ತ 108 ಕಾಯಿಗಳ ಗಣಯಾಗ ಸೆ.2 ರಂದು ಜರಗಿತು.
ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಜನ ಮಂಡಳಿ ಅಧ್ಯಕ್ಷ ದಿನೇಶ್ ಭಟ್ ದೈಲ ಅವರು ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಎಸ್‌ವಿಎಸ್ ಕಾಲೇಜು ಉಪನ್ಯಾಸಕ ಡಾ. ರಮಾನಂದ ಭಟ್ ದೈಲ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಗ್ರಾ.ಪಂ.ಅಧ್ಯಕ್ಷ ದಯಾನಂದ ಸಪಲ್ಯ, ತಾ.ಪಂ.ಸದಸ್ಯೆ ಮಂಜುಳಾ ಸದಾನಂದ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ರಾಯಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸಿದ್ದಕಟ್ಟೆ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ, ಭಜನ ಮಂಡಳಿ ಗೌರವಾಧ್ಯಕ್ಷ ಹೇಮಚಂದ್ರ ಶೆಟ್ಟಿಗಾರ್, ಸಂಚಾಲಕ ಸದಾನಂದ ಮತ್ತಾವು, ಕಾರ್ಯದರ್ಶಿ ಸಂತೋಷ್ ಶಿವನಗರ, ಹರಿಪ್ರಸಾದ್ ರಾವ್, ರಾಜೇಶ್‌ಎಚ್, ಜಗದೀಶ ಗೌಡ, ಸದಾಶಿವ ಗೌಡ, ಗಿರಿಯಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಬಾಲಕೃಷ್ಣ ರಾವ್ ಸಿದ್ದೈಕೋಡಿ ಅವರನ್ನು ಸಮ್ಮಾನಿಸಲಾಯಿತು.
ಆಶಿತ್ ರಾಯಿ ಸ್ವಾಗತಿಸಿದರು. ಗಣೇಶ್‌ಬರೆಬಾಯಿ ವರದಿ ವಾಚಿಸಿದರು. ಮನೀಶ್ ಪೇರಳಗುಡ್ಡೆ ವಂದಿಸಿದರು. ಸಮೀತ್ ಶಿವನಗರ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಸಮಾರೋಪದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ರಾಯಿ ಬಾಲ ಯಕ್ಷಗಾನ ಕೇಂದ್ರದ ಸದಸ್ಯರಿಂದ ಶ್ರೀ ಗಣೇಶ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು.

ರಾಯಿ:ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಚಾಲನೆ: 

ಬಂಟ್ವಾಳ: ಬಂಟ್ವಾಳ ತಾಲೂಕು ರಾಯಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ರಾಯಿ ಪೇಟೆಯಲ್ಲಿ ನಡೆಯುತ್ತಿರುವ 8ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಸೆ.2ರಂದು ಚಾಲನೆ ದೊರಕಿತು.


ಬೆಳಗ್ಗೆ ನಿವೃತ್ತ ಶಿಕ್ಷಕ ಸೋಮಪ್ಪ ಮಡಿವಾಳ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಬದನಡಿಯ ಪ್ರ.ಅರ್ಚಕ ಸುಂದರ ಹೊಳ್ಳ ಅವರ ನೇತೃತ್ವದಲ್ಲಿ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠೆ ನಡೆಯಿತು. ಬಳಿಕ ಕೊಲ ಸಿದ್ದಿಶ್ರೀ ಮಹಿಳಾ ಭಜನ ಮಂಡಳಿಯಿಂದ ಭಜನ ಕಾರ್ಯಕ್ರಮ, ಸ್ಥಳೀಯ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಉದ್ಯಮಿ ರಾಜೇಶ್ ಶೆಟ್ಟಿ ಸೀತಾಳ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ನಾಯಕ್ ರಾಯಿ, ಸ್ಥಳದಾನಿ ರಮಣಿ ರೈ, ಸಮಿತಿ ಪದಾಽಕಾರಿಗಳಾದ ರಮಣಿ ರೈ, ಜಗದೀಶ ಕೊಯಿಲ, ರಾಮಚಂದ್ರ ಶೆಟ್ಟಿಗಾರ್, ಸುಽರ್ ಕುಮಾರ್ ಶೆಟ್ಟಿ, ಪ್ರಕಾಶ್ ಜೈನ್ ಜಂಕಳ, ಕೆ.ಪಿ.ಲೋಬೊ, ಸದಾನಂದ ಸೀತಾಳ, ಚಂದ್ರಶೇಖರ ಆಚಾರ್ಯ, ದಾಮೋದರ ಪೂಜಾರಿ, ಸತೀಶ್ ಕಾರಂಬಡೆ, ದೇವಪ್ಪ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here