Sunday, October 22, 2023

ಅ.3 ರಂದು ಪುಂಜಾಲಕಟ್ಟೆಯಲ್ಲಿ ‘ಸುಧನ್ವ’ ನೂತನ ಕಟ್ಟಡದ ಉದ್ಘಾಟನೆ

Must read

ಬಂಟ್ವಾಳ: ಪುಂಜಾಲಕಟ್ಟೆಯ ಹೃದಯಭಾಗದಲ್ಲಿ ಸುಮಾರು 1.60ಕೋ.ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಿಲಾತಬೆಟ್ಟು ವ್ಯವಸಾಯ ಸಹಕಾರ ಸಂಘದ ಹವಾನಿಯಂತ್ರಿತ ಕಚೇರಿ, ನೂತನ ಕಟ್ಟಡ “ಸುಧನ್ವ”ದ ಉದ್ಘಾಟನಾ ಸಮಾರಂಭ ಅಕ್ಟೋಬರ್ 3 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ ಅವರು ತಿಳಿಸಿದ್ದಾರೆ. ಗುರುವಾರ ಸಂಜೆ ನೂತನ ಕಟ್ಟಡದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ  ಈ ಬಗ್ಗೆ ಮಾಹಿತಿ ನೀಡಿದ ಅವರು, ಕಟ್ಟಡದ ಉದ್ಘಾಟನೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಂಘದ ಪ್ರಧಾನ ಕಚೇರಿಯ ಉದ್ಘಾಟನೆ ನೆರವೇರಿಸುವರು, ಸಂಸದ ನಳಿನ್ ಕುಮಾರ್ ಕಟೀಲ್ ಭದ್ರತಾ ಕೊಠಡಿ, ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಕಂಪ್ಯೂಟರೀಕರಣದ ಉದ್ಘಾಟನೆ ನೆರವೇರಿಸುವರು ಎಂದರು. ಹಾಗೆಯೇ ಕೃಷಿ ಉಪಕರಣ ಮಾರಾಟದ ವಿಭಾಗವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಲಿದ್ದು, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ಠೇವಣಿ ಪತ್ರ ಬಿಡುಗಡೆಗೊಳಿಸುವರು, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್ ಕೌಶಲ್ಯಾಭಿವೃದ್ದಿ ಖಾತೆಯ ಉದ್ಘಾಟನೆ ನೆರವೇರಿಸುವರು, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಸ್ವಸಹಾಯ ಸಂಘಗಳ ಠೇವಣಾತಿಪತ್ರ ಬಿಡುಗಡೆಗೊಳಿಸುವರು, ದ.ಕ.ಜಿಲ್ಲಾ ಕೃಷಿ ಅಭಿವೃದ್ದಿ ಸಹಕಾರಸಂಘಗಳ ಅಧ್ಯಕ್ಷ ರವೀಂದ್ರಕಂಬಳಿ, ಸಹಕಾರ ಸಂಘಗಳ ಉಪನಿಬಂಧಕರಾದ ಬಿ.ಕೆ.ಸಲೀಂ, ಬಂಟ್ವಾಳ ತಾ.ಸಹಕಾರ ಅಭಿವೃದ್ದಿ ಅಧಿಕಾರಿ ತ್ರಿವೇಣಿರಾವ್, ಪ್ರಗತಿಪರ ಕೃಷಿಕ ಉದಯಕುಮಾರ್, ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಡಾ.ಎಂ.ಹರ್ಷ ಸಂಪಿಗೆತ್ತಾಯ, ತಾ.ಪಂ.ಸದಸ್ಯ ರಮೇಶ್ ಕುಡ್ಮೇರ್, ಪಿಲಾತಬೆಟ್ಟು ವಿಎಸ್ಎಸ್ ಎನ್ ನ ಮಾಜಿ ಅಧ್ಯಕ್ಷೆ ಪರಮೇಶ್ವರಿ ಪಿ.ಭಟ್, ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಇರ್ವತ್ತೂರು ಗ್ರಾಪಂ ಅಧ್ಯಕ್ಷೆ ಸುಜಾತ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿಗಳು, ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು  ಕಾರ್ಯಕ್ರಮದ ಬಳಿಕ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಯಕ್ಷಗಾನ ತಾಳಮದ್ದಲೆ ಹಾಗೂ ದೇವದಾಸ ಕಾಫಿಕಾಡ್ ರವರ ಚಾಪರ್ಕತಂಡದಿಂದ ತುಳುಹಾಸ್ಯಮಯ ನಾಟಕವು ನಡೆಯಲಿದೆ ಎಂದರು.

ಸಂಘವು ನೈನಾಡಿನಲ್ಲಿ  ಸ್ವಂತಕಟ್ಟಡದಲ್ಲಿ ಹಾಗೂ ಇರ್ವತ್ತೂರಿನಲ್ಲಿರುವ ಶಾಖೆಯು ಪೂರ್ಣಪ್ರಮಾಣದಲ್ಲಿ ಕಾರ್ಯಚರಿಸುತ್ತಿದೆ ಎಂದ ಉಡುಪ ಅವರು ಬಾಂಬಿಲದಲ್ಲಿ ಮತ್ತೊಂದು ಶಾಖೆಯನ್ನು ತೆರೆಯುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.                    ಇದೀಗ ನೂತನ ಕಟ್ಟಡದಲ್ಲಿ ರೈತ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಉಪಕರಣಗಳ ಮಾರಾಟ ವಿಭಾಗವನ್ನು ತೆರೆಯಲಾಗುತ್ತಿದೆ,ಸದಸ್ಯರ ಬೇಡಿಕೆಗು ಆಡಳಿತ ಮಂಡಳಿ ತಕ್ಷಣ ಸ್ಪಂದಿಸುತ್ತಿದೆ.ಮುಂದಿನದಿನದಲ್ಲಿ ಸ್ವಂತ ಸ್ಥಳದಲ್ಲಿ ಸದಸ್ಯರ ಸಲಹೆಯನ್ನು ಆಧರಿಸಿ ಸಂಘದ ಸುಸಜ್ಜಿತ ಪ್ರಧಾನಕಚೇರಿ ವಾಣಿಜ್ಯ ಸಂಕೀರ್ಣ ವನ್ನು ನಿರ್ಮಿಸುವ ಯೋಜನೆಯು ಇದೆ, ಪ್ರಸ್ತುತ ಸಾಲಿನಲ್ಲಿ ಸಂಘವು 40 ಲಕ್ಷ ರೂ. ನಿವ್ವಳ ಲಾಭ ಹೊಂದಿದೆ ಎಂದು ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ. ಉಪಾಧ್ಯಕ್ಷುಮೇಶ್ ಪೂಜಾರಿ,ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ, ನಿರ್ದೇಶಕರಾದ ಸುಂದರ ನಾಯ್ಕ, ನಾರಾಯಣ ಪೂಜಾರಿ, ಪಿ.ಎಂ.ಪ್ರಭಾಕರ, ಬೂಬ ಸಪಲ್ಯ,ದಿನೇಶ್ ಮೂಲ್ಯ,ಮಾಜಿ ಮು.ಕಾ.ಬೂಬ ಪೂಜಾರಿ, ಕೇಶವ ಕಿಣಿ ಮೊದಲಾದವರಿದ್ದರು.

More articles

Latest article