ಬಂಟ್ವಾಳ: ಬಂಟ್ವಾಳ ತಾ| ಪುಂಜಾಲಕಟ್ಟೆಯಲ್ಲಿರುವ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಪುಂಜಾಲಕಟ್ಟೆ ನಂದಗೋಕುಲ ಸಭಾಭವನದಲ್ಲಿ ಶುಕ್ರವಾರ ಜರಗಿತು.
ಸಂಘದ ಅಧ್ಯಕ್ಷ ಕೆ. ಲಕ್ಷ್ಮೀ ನಾರಾಯಣ ಉಡುಪ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಸಂಘವು ೨೦೧೮-೧೯ನೇ ಸಾಲಿನ ಅಂತ್ಯಕ್ಕೆ 112 ಕೋಟಿ ರೂ.ಗಳ ವ್ಯವಹಾರ ನಡೆಸಿ 40.19 ಲ.ರೂ. ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದ ಅವರು ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡುವುದಾಗಿ ಘೋಷಣೆ ಮಾಡಿದರು.
ಸಂಘವು ಒಟ್ಟು 2,776 ಸದಸ್ಯತನ ಹೊಂದಿದ್ದು, 87.70 ಲ.ರೂ ಪಾಲು ಬಂಡವಾಳ, 17.18ಕೋ.ರೂ.ಠೇವಣಿ ಹೊಂದಿದೆ. ದ.ಕ.ಜಿಲ್ಲಾ ಕೇಂದ್ರಸಹಕಾರಿ ಬ್ಯಾಂಕ್‌ನಿಂದ 5.49 ಕೋ.ರೂ. ಸಾಲ ಪಡೆದಿದ್ದು, ಸದಸ್ಯರಿಗೆ 16.90 ಕೋ.ರೂ. ಸಾಲ ನೀಡಿದೆ. ಪ್ರಸಕ್ತ ಸಾಲಿನಲ್ಲಿ ಶೇ.96 ಸಾಲ ವಸೂಲಿ ಮಾಡಿ ದಾಖಲೆ ಸಾಧಿಸಿದೆ. ವ್ಯಾಪಾರ ವಹಿವಾಟಿನಲ್ಲಿ 7 ಲ.ರೂ ಲಾಭ ಪಡೆದಿದೆ. ಸಂಘ ಲಾಭ ಗಳಿಸುತ್ತಾ ಬಂದಿದ್ದು ಲೆಕ್ಕ ಪರಿಶೋಧನೆಯಲ್ಲಿ ಎ ಶ್ರೇಣಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಸಂಘದ ಶಾಖೆ ಇರುವ ಇರ್ವತ್ತೂರು, ನಯನಾಡು, ಮೂಡುಪಡುಕೋಡಿಗಳಲ್ಲಿ ಸ್ವಂತ ಜಾಗ ಖರೀದಿಸಿ ಕಟ್ಟಡ ನಿರ್ಮಿಸುವ ಚಿಂತನೆ ನಡೆಸಲಾಗಿದೆ ಎಂದರು. ಸಾಲ ವಸೂಲಾತಿ ಹಾಗೂ ಸಾಲ ಪಡೆಯುವಲ್ಲಿ ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸದಸ್ಯರ ಡಿವಿಡೆಂಡ್‌ನಲ್ಲಿ ಶೇ.2ನ್ನು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೀಡಲು ಸರ್ವ ಸದಸ್ಯರು ಸಮ್ಮತಿ ವ್ಯಕ್ತಪಡಿಸಿದರು. ಮೃತ ಪಟ್ಟ ಸದಸ್ಯರ ಕುಟುಂಬದವರಿಗೆ ಮರಣ ನಿಽಯಿಂದ ಧನಸಹಾಯ ನೀಡಲಾಯಿತು. ಹಾಗೂ ಸಾರ್ವಜನಿಕ ಉಪಕಾರ ನಿಽಯಿಂದ ಅಂಗವಿಕಲರಿಗೆ ಧನಸಹಾಯ ಹಾಗೂ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿಯಲ್ಲಿ ಅಽಕ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವೈದ್ಯಕೀಯ ವೆಚ್ಚಕ್ಕಾಗಿ ಧನಸಹಾಯ ವಿತರಿಸಲಾಯಿತು.

ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ತಾ.ಪಂ.ಸದಸ್ಯ ರಮೇಶ್ ಕುಡ್ಮೇರು, ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸಂಘದ ಉಪಾಧ್ಯಕ್ಷ ಉಮೇಶ್ ಪೂಜಾರಿ, ನಿರ್ದೇಶಕರಾದ ಬೂಬ ಸಪಲ್ಯ, ಸೀತಾರಾಮ ಶೆಟ್ಟಿ, ಸುಂದರ ನಾಯ್ಕ, ನಾರಾಯಣ ಪೂಜಾರಿ, ಚಂದ್ರಶೇಖರ ಹೆಗ್ಡೆ, ಸಂತೋಷ್ ಕುಮಾರ್ ಶೆಟ್ಟಿ, ಹರ್ಷಿಣಿ, ಸರೋಜಾ ಡಿ.ಶೆಟ್ಟಿ, ಪ್ರಭಾಕರ ಪಿ.ಎಂ., ದಿನೇಶ್ ಮೂಲ್ಯ, ಶಿವಯ್ಯ ಪರವ , ಸಿಬಂದಿ ವರ್ಗ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಕೆ. ಲಕ್ಷ್ಮೀ ನಾರಾಯಣ ಉಡುಪ ಸ್ವಾಗತಿಸಿದರು. ನಿರ್ದೇಶಕ ಪ್ರಭಾಕರ ಪಿ.ಎಂ. ವಂದಿಸಿದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ ಅವರು ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳ ವಿವರ ನೀಡಿದರು. ಭರತ್ ರಾಜ್ ಜೈನ್‌ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here