ಪ್ರಕೃತಿಗೆ ಯಾರಲ್ಲೂ ದ್ವೇಷವಿಲ್ಲ , ಪ್ರಕೃತಿಗೆ ನಾವು ವಿಮುಖವಾದಲ್ಲಿ  ಪ್ರಕೃತಿಯೂ ನಮಗೆ ಪ್ರತಿಕೂಲವಾಗಲಿದೆ , ಪ್ರಕೃತಿಯನ್ನು ಉಳಿಸಿ ಬೆಳೆಸುವ ಅರಿವು ನಮಗಿಲ್ಲದ ಪರಿಣಾಮ ಈ ಅನಾಹುತಗಳಿಗೆ ಕಾರಣ ವಾಗಿದೆ , ಅದರ ವಿನಃ ನಮಗೆ ಭವಿಷ್ಯವಿಲ್ಲ , ದುಡ್ಡು ಮಾತ್ರ ಸಂಪತ್ತಲ್ಲ ಎಂಬುದನ್ನು ನಾವು ತಿಳಿದಿರಬೇಕು , ಜಲ ಮೂಲಗಳನ್ನು ನಾವು ಕಾಪಾಡಬೇಕು ಕೆರೆ , ಕಟ್ಟೆ ಗಳು ತ್ಯಾಜ್ಯ ಸಂಗ್ರಹ ಗಾರ ಗಳಾಗುವುದು ಖೇದಕರ , ನಮ್ಮ ಜಿಲ್ಲೆ ಪ್ರಾಕೃತಿಕವಾಗಿ ಶ್ರೀಮಂತವಾಗಿದೆ ಅದರ ಸ್ವಚ್ಛತೆಯನ್ನು ಕಾಪಾಡುವ ಕೆಲಸ ನಮ್ಮಿಂದಾಗಲಿ ಎಂದುಶ್ರೀ  ಮಹಾವೀರ ಅಜ್ರಿ ಪ್ರಾದೇಶಿಕ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಉಡುಪಿ ಇವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬಂಟ್ವಾಳ ಇದರ ಮಾರ್ಗದರ್ಶನ ಹಾಗು ಆರ್ಥಿಕ ಸಹಕಾರದೊಂದಿಗೆ ಕೆರೆ ಅಭಿವೃದ್ಧಿ ಸಮಿತಿ ನೆತ್ತರಕೆರೆ ಇದರ ಸಹಭಾಗಿತ್ವದೊಂದಿಗೆ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ದಡಿ ಪುನಶ್ಚೇತನ ಗೊಳಿಸಲಾದ ಪುದು ಗ್ರಾಮ ದ  ನೆತ್ತರಕೆರೆ ಗೆ ಬಾಗಿನ ಅರ್ಪಣೆ ಕಾರ್ಯಕ್ರಮ ದಲ್ಲಿ ಬಾಗಿನ ಅರ್ಪಿಸಿ  ಮಾತನಾಡಿದರು.

 ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿಯವರು ಮಾತನಾಡಿ ಗ್ರಾಮದಲ್ಲಿ ಉತ್ತಮ ವಾದ ನೀರಿನ ಮೂಲ ವಿದ್ದಲ್ಲಿ ಕೃಷಿ ಅಭಿವೃದ್ಧಿ ಯಾಗಿ ಗ್ರಾಮ ಸ್ವಾವಲಂಬನೆ ಸಾದಿಸಬಹುದು . ಈಗಾಗಲೇ ಜಿಲ್ಲಾ ಪಂಚಾಯತ್ ಅನುದಾನ ದಿಂದ 2 ಲಕ್ಷ ರೂಪಾಯಿಗಳನ್ನು ಈ ಕೆರೆ ಯ ತಡೆಗೋಡೆ ಗೆ ವಿನಿಯೋಗಿಸಲಾಗಿದೆ ಎಂದರು.
   ಕೆರೆ ಅಭಿವೃದ್ಧಿ ಸಮಿತಿ ನೆತ್ತರಕೆರೆ ಅಧ್ಯಕ್ಷರಾದ ಸಂತೋಷ್ ಕುಮಾರ್  ಅದ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮ ದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ  ಪದ್ಮಶ್ರೀ ದುರ್ಗೇಶ್ ಶೆಟ್ಟಿ ತಾಲೂಕು ಪಂಚಾಯತ್ ಸದಸ್ಯರು , ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮ್ಲಾನ್  ಮಾರಿಪಳ್ಳ , ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ , ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಕೊಡಮಣ್ಣು ಕಾಂತಪ್ಪ ಶೆಟ್ಟಿ , ಬಂಟ್ವಾಳ ತಾಲೂಕು ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷರಾದ ಮಾದವ  ವಳವೂರು , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ , ನವೋದಯ ಮಿತ್ರ ಕಲಾ ವೃಂದ ದ ಅಧ್ಯಕ್ಷರಾದ ಸುರೇಶ ಭಂಡಾರಿ ಅರ್ಭಿ , ನೆತ್ತರಕೆರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ದಾಮೋದರ ನೆತ್ತರಕೆರೆ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಫರಂಗಿಪೇಟೆ  ಒಕ್ಕೂಟ ದ ಅಧ್ಯಕ್ಷರಾದ ಪದ್ಮನಾಭ , ಮತ್ತಿತರರು ಉಪಸ್ಥಿತರಿದ್ದರು
  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಯೋಜನಾಧಿಕಾರಿ  ಜಯಾನಂದ ಪಿ  ಯವರು ಸ್ವಾಗತಿಸಿ ದರು , ದಾಮೋದರ ನೆತ್ತರಕೆರೆ ವಂದಿಸಿದರು , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಕೃಷಿ ಮೇಲ್ವಿಚಾರಕರಾದ ಜನಾರ್ಧನ  ರವರು ನಿರೂಪಿಸಿರದರು .

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here