(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ: ಮಹಾನಗರದಲ್ಲಿನ ಬಂಟ ಸಮುದಾಯದ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ಜುಹೂ ಅಂಧೇರಿ ವರ್ಸೋವಾ ವಿಲೇಪಾರ್ಲೆ ಎಸೋಸಿಯೇಶನ್ ಆಫ್ ಬಂಟ್ಸ್ (ಜವಾಬ್) ಸಂಸ್ಥೆ ತನ್ನ೧೮ನೇ ವಾರ್ಷಿಕ ಮಹಾಸಭೆ ಇಂದಿಲ್ಲ್ಲಿ ಶನಿವಾರ ರಾತ್ರಿ ಅಂಧೇರಿ ಪಶ್ವಿಮದಲ್ಲಿನ ಪ್ಯಾಪಿಲಾನ್ ಪಾರ್ಕ್ ಹೊಟೇಲು ಸಭಾಗೃಹದಲ್ಲಿ ಜವಾಬ್‌ನ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿಸಿತು. ಮಹಾಸಭೆಯಲ್ಲಿ ಬೃಹನ್ಮುಂಬಯಿಯಲ್ಲಿನ ಹೆಸರಾಂತ, ಪ್ರತಿಷ್ಠಿತ ಲೆಕ್ಕ ಪರಿಶೋಧಕ ಸಿಎ| ಐ.ಆರ್ ಶೆಟ್ಟಿ ಅವರನ್ನು 2019-2021ನೇ ಸಾಲಿನ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡರು.

ಜವಾಬ್‌ನ ಉಪಾಧ್ಯಕ್ಷ ಸಿಎ| ಐ.ಆರ್ ಶೆಟ್ಟಿ, ಗೌರವ ಕಾರ್ಯದರ್ಶಿ ಕಿಶೋರ್‌ಕುಮಾರ್ ಶೆಟ್ಟಿ, ಗೌರವ ಕೋಶಾಧಿಕಾರಿ ಅಶೋಕ್‌ಕುಮಾರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಟಿ.ವಿಶ್ವನಾಥ್ ಶೆಟ್ಟಿ, ಜೊತೆ ಕೋಶಾಧಿಕಾರಿ ಹೆಚ್.ಶೇಖರ್ ಹೆಗ್ಡೆ ವೇದಿಕೆಯಲ್ಲಿ ಆಸೀನರಾಗಿದ್ದು, ಜಯಪ್ರಕಾಶ್ ಶೆಟ್ಟಿ ದೀಪ ಬೆಳಗಿಸಿ ಮಹಾಸಭೆಗೆ ಚಾಲನೆಯನ್ನಿತ್ತು ತಮ್ಮ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿದರು.
ಸಭೆಯಲ್ಲಿ ೨೦೧೯-೨೧ನೇ ಸಾಲಿನ ಕಾರ್ಯಕಾರಿ ಸಮಿತಿಗೆ ೨೬ ಸದಸ್ಯರ ಆಯ್ಕೆ ನಡೆಸಲ್ಪಟ್ಟಿದ್ದು ನ್ಯಾ| ರತ್ನಾಕರ ವಿ.ಶೆಟ್ಟಿ, ಮೋಹನ್ ಶೆಟ್ಟಿ, ರಮೇಶ್ ಎಂ.ಶೆಟ್ಟಿ, ವಿಜಯ್ ಎನ್.ಶೆಟ್ಟಿ, ಪ್ರಭಾಕರ ಕೆ.ಶೆಟ್ಟಿ, ನ್ಯಾ| ಪ್ರದೀಪ್ ಎ.ಶೆಟ್ಟಿ, ಸುಭಾಷ್ ಶೆಟ್ಟಿ, ಜಗದೀಶ್ ಬಿ.ಶೆಟ್ಟಿ, ಹೆಚ್.ಶೇಖರ್ ಹೆಗ್ಡೆ, ರಾಜೇಶ್ ಬಿ.ಶೆಟ್ಟಿ, ಪಿ.ವಿಶ್ವನಾಥ ಶೆಟ್ಟಿ, ನ್ಯಾ| ಡಿ.ಕೆ ಶೆಟ್ಟಿ, ಸುರೇಂದ್ರ ಕೆ.ಶೆಟ್ಟಿ, ವಾಮನ ಶೆಟ್ಟಿ, ಡಾ| ಪ್ರಭಾಕರ ಶೆಟ್ಟಿ ಬೋಳ, ಶ್ರೀಧರ ಡಿ.ಶೆಟ್ಟಿ, ಪ್ರವೀಣ್ ಕುಮಾರ್ ಆರ್.ಶೆಟ್ಟಿ, ವೆಂಕಟೇಶ್ ಎನ್.ಶೆಟ್ಟಿ, ಬಿ.ಆರ್ ಪೂಂಜ, ಮಧುಕರ್ ಎ.ಶೆಟ್ಟಿ, ಕಿಶೋರ್ ಕುಮಾರ್ ಶೆಟ್ಟಿ, ಮಹೇಶ್ ಎಸ್.ಶೆಟ್ಟಿ, ಅಶೋಕ್‌ಕುಮಾರ್ ಶೆಟ್ಟಿ, ಪಿ.ಭಾಸ್ಕರ ಶೆಟ್ಟಿ, ಭಾಸ್ಕರ ಶೆಟ್ಟಿ ಕಾರ್ನಾಡ್, ನ್ಯಾ| ಯು.ಶೇಖರ್ ಶೆಟ್ಟಿ ಆಯ್ಕೆಯಾದರು. ನ್ಯಾ| ಮಾಧವ ಎಂ.ಶೆಟ್ಟಿ ಆಯ್ಕೆ ಪ್ರಕ್ರಿಯೆ ನಡೆಸಿದ್ದು, ನ್ಯಾ| ಗುಣಪಾಲ ಡಿ.ಶೆಟ್ಟಿ ಆಯ್ಕೆಯಾದ ಸದಸ್ಯರ ಯಾದಿ ಪ್ರಕಟಿಸಿ ಶುಭಾರೈಸಿದರು. ನಿರ್ಗಮನ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಪುಷ್ಪಗುಪ್ಛವನ್ನಿತ್ತು ನೂತನ ಅಧ್ಯಕ್ಷ ಸಿಎ| ಐ.ಆರ್ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.

ಸಿಎ| ಐ.ಆರ್ ಶೆಟ್ಟಿ:
ರಾಷ್ಟ್ರದ ಆಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿನ ಹೆಸರಾಂತ, ಪ್ರತಿಷ್ಠಿತ ಲೆಕ್ಕ ಪರಿಶೋಧಕ ಎಂದೇ ಗುರುತಿಸಿ ಕೊಂಡಿರುವ ಸಿಎ| ಐ.ಆರ್ ಶೆಟ್ಟಿ ಮೂಲತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಇಲ್ಲಿನ ಪಡುಬಿದ್ರಿ ಅಂಜಾರು ಮನೆ ವಿಠಲ್ ಶೆಟ್ಟಿ ಮತ್ತು ಇನ್ನಬಗ್ಗರಗುತ್ತು ಗುಲಾಬಿ ಶೆಟ್ಟಿ ದಂಪತಿ ಸುಪುತ್ರ. ವಿಜಯಾ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾಥಿs. ಜವಾಬ್ ಸಂಸ್ಥೆಯಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಗೌರವ ಕೋಶಾಧಿಕಾರಿ ಆಗಿ ಬಂಟ್ಸ್ ಸಂಘದ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಮೂಹ ಪೊವಾಯಿ ಇದರ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಇದರ ಗೌರವ ಕೋಶಾಧಿಕಾರಿ ಆಗಿದ್ದ ಇವರು ಪ್ರಸ್ತುತ ಸಮಿತಿಯ ಉಪಾಧ್ಯಕ್ಷರಾಗಿರುವರು. ಅಂತೆಯೇ ರಾಷ್ಟ್ರ ಮಾನ್ಯತೆಯ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಸಲಹಾ ಸಮಿತಿ ಸದಸ್ಯ ಮತ್ತು ಲೆಕ್ಕ ಪರಿಶೋಧಕರೂ ಆಗಿ ಮತ್ತು ಫೆಡರೇಶನ್ ಆಫ್ ವರ್ಲ್ಡ್ ಬಂಟ್’ಸ್ ಅಸೋಸಿಯೇಶನ್’ಸ್‌ನ ವಿಶೇಷ ಆಮಂತ್ರಿತ ಸದಸ್ಯರಾಗಿಯೂ ಶ್ರಮಿಸುತ್ತಿದ್ದಾರೆ. ಪತ್ನಿ ಕವಿತಾ ಐಆರ್ ಸುಪುತ್ರಿಯರಾದ ಕು| ಭಕ್ತಿ ಐ.ಆರ್ ಶೆಟ್ಟಿ (ಬಂಟ ಸಮುದಾಯದ ಪ್ರಥಮ ಬಂಟ್ಸ್ ಪೈಲೆಟ್) ಮತ್ತು ಕು| ಕೃತಿ ಐ.ಆರ್ ಶೆಟ್ಟಿ (ಬಂಟ ಸಮುದಾಯದ ಪ್ರಥಮ ಬಂಟ್ಸ್ ಪೈಲೆಟ್), ಜಿತೇಶ್ ಹೆಚ್.ಶೆಟ್ಟಿ ಇವರೊಂದಿಗೆ ಸಾಂಸರಿಕ ಬದುಕು.

ಜವಾಬ್:
ಸುಮಾರು ಎರಡು ದಶಕಗಳ ಹಿಂದೆ ಮಹಾನಗರ ಮುಂಬಯಿಯ ಪ್ರಸಿದ್ದ ಪ್ರದೇಶವಾದ ಅಂಧೇರಿ ಪರಿಸರದ ಪ್ರತಿಷ್ಠಿತ ಬಂಟ ಮಹಾನೀಯರು ಬಂಟರ ಏಕತೆ, ಭವಿಷ್ಯತ್ತಿನ ಬದುಕು ಮನವರಿಸಿ ಅಸ್ತಿತ್ವಕ್ಕೆ ತಂದ ಜುಹೂ ಅಂಧೇರಿ ವರ್ಸೋವಾ ವಿಲೇಪಾರ್ಲೆ ಎಸೋಸಿಯೇಶನ್ ಆಫ್ ಬಂಟ್ಸ್ (ಜವಾಬ್) ಒಂದು ಪರಿಪೂರ್ಣ ಬಂಟ ಪರಿವಾಗಿ ರೂಪುಗೊಂಡಿತ್ತು. ಕರ್ನಾಟಕ ಕರಾವಳಿಯ ತುಳುನಾಡ ಬಂಟರ ಸಾಂಪ್ರಾದಾಯಿಕ ಉಡುಗೆ, ತೊಡುಗೆ, ಆಹಾರ ಪದ್ಧತಿ, ಧಾರ್ಮಿಕ ಆಚರಣೆ, ಬಂಟ ಪ್ರಧಾನ ಸತ್ಯದ ದೈವ ಜುಮಾದಿ ‘ಭಂಡಾರ’ದ ಮಹತ್ವ, ದೈವಾರಾಧನೆ ಇತ್ಯಾದಿಗಳ ಮಹತ್ವಕ್ಕೆ ಒತ್ತುನೀಡಿ ಬಂಟರ ಸಾಂಘಿತ್ವ, ಸಂಸ್ಕಾರ, ಸಂಪ್ರದಾಯ, ಪರಂಪರೆ ಚಿಂತನಾ ಭಾವನೆಯ ಮೂಲಕ ಪರಸ್ಪರ ಪ್ರೀತಿವಾತ್ಸಲ್ಯ ಮೂಡಿಸಿ ಯುವಜನತೆಯನ್ನು ಒಗ್ಗೂಡಿಸುವ ಉದ್ದೇಶದಿಂದ ಸ್ಥಾಪನೆಯಾದ ಜವಾಬ್ ಇಂದು ಯುವ ಸಂಸ್ಥೆಯಾಗಿ ಬೆಳೆದು ನಿಂತಿದೆ. ಆ ಮೂಲಕ ಬಂಟ ಸಂಸ್ಕೃತಿಯನ್ನು ಹಳೆ ತಲೆಮಾರಿನಿಂದ ನವ ಪೀಳಿಗೆಯಲ್ಲಿ ರೂಢಿಸಿ ಉಳಿಸಿ ಬೆಳೆಸಲು ಕಳೆದ ಹದಿನೆಂಟು ವರ್ಷಗಳಿಂದ ವಿಭಿನ್ನ ನೆಲೆಗಳಲ್ಲಿ ಶ್ರಮಿಸಿ ವಿಭಿನ್ನ ನೆಲೆಗಳಲ್ಲಿ ಶ್ರಮಿಸಿ ಬಂಟ ಸಂಸ್ಕೃತಿಯನ್ನು ಪರಿಚಯಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here