Sunday, April 7, 2024

ಷಹೇನ್‌ಷಾ ಪ್ರಸಿದ್ಧ ಪದ್ಮಶ್ರೀ ಅಮಿತಾಭ್ ಬಚ್ಚನ್ ಬಿಡುಗಡೆ ಗೊಳಿಸಿದ ಶಿವರಾಮ ಭಂಡಾರಿ ಕಾರ್ಕಳ ಜೀವನವನ್ನಾಧಾರಿತ ‘ಸ್ಟೈಲಿಂಗ್ ಆಟ್ ದ ಟಾಪ್’ ಕೃತಿ

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ: ಬಾಲಿವುಡ್ ಚಲನಚಿತ್ರರಂಗದ ಹೆಸರಾಂತ ಕೇಶ ವಿನ್ಯಾಸಕ ಶಿವಾ’ಸ್ ಹೇರ್ ಡಿಝೈನರ್‍ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ ಕಾರ್ಕಳ ಸಾಧಕನ ಯಶೋಗಾಥೆ, ಜೀವನ ಶೈಲಿಯನ್ನಾಧಾರಿತವಾಗಿ ಜಯಶ್ರೀ ಶೆಟ್ಟಿ ರಚಿತ ‘ಸ್ಟೈಲಿಂಗ್ ಅಟ್ ದ ಟಾಪ್’ ಕೃತಿಯನ್ನು ರಾಷ್ಟ್ರದ ಓರ್ವ ಅಪ್ರತಿಭಾನ್ವಿತ ಚಲನಚಿತ್ರ ನಟ ‘ಆಂಗ್ರಿ ಯಂಗ್ ಮ್ಯಾನ್’ ಇಮೇಜ್ ಜನಪ್ರಿಯತೆಯ ಬಿಗ್‌ಬೀ ಮತ್ತು ಷಹೇನ್‌ಷಾ ಹೆಸರಾಂತ ಪದ್ಮವಿಭೂಷಣ ಅಮಿತಾಭ್ ಬಚ್ಚನ್ ಬಿಡುಗಡೆ ಗೊಳಿಸಿದರು.

ಕಳೆದ ಗುರುವಾರ ರಾತ್ರಿ ಅಂಧೇರಿ ಪಶ್ಚಿಮದ ಜುಹೂ ಅಲ್ಲಿನ ಬಚ್ಚನ್ ಅವರ ಜನಕ್ ಬಂಗಲೋದಲ್ಲಿ ನಡೆಸಲ್ಪಟ್ಟ ಸರಳ ಕೃತಿ ಅನಾವರಣ ಕಾರ್ಯಕ್ರಮದಲ್ಲಿ ಹೆಸರಾಂತ ಲೇಖಕಿ ಜಯಶ್ರೀ (ಲೆಂಗಡೆ) ಶೆಟ್ಟಿ ರಚಿತ ‘ಸ್ಟೈಲಿಂಗ್ ಅಟ್ ದ ಟಾಪ್’ ಇಂಗ್ಲೀಷ್ ಕೃತಿಯನ್ನು ರಾಷ್ಟ್ರದ ಬಾಲಿವುಡ್ ಲೋಕದ ದಂತಕಥೆ ಪದ್ಮಶ್ರೀ ಅಮಿತಾಭ್ ಬಚ್ಚನ್ ಅನಾವರಣ ಗೊಳಿಸಿ ಶಿವರಾಮ ಭಂಡಾರಿ ಅವರಿಗೆ ಅಭಿನಂದಿಸಿದರು.

ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲ ಸಿಹೆಚ್ ವಿದ್ಯಾಸಾಗರ್ ರಾವ್, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್, ಶಿವಸೇನಾ ವರಿಷ್ಠ ನೇತಾರ ಉದ್ಧಾವ್ ಠಾಕ್ರೆ, ಪದ್ಮವಿಭೂಷಣ ಡಾ| ಡಿ.ವಿರೇಂದ್ರ ಹೆಗ್ಗಡೆ, ಬಾಲಿವುಡ್ ಚಲನಚಿತ್ರ ರಂಗದ ನಿರ್ದೇಶಕ ಮಧೂರ್ ಭಂಡಾರ್ಕರ್, ಸಿನೆಮಾ ತಾರೆ ರವೀನಾ ಟಂಡನ್, ನಟ ಸೋನೂ ಸೂದ್, ವಿಶ್ವದ ಅತ್ಯಂತ ಪ್ರಸಿದ್ಧ ಉತ್ಪಧನಾ ಸಂಸ್ಥೆ (ಪ್ರೊಫೆಶನಲ್ ಪ್ರಾಡೆಕ್ಟ್ಸ್) ಲಾ’ಒರೆಲ್ ಸಂಸ್ಥೆಯ ನಿರ್ದೇಶಕ ಅಸೀಮ್ ಕೌಶಿಕ್, ಭಂಡಾರಿ ಮಹಾಮಂಡಲ (ಭಂಡಾರಿ ವಿಶ್ವ ಮಂಡಲ) ಇದರ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಅರ್ಚಕ ನಾಗರಾಜ ಜಿ.ಭಟ್ ಕೆಲ್ಲಪುತ್ತಿಗೆ ಮತ್ತಿತರ ಗಣ್ಯರ ಸಂದೇಶಗಳನ್ನೊತ್ತ, ಹೆಸರಾಂತ ಮರಾಠಿ ದೈನಿಕ ‘ಸಾಮ್ನಾ’ದಲ್ಲಿ ಪ್ರಕಟವಾದ ‘ಶಿವಾ ಕಿ ಕೈಂಚಿ ಬೋಲ್ತಿ ಹೈ’ ಲೇಖನ ಒಳಗೊಂಡಿರುವ ಈ ಕೃತಿ ಭಾವಿ ಮೆಹ್ತಾ ರಚಿತ ಮುಖಪುಟದೊಂದಿಗೆ ಪ್ರಕಟಗೊಂಡಿದೆ. ಮಂಜುಳಾ ಪಬ್ಲಿಷಿಂಗ್ ಹೌಸ್ ಭೋಪಾಲ್ (ಅಮರಿಲ್ಲಿಸ್) ಪ್ರಕಾಶಿತ ಈ ಕೃತಿಯ ಭಾರತ ರಾಷ್ಟ್ರದೊಳಗಿನ ಮುದ್ರಣವನ್ನು ಥೊಮ್ಸನ್ ಪ್ರೆಸ್ ಇಂಡಿಯಾ ಲಿಮಿಟೆಡ್ ಅಚ್ಚುಮಾಡಿದ್ದು, ಹಾರ್ಪರ್‌ಕೊಲ್ಲೀನ್‌ಸ್ ಸಂಸ್ಥೆಯು ಈ ಪುಸ್ತಕವನ್ನು ಮಾರುಕಟ್ಟೆಗೆ ಒದಗಿಸುತ್ತಿದೆ. ಜಾಗತಿಕ ಮಾನ್ಯತೆಯ ವಾಟರ್‌ಸ್ಟೋನ್ಸ್ ಡಾಟ್‌ಕಾಂ, ಅಮೆಝನ್, ಫ್ಲಿಪ್‌ಕಾರ್ಟ್ ಸೇರಿದಂತೆ ವಿಶ್ವದ ನೂರಾರು ಆನ್‌ಲೈನ್‌ಗಳಲ್ಲೂ ಈ ಕೃತಿ ಓದುಗರಿಗೆ ಲಭ್ಯವಿದೆ.

ಈ ಸಂದರ್ಭದಲ್ಲಿ ಗೋಪಾಲ್ ಶೆಟ್ಟಿ, ಪ್ರವೀಣ್ ಜೈನ್, ರಘು ಭಂಡಾರಿ, ಅನುಶ್ರೀ ಶಿವರಾಮ್, ಮಾ| ರೋಹಿಲ್ ಎಸ್.ಭಂಡಾರಿ ಮತ್ತು ಕು| ಆರಾಧ್ಯ ಎಸ್.ಭಂಡಾರಿ ಉಪಸ್ಥಿತರಿದ್ದರು. ಕೇಶಶೈಲಿಯ ತುತ್ತತುದಿಯಲಿ (ಶಿವರಾಮ ಭಂಡಾರಿ ಜೀವನ ಪಯಣ) ಕನ್ನಡ ಅನುವಾದಿತ ಮತ್ತು ಮರಾಠಿ ಭಾಷಾಂತರಿತ ಕೃತಿಗಳೂ ಶೀಘ್ರದಲ್ಲೇ ಬಿಡುಗಡೆ ಗೊಳ್ಳಲಿವೆ ಎಂದು ಲೇಖಕಿ ಜಯಶ್ರೀ ಶೆಟ್ಟಿ ತಿಳಿಸಿದರು.

ಮುಂಬಯಿಯ ಫಿಲ್ಮ್‌ಸಿಟಿಯಲ್ಲಿ ಕೆಬಿಸಿ ಸೆಟ್‌ನಲ್ಲಿ ಮಹಾನಟ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಕ್ಷೌರ್ಯ ವಿನ್ಯಾಸ ಮಾಡಿದ್ದಲ್ಲದೆ ಅಮಿತಾಭ್ ಅವರ ‘ಕೌನ್ ಬನೇಗಾ ಕರೋಡ್‌ಪತಿ’ ಧಾರಾವಾಹಿ ಸಂದರ್ಭದಲ್ಲಿ ಬಚ್ಚನ್ ಅವರ ಗಡ್ಡದ ವಿನ್ಯಾಸ ಶಿವರಾಮ ಅವರು ಓರ್ವ ಗ್ರಾಹಕರ ತಲೆಯಲ್ಲಿ ಸಿದ್ಧಪಡಿಸಿ ಭಾರೀ ಪ್ರಸಿದ್ಧಿಗೆ ಪಾತ್ರವಾಗಿದ್ದರು. ಕಳೆದ ಸುಮಾರು ಮೂರು ದಶಕಗಳಿಂದ ಮುಂಬಯಿಯಲ್ಲಿ ಕೇಶವಿನ್ಯಾಸ ವೃತ್ತಿ ನಡೆಸಿ ಸ್ವಾಭಿಮಾನದಿಂದ ಉದ್ಯಮದಲ್ಲಿ ಅಪ್ರತಿಮ ಸಾಧನೆ ಮಾಡಿ, ವಿವಿಧ ಪ್ರಶಸ್ತಿಗಳಿಗೆ ಪಾತ್ರರಾಗಿ ಕೇಶವಿನ್ಯಾಸದ ಅಪ್ರತಿಮಾ ಸಾಧನೆಗಾಗಿ ಜಾಗತಿಕ ಸಾಧಕ ಉದ್ಯಮಶೀಲರ ಘಟಿಕೋತ್ಸವದಲ್ಲಿ ಯುರೋಪಿಯನ್ ಕಾಂಟಿನೆಂಟಲ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪದವಿ ಮುಡಿಗೇರಿಸಿಕೊಂಡಿರುವರು. ಕೂದಲಂದಣಿಗರಾಗಿದ್ದು ಕುಲಕಸಬು ಕೇಶವೃತ್ತಿಯನ್ನು ಜಾಗತಿಕವಾಗಿ ಪರಿಚಯಿಸಿದ ಇವರ ಸಾಧನೆ ಪರಿಗಣಿಸಿ ಇತ್ತೀಚೆಗೆ ಲಂಡನ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಬ್ರಿಟಿಷ್‌ನ ಪಾರ್ಲಿಮೆಂಟೇರಿಯನ್ ಶಿವರಾಮ ಭಂಡರಿಗೆ ಪ್ರತಿಷ್ಠಿತ ‘ಭಾರತ್ ಗೌರವ್’ (ಜೀವಮಾನ ಸಾಧನೆ) ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಿದ್ದರು. ಸದ್ಯ ಮುಂಬಯಿ ವಾಲ್ಕೇಶ್ವರ ಇಲ್ಲಿನ ರಾಜಭವನದ ಸನಿಹದಲ್ಲಿನ ಸ್ವಿಸ್ ಅಲಂಕಾರದ ಶಿವಾಸ್ ಸಿಗ್ನೇಚರ್ ಸಲೂನ್ ಇದೀಗ ಭಾರೀ ಜನಮನ್ನಣೆಗೆ ಪಾತ್ರವಾಗಿದ್ದಾರೆ.

ಡಾ| ಶಿವರಾಮ ಕೃಷ್ಣ ಭಂಡಾರಿ:
ದಕ್ಷಿಣ ಕನ್ನಡ ಕಾರ್ಕಳ ಅತ್ತೂರು ಧರೆಗುಡ್ಡೆ ನಿವಾಸಿ ಶಿವರಾಮ ಕೃಷ್ಣ ಭಂಡಾರಿ ಮುಂಬಯಿಯಲ್ಲಿ ಹೇರ್ ಸ್ಟೈಲೋ ಮೂಲಕ ಪ್ರಸಿದ್ಧಿ ಗಿಟ್ಟಿಸಿ ಕೊಂಡಿರುವ ಹೆಸರಾಂತ ಕೇಶ ವಿನ್ಯಾಸ ಸಂಸ್ಥೆ ಶಿವಾ’ಸ್ ಹೇರ್ ಡಿಝೈನರ್‍ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ. ಕರ್ನಾಟಕ ಕರಾವಳಿಯ (ತುಳುನಾಡ) ಭಂಡಾರಿ ಸಮುದಾಯದಲ್ಲಿ ಹುಟ್ಟಿ ಬೆಳೆದ ಹಳ್ಳಿ ಹುಡುಗನೋರ್ವ ಅಖಂಡ ಭಂಡಾರಿ ಸಮಾಜಕ್ಕೆ ಕೀರ್ತಿಯನ್ನೊದಗಿಸಿದ ಇವರ ಸಾಧನೆ ಸರ್ವರಿಗೂ ಮಾದರಿ. ಹೇರ್ ಕಟ್ಟಿಂಗ್ ಸಲೂನ್‌ಗೆ ಹೊಸ ಆಯಾಮ ನೀಡಿ ತನ್ನ ಕ್ಷೌರಉದ್ಯಮವನ್ನು ಪ್ರೈವೇಟ್ ಲಿಮಿಟೆಡ್ ಮೂಲಕ ಶಿವಾಸ್ ಹೇರ್ ಸ್ಟೈಲೋ ಡಿಸೈನರ್ ಹೆಸರಿನೊಂದಿಗೆ ಥಾಣೆ, ಜುಹೂ, ಮುಲುಂಡ್, ಅಂಧೇರಿ ಲೊಖಂಡ್‌ವಾಲ, ಅಂಧೇರಿ ಪಶ್ಚಿಮ, ಮಲಾಡ್ ಮತ್ತು ಮೂಡಬಿದ್ರೆ ನಗರದಲ್ಲೂ ತೆರೆದಿರುತ್ತಾರೆ.

೧೯೯೮ರಲ್ಲಿ ಉಪನಗರ ಥಾಣೆಯಲ್ಲಿ ಕಿರಿದಾದ ಸ್ವಂತ ಅಂಗಡಿ ಆರಂಭಿಸಿ ಇದೀಗ ನೂರಾರು ಪರಿಣತ ಕೇಶವಿನ್ಯಾಸಕರು ಮತ್ತು ಸೌಂದರ್ಯಕಾರರನ್ನು ಹೊಂದಿದ್ದಾರೆ. ಅಲ್ಲದೆ ಶಿವರಾಮ್ ಭಂಡಾರಿ ಸ್ವಂತಿಕೆಯ ಶಿವಾ’ಸ್ ಟ್ರೆಂಡ್ ಹೆಸರಿನಲ್ಲಿ ಸೌಂದರ್ಯ ಸಾಮಾಗ್ರಿಗಳನ್ನು ರಚಿಸಿ ಕೇಶವಿನ್ಯಾಸ ಉದ್ಯಮದ ಸಾಧಕ. ಸದಾ ತೆರೆಯ ಮರೆಯಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಶಿವರಾಮ ಅವರು ತಾಯಿ ಗುಲಾಬಿ ಕೃಷ್ಣ ಭಂಡಾರಿ, ಪತ್ನಿ ಅನುಶ್ರೀ ಭಂಡಾರಿ ಮಕ್ಕಳಾದ ಮಾ| ರೋಹಿಲ್ ಭಂಡಾರಿ ಹಾಗೂ ಕು| ಆರಾಧ್ಯ ಭಂಡಾರಿ ಇವರೊಂದಿಗೆ ಗೋರೆಗಾಂವ್‌ನಲ್ಲಿ ವಾಸವಾಗಿದ್ದಾರೆ.

ಸ್ವಸಮುದಾಯದ ಕುಲಕಸಬುವನ್ನೇ ಆರಿಸಿ ತಾನೊಬ್ಬನೇ ಕಾರ್ಮಿಕನೂ ಮಾಲಿಕನೂ ಆಗಿ ಸ್ವಂತ ಉದ್ಯಮವನ್ನಾ ಗಿಸಿ ಕೇಶವಿನ್ಯಾಸ ವೃತ್ತಿಯಿಂದ ದೈನಂದಿನ ೩೦ ರೂಪಾಯಿ ಆದಾಯ ಗಳಿಕೆಯಿಂದ ಸ್ವಂತ ಅಂಗಡಿ ಆರಂಭಿಸಿ ಸದ್ಯ ಸುಮಾರು ೨೦ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸಲೂನ್‌ಗಳನ್ನು ಸ್ಥಾಪಿಸಿ ಓರ್ವ ಕೇಶವಿನ್ಯಾಸಕರಾಗಿ ಪ್ರಸ್ತುತ ಸರ್ವೋತ್ಕೃಷ್ಟ ಯುವೋದ್ಯಮಿ ಆಗಿ ಆಧುನಿಕ ಯುಗಕ್ಕೆ ಮಾದರಿ ಉದ್ಯಮಿ ಆಗಿರುವುದನ್ನು ಪರಿಗಣಿಸಿ ಆಪ್ಟಿಮಲ್ ವಿಡಿಯಾ ಸೊಲ್ಯೂಶನ್‌ಸ್ ಸಂಸ್ಥೆ ಟೈಂಮ್ಸ್ ಪವರ್ ಮೆನ್ ಪ್ರಸ್ತುತ ಪಡಿಸಿದ ವಾರ್ಷಿಕ ಪುರಸ್ಕಾರ ‘ಗ್ರೂಮಿಂಗ್ ಎಕ್ಸ್‌ಪರ್ಟ್ ಆಫ್ ದ ಈಯರ್-೨೦೧೮’ ಪ್ರಶಸ್ತಿ ಪ್ರದಾನಿಸಿದೆ. ಇತ್ತೀಚೆಗೆ ಲಂಡನ್‌ನಲ್ಲಿ ಗ್ಲೋಬಲ್ ಲೀಡರ್‍ಸ್ ಸಂಸ್ಥೆಯು ಗ್ಲೋಬಲ್ ಲೀಡರ್‍ಸ್ ಆವಾರ್ಡ್ ಎಂಟರ್‌ಪ್ರೈಸ್ ಎಡಿಶನ್’ ಆಯೋಜಿಸಿದ್ದ ಸಂಸ್ಕೃತಿ ಉತ್ಸವದಲ್ಲಿ ‘ಭಾರತ ಗೌರವ ಜೀವಮಾನ ಪ್ರಶಸ್ತಿ-೨೦೧೯’ ಪ್ರದಾನಿಸಿ ಗೌರವಿಸಿದೆ.

ತೀರಾ ಸರಳ ಸ್ವಭಾವದ ಶಿವ ಬಾಲ್ಯದಲೇ ಮುಂಬಯಿ ಸೇರಿ ಸಲೂನ್‌ನಲ್ಲಿ ಕೆಲಸ ನಿರ್ವಹಿಸುತ್ತಾ ತನ್ನ ಸಾಧನೆಯಿಂದ ಇಂದು ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವರು. ೧೯೯೮ರ ಸಾಲಿನ ಸೆಲೂನ್ ಇಂಟರ್‌ನ್ಯಾಶನಲ್ ಪುರಸ್ಕಾರದಲ್ಲಿ ವಿಶ್ವದ ಖ್ಯಾತ ೪೮ ಪ್ರತಿಷ್ಠಿತ ಕೇಶ ವಿನ್ಯಾಸಗಾರರಲ್ಲಿ ಭಾರತೀಯರಾಗಿ ಶಿವರಾಮ ಭಂಡಾರಿ ಪುರಸ್ಕೃತರಾಗಿದ್ದರು.

ಬಾಲಿವುಡ್‌ನ ಹೆಸರಾಂತ ಕೇಶ ರೂಪಕ ಎಂದೇ ಪ್ರಸಿದ್ಧಿಯ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರು ಧರೆಗುಡ್ಡೆ ನಿವಾಸಿ ಶಿವರಾಮ ಅವರು ೧೯೯೮ರ ಸಾಲಿನ ಸೆಲೂನ್ ಇಂಟರ್‌ನ್ಯಾಶನಲ್ ಪುರಸ್ಕಾರದಲ್ಲಿ ವಿಶ್ವದ ಖ್ಯಾತ ೪೮ ಪ್ರತಿಷ್ಠಿತ ಕೇಶ ವಿನ್ಯಾಸಗಾರರಲ್ಲಿ ಶಿವಾ’ಸ್ ಭಾರತೀಯನಾಗಿ ಪುರಸ್ಕೃತರೆಣಿಸಿ ಹೇರ್ ಕಟ್ಟಿಂಗ್ ಸಲೂನ್‌ಗೆ ಹೊಸ ರೂಪ ನೀಡಿ ತನ್ನ ಉದ್ಯಮವನ್ನು ಮೇಲ್ದರ್ಜೆಗೆರಿಸಿ ಶಿವಾಸ್ ಹೇರ್ ಸ್ಟೈಲೋ ಡಿಸೈನರ್ ನಗರದದ್ಯಾಂತ ವೃತ್ತಿನಿರತರಾಗಿದ್ದಾರೆ. ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯ ಪದಾಧಿಕಾರಿಯಾಗಿ ಸೇವಾ ನಿರತ ಶಿವರಾಮ ಸದಾ ತೆರೆಯ ಮರೆಯಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿರುವ ಮಿತಭಾಷಿ ಆಗಿದ್ದಾರೆ.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...