ವಿಟ್ಲ: ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಿಟ್ಲ ಇದರ ಆಶ್ರಯದಲ್ಲಿ ಪೋಷಣ್ ಅಭಿಯಾನ- ೨೦೧೯’ ಕಾರ್ಯಕ್ರಮವು ಪುಣಚ ಗ್ರಾಮದ ಮೂಡಂಬೈಲು ಸರವು ಅಂಗನವಾಡಿ ಕೇಂದ್ರದಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ್ ಶೆಟ್ಟಿಯವರು ನೆರವೇರಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾದ ಸುಧಾ ಜೋಷಿ ಮಾತನಾಡಿ, ಅಂಗನವಾಡಿ ಕೇಂದ್ರದಲ್ಲಿ ಬೆಳೆಸಲಾದ ಕೃಷಿ, ಹಣ್ಣು ಹಂಪಲುಗಳ, ಅಂಗನವಾಡಿ ಕೇಂದ್ರದ ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಪೌಷ್ಟಿಕ ತರಕಾರಿ, ಸೊಪ್ಪು, ಹಣ್ಣುಗಳು ಮಾನವನ ಆರೋಗ್ಯಕ್ಕೆ ತುಂಬಾ ಪ್ರಾಮುಖ್ಯ ಎಂದು ಹೇಳಿದರು.
ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ಕವಿತಾ ಎಸ್. ನಾಯ್ಕ, ಪಂಚಾಯತ್ ಸದಸ್ಯರುಗಳಾದ ಸಂಜೀವ ಮಡಿವಾಳ, ಮೋಹಿನಿ ಯಂ ವಿವಿಧ ವಲಯಗಳ ವಲಯ ಮೇಲ್ವೀಚಾರಕಿಯರು, ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರು, ಬಾಲವಿಕಾಸ ಸಮಿತಿ ಅಧ್ಯಕ್ಷರಾದ ನಿರೂಪ, ಸಮಿತಿ ಸದಸ್ಯರು, ಸ್ತ್ರಿ ಶಕ್ತಿ ಗುಂಪಿನ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಮಕ್ಕಳ ಪೋಷಕರಾದ ವೈಶಾಲಿ ಮತ್ತು ಮನೆಯವರು ಅಂಗನವಾಡಿ ಕೇಂದ್ರಕ್ಕೆ ಮಿಕ್ಸಿ ಕೊಡುಗೆಯಾಗಿ ನೀಡಿದರು.
ಅಶ್ವಿನಿ. ಎ ಸ್ವಾಗತಿಸಿದರು. ಸರವು ಅಂಗನವಾಡಿ ಕೇಂದ್ರದ ಶಿಕ್ಷಕಿ ಹೇಮಮಾಲಿನಿ ವಂದಿಸಿದರು. ವಲಯ ಮೇಲ್ವೀಚಾರಕಿ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.