ವಿಟ್ಲ: ಸೇವಾ ವಲಯದಲ್ಲಿ ಕೆಲಸ ಮಾಡುತ್ತಿರುವ ನಾವು ನಮ್ಮೊಳಗೆ ಉತ್ತಮ ವಿಚಾರವನ್ನು ಮುಂದಿಟ್ಟುಕೊಂಡು ಸ್ಪರ್ಧಾ ಮನೋಭಾವದಿಂದ ಮುನ್ನಡೆದಾಗ ಉತ್ತಮ ಸೇವೆಯನ್ನು ನೀಡಲು ಸಾಧ್ಯ ಎಂದು ವಿಟ್ಲ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರವೀಣ್ ಜೋಷಿ ಹೇಳಿದರು.
ಅವರು ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ವಿಟ್ಲ ಮೆಸ್ಕಾಂ ಉಪವಿಭಾಗದ ಅಧಿಕಾರಿಗಳು, ನೌಕರರ ಸಂಘ ಹಾಗೂ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಆಶ್ರಯದಲ್ಲಿ ನಡೆದ ೮ ನೇ ವರ್ಷದ ದಸರಾ ಕ್ರೀಡಾ ಕೂಟದ ಸಭಾಧ್ಯಕ್ಷತೆ ವಹಿಸಿ ಮಾತಾಡಿದರು.
ಕಾರ್ಯಕ್ರಮವನ್ನು ಬಂಟ್ವಾಳ ಮೆಸ್ಕಾಂ ವಿಭಾಗೀಯ ಕಚೇರಿಯ ಲೆಕ್ಕಾಧಿಕಾರಿ ಚಂದ್ರಶೇಖರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಕೆಪಿಟಿಸಿಎಲ್ ವೃತ್ತದ ಸಂಘಟನಾ ಕಾರ್ಯದರ್ಶಿ ಶಂಕರ ಪ್ರಕಾಶ್, ಜಿಲ್ಲಾ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯ ಬಾಲಕೃಷ್ಣ ಸೆರ್ಕಳ, ವಿಟ್ಲ ಉಪ ಸಮಿತಿ ಉಪಾಧ್ಯಕ್ಷ ಕೃಷ್ಣ ಬನಾರಿ, ಕೆಪಿಟಿಸಿಎಲ್‌ನ ರಾಜ್ಯ ಮಟ್ಟದ ಆಟಗಾರ ಕೀರ್ತಿ ಕಪೂರ್, ವಿಟ್ಲ ಮೆಸ್ಕಾಂನ ಸಹಾಯಕ ಲೆಕ್ಕಾಧಿಕಾರಿ ನೆಲ್ಸನ್ ನವೀನ್ ಕುಮಾರ್, ಸಹಾಯಕ ಇಂಜೀನೀಯರ್ ಶಶಾಂಕ್, ದೇವಿಕಿರಣ್, ಮೇಲ್ವಿಚಾರಕಿ ಗೀತಾ, ಜಯಂತಿ, ಉದಯಕುಮಾರ್ ಭಾಗವಹಿಸಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವಿಟ್ಲ ಉಪ ಸಮಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ ಅಡ್ಯಂತಾಯ ಬಹುಮಾನಗಳನ್ನು ವಿತರಿಸಿದರು. ಬಾಬು ಮೂಲ್ಯ ಮತ್ತು ಜಾನ್ ಉಪಸ್ಥಿತರಿದ್ದರು. ವಿಟ್ಲ ಮೆಸ್ಕಾಂನ ಸಹಾಯಕ ಇಂಜಿನೀಯರ್ ಸತೀಶ್ ಸಪಲ್ಯ ಸ್ವಾಗತಿಸಿದರು. ಕೆಪಿಟಿಸಿಎಲ್ ನೌಕರರ ಸಂಘದ ಪ್ರಾಥಮಿಕ ಸಮಿತಿ ಅಧ್ಯಕ್ಷ ಪದ್ಮನಾಭ ಅಡ್ಯೇಯಿ ಕಾರ್ಯಕ್ರಮ ನಿರೂಪಿಸಿದರು. ಉಕ್ಕುಡ ಶಾಖಾಧಿಕಾರಿ ಆನಂದ ವಂದಿಸಿದರು.
ಕ್ರೀಡಾಕೂಟದ ವಾಲಿಬಾಲ್ ಪಂದ್ಯಾಟದಲ್ಲಿ ವಿಟ್ಲ ಕೆಪಿಟಿಸಿಎಲ್ ಪ್ರಥಮ, ಎಲ್‌ಇಸಿ ದ್ವಿತೀಯ ಪಡೆದರೆ, ಕ್ರಿಕೆಟ್‌ನಲ್ಲಿ ಸಾಲೆತ್ತೂರು ಶಾಖೆ ಪ್ರಥಮ, ಉಕ್ಕುಡ ಶಾಖೆ ದ್ವಿತೀಯ, ಕಬಡ್ಡಿ ಪಂದ್ಯಾಟದಲ್ಲಿ ವಿಟ್ಲ ಕೆಪಿಟಿಸಿಎಲ್ ಪ್ರಥಮ ಸ್ಥಾನಿಯಾದರೆ, ಉಕ್ಕುಡ ಶಾಖೆ ದ್ವಿತೀಯ, ಹಗ್ಗಜಗ್ಗಾಟದಲ್ಲಿ ವಿಟ್ಲ ಕೆಪಿಟಿಸಿಎಲ್ ಪ್ರಥಮ ಮತ್ತು ಸಾಲೆತ್ತೂರು ಶಾಖೆ ದ್ವಿತೀಯ ಸ್ಥಾನ ಪಡೆಯಿತು.